ವಿಜಯನಗರದಲ್ಲಿ ಗುರು ಪೂರ್ಣಿಮಾ ಆಚರಣೆ

Jul 13, 2025 - 10:12
 0
ವಿಜಯನಗರದಲ್ಲಿ ಗುರು ಪೂರ್ಣಿಮಾ ಆಚರಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಂಗಳೂರು:  ವಿಜಯನಗರದ ಹಂಪಿನಗರದ 5ನೇ ಮುಖ್ಯರಸ್ತೆಯಲ್ಲಿರುವ ಆರ್ ಪಿಸಿ ಲೇಔಟ್ ನ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಇತ್ತಿಚೆಗೆ ಗುರು ಪೂರ್ಣಿಮಾ ಜರುಗಿತು.

ಈ ವೇಳೆ ಕಾಕಡಾರತಿ, ಮಹಾಭೀಷೇಕ, ಅಲಂಕಾರ, ಚೋಟ ಆರತಿ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನದ ಆರತಿ, ಅನ್ನ ಸಂತರ್ಪಣೆ, ಧೂಪಾರತಿ, ಶೇಷಾರತಿ ಹೀಗೆ ಹಲವು ಕಾರ್ಯಕ್ರಮಗಳು ನಡೆದವು.

ಬೃಹತ್ ಅಲಂಕಾರದಿಂದ ಕೂಡಿದ ಸಾಯಿಬಾಬಾ ಮಂದಿರದಲ್ಲಿ ಸಾವಿರಾರು ಭಕ್ತರು ಬಾಬಾರ ದರ್ಶನ ಪಡೆದರು. ಇದೇ ವೇಳೆ ಭಕ್ತಾದಿಗಳು ತಾವೇ ಹಾಲಿನ ಅಭಿಷೇಕ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತ, ಉದ್ದಿಮೆದಾರ ಕಿರಣ್ ಶೆಟ್ಟಿ ಅವರು ಭಕ್ತ ಸಮೂಹಕ್ಕೆ ಸಿಹಿ ಪದಾರ್ಥ ವಿತರಿಸುವ ಮೂಲಕ ತಮ್ಮ ಭಕ್ತಿ ಸೇವೆ ಮೆರೆದರು.

ನಂತರ ದೇವಾಲಯದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. 

ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಕೃಷ್ಣಪ್ಪ, ಪ್ರೀಯ ಕೃಷ್ಣ, ಮಾರುತಿ ಯುವ ಸೇನಾ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಮಂಜುನಾಥ್, ಗುತ್ತಿಗೆದಾರ ವಸಂತ, ಸೇರಿದಂತೆ ರಾಜಕೀಯ ಗಣ್ಯರು, ವಿಜಯನಗರದ ಭಕ್ತರು ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.