ಕಾಲೇಜು ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ

ಹಾಡಹಗಲೇ ಘಟನೆ | ಉಪನ್ಯಾಸಕಿ ತಾಯಿಯನ್ನು ಎಳೆದಾಡಿದ ವ್ಯಕ್ತಿ : ಬಾಡಿಗೆ ಕೇಳುವ ನೆಪದಲ್ಲಿ ಬಂದ ಆಗುಂತಕನಿ0ದ ದಾಳಿ

Jun 22, 2025 - 10:04
 0
ಕಾಲೇಜು ಉಪನ್ಯಾಸಕಿ ಮೇಲೆ ಮಾರಣಾಂತಿಕ ಹಲ್ಲೆ
ಮುದ್ದೇಬಿಹಾಳ ಪಟ್ಟಣದ ಎಂ.ಜಿ.ವಿ.ಸಿ ಪದವಿ ಕಾಲೇಜಿನ ಹಿಂದಿ ಉಪನ್ಯಾಸಕಿ ಸುಮಂಗಲಾ ಅಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವೇಳೆ ಅವರ ತಾಯಿ ಸಂತೈಸುತ್ತಿರುವುದು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ಮುದ್ದೇಬಿಹಾಳ ಮನೆ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದ ಆಗುಂತಕನೊಬ್ಬ ಕಾಲೇಜು ಉಪನ್ಯಾಸಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆಗೈದು ತಡೆಯಲು ಹೋದ ಉಪನ್ಯಾಸಕಿ ತಾಯಿಯನ್ನು ಎಳೆದಾಡಿದ ಘಟನೆ ಪಟ್ಟಣದ ಸಾಯಿ ನಗರದ ಹೇಮರಡ್ಡಿ ದೇವಸ್ಥಾನದ ಹಿಂಭಾಗದಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.


ಘಟನೆ ವಿವರ : ಮುದ್ದೇಬಿಹಾಳ ಪಟ್ಟಣದ ಎಂ.ಜಿ.ವಿ.ಸಿ ಕಾಲೇಜಿನ ಉಪನ್ಯಾಸಕಿ ಸುಮಂಗಲಾ ಅಂಗಡಿ(೪೬) ಆಗುಂತಕ ವ್ಯಕ್ತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರು. ಪಿಎಸ್‌ಐ ಸಂಜಯ ತಿಪರೆಡ್ಡಿ ಅವರ ಎದುರಿಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಂಬ್ಯುಲೆನ್ಸ್ನಲ್ಲಿ ಬಾಗಲಕೋಟ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಘಟನೆಯ ಸಂದರ್ಭವನ್ನು ವಿವರಿಸಿದ ಉಪನ್ಯಾಸಕಿ ಸುಮಂಗಲಾ, ಎರಡು ದಿನದ ಹಿಂದೆ ವ್ಯಕ್ತಿಯೊಬ್ಬ ಮನೆ ಬಾಡಿಗೆ ಕೇಳಿಕೊಂಡು ಬಂದಿದ್ದ.ಕೊಠಡಿ ಖಾಲಿ ಇದೆ ಎಂದು ತಿಳಿಸಿದ್ದೇವು.ಶನಿವಾರ ಮದ್ಯಾಹ್ನದ ಹೊತ್ತಿಗೆ ಮನೆ ಬಾಡಿಗೆ ಕೇಳುವ  ನೆಪದಲ್ಲಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದ ಆತನಿಗೆ ಮನೆಯ ಮೇಲಿನ ಮಹಡಿ ಖಾಲಿ ಇದ್ದು ಬಾಡಿಗೆಗೆ ನೋಡುವಂತೆ ತಿಳಿಸಿದೆವು. ಆತ ಮನೆಯ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ಮೊದಲು ಮನೆಯ ಪೂರ್ತಿ ಫೋಟೋ ತಗೆದುಕೊಂಡು ನಂತರ ಬಾಡಿಗೆ ಇರುವ ಕೊಠಡಿಯ ಫೋಟೋ ಬೇಕು ಎಂದ. ಅದಕ್ಕೆ ನಾವು ಕೊಠಡಿಯ ಫೋಟೋ ಯಾವುದಕ್ಕೆ ಎಂದು ಪ್ರಶ್ನಿಸಿದಾಗ ತಮ್ಮ ಕಂಪನಿಯವರಿಗೆ ತೋರಿಸಬೇಕು ಎಂದು ತಿಳಿಸಿದ.ಮೇಲಿನ ಮಹಡಿ ಕೊಠಡಿಗೆ ಹೋಗುತ್ತಿದ್ದಂತೆ ಏಕಾಏಕಿ ನನ್ನ ಮುಖಕ್ಕೆ ಬಲವಾಗಿ ಗುದ್ದಲು ಶುರು ಮಾಡಿದ.ಇದರಿಂದ ಗಾಬರಿಯಾಗಿ ನಾನು ನನ್ನ ತಾಯಿಯನ್ನು ಕೂಗಿದಾಗ ಅವರು ಓಡಿ ಬಂದು ನೋಡುವಷ್ಟರಲ್ಲಿ ತಾಯಿಯವರಿಗೂ ಆತ ಹೊಡೆದಿದ್ದಾನೆ.ಅವರ ಕನ್ನಡಕ ನೆಲಕ್ಕೆ ಬಿದ್ದು ಒಡೆದಿದ್ದು ಅವರು ಹೊರಗೆ ಹೋಗಿ ಓಣಿಯ ಜನರನ್ನು ಕರೆಯಲು ಯತ್ನಿಸುತ್ತಾರೆ ಎಂದು ಅವರನ್ನು ಎಳೆದಾಡಿ ಬಟ್ಟೆ ಹರಿದಿದ್ದಾನೆ.ಘಟನೆಯಿಂದ ನಮಗೆ ತುಂಬಾ ಗಾಬರಿಯಾಗಿದ್ದು ಆತನನ್ನು ಬಿಡಬೇಡಿ’ಎಂದು ಹೇಳಿಕೊಂಡಿದ್ದಾರೆ.ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ಬಳಿಕವೇ ಆತ ಏಕೆ ಹೋಗಿದ್ದ ಎಂಬ ಮಾಹಿತಿ ತಿಳಿದು ಬರಲಿದೆ.


ಹಾಡಹಗಲೇ ನಡೆದ ಘಟನೆಯಿಂದ ಪಟ್ಟಣದ ಜನತೆ ಆತಂಕಗೊAಡಿದ್ದು ಮನೆಯಲ್ಲಿ ಒಂಟಿ ಮಹಿಳೆಯರು ಇದ್ದಾಗ ಘಟನೆ ನಡೆದಿರುವುದು ಜನರನ್ನು ಭಯಭೀತರನ್ನಾಗಿಸಿದೆ.ಗಾಯಗೊಂಡಿದ್ದ  ಉಪನ್ಯಾಸಕಿ ಸುಮಂಗಲಾ ಹಾಗೂ ಅವರ ತಾಯಿ ವಿಜಯಲಕ್ಷಿö್ಮÃ ಅಂಗಡಿ ಅವರನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳಿಂದ ಸಾಂತ್ವನ : ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸರಕಾರಿ ಆಸ್ಪತ್ರೆಗೆ ಆಗಮಿಸಿದ ಎಂ.ಜಿ.ವಿ.ಸಿ ಕಾಲೇಜಿನ ಕಾರ್ಯದರ್ಶಿ ಅಶೋಕ ತಡಸದ, ಪ್ರಾಚಾರ್ಯ ಎಸ್.ಎನ್.ಪೊಲೇಶಿ,ಉಪನ್ಯಾಸಕ ರಹೀಂ ಮುಲ್ಲಾ, ಸಿಬ್ಬಂದಿ ಬಾಬು ಚವ್ಹಾಣ ಉಪನ್ಯಾಸಕಿ ಸುಮಂಗಲಾ ಅಂಗಡಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.ಅಲ್ಲದೇ ತಕ್ಷಣ ಅವರನ್ನು ಬಾಗಲಕೋಟ ಜಿಲ್ಲಾಸ್ಪತ್ರೆಗೆ ಕಳಿಸಲು ನೆರವು ನೀಡಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.