ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ : ಚಿನ್ನ ಕದ್ದ ಮೂವರ ಹೆಡೆಮುರಿ ಕಟ್ಟಿದ ಜಿಲ್ಲಾ ಖಾಕಿ ಪಡೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದಲ್ಲಿನ ಕೆನೆರಾ ಬ್ಯಾಂಕ್ ನಲ್ಲಿ ಕಳೆದ 2025 ಮೇ 25 ರಂದು ಬೆಳಿಗ್ಗೆ 11-30 ಗಂಟೆ ನಡುವಿನ ಅವಧಿಯಲ್ಲಿ ಬ್ಯಾಂಕ್ ದರೋಡೆ ಮಾಡಿ 53.26 ಕೋಟಿ ರೂ. ಮೌಲ್ಯದ 58.97 ಕೆಜಿ (58.976.94 ಗ್ರಾಂ) ಬಂಗಾರದ ಆಭರಣಗಳು ನಗದು ಹಣ ರೂ. 5,20,450 ಹೀಗೆ ಒಟ್ಟು 53,31,20,450 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಮಾಹಿತಿ ನೀಡಿದರು.

Jun 27, 2025 - 08:31
Jun 27, 2025 - 08:42
 0
ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ : ಚಿನ್ನ ಕದ್ದ ಮೂವರ ಹೆಡೆಮುರಿ ಕಟ್ಟಿದ ಜಿಲ್ಲಾ ಖಾಕಿ ಪಡೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಜಿಲ್ಲಾ ಖಾಕಿ ಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಅತೀ ದೊಡ್ಡ ಕಳ್ಳತನ ಪ್ರಕರಣವನ್ನ ವಿಜಯಪುರ ಜಿಲ್ಲಾ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದಲ್ಲಿನ ಕೆನೆರಾ ಬ್ಯಾಂಕ್ ನಲ್ಲಿ ಕಳೆದ 2025 ಮೇ 25 ರಂದು ಕಳ್ಳತನ ನಡೆದಿತ್ತು. 

ಬ್ಯಾಂಕ್ ಲಾಕರ್ ಕೀ ತೆಗೆದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಲಾಗಿತ್ತು. ಬರೋಬ್ಬರಿ 58 ಕೆಜಿ 975 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕದ್ದು ಕಳ್ಳರು ಪರಾರಿಯಾಗಿದ್ದರು. 

ಅಂದಾಜು ಮೌಲ್ಯ 53 ಕೋಟಿ 26 ಲಕ್ಷ ರೂಪಾಯಿ ಆಭರಣ ಕಳ್ಳತನ ಮಾಡಿ ಬ್ಯಾಂಕ್ ಆವರಣದ ಸಿಸಿ‌ ಕ್ಯಾಮೆರಾ ಹಾರ್ಡ್ ಡಿಸ್ಕ್ ಸಮೇತ ಪರಾರಿಯಾಗಿದ್ದರು. 

ವಿಜಯಪುರ ಜಿಲ್ಲೆಯ ಪೊಲೀಸರಿಗೆ ಅತ್ಯಂತ ಚಾಲೆಂಜ್ ಆಗಿದ್ದ ಈ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ಮನಗೂಳಿ ಕೆನೆರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಇತ್ತಿಚಿನ ವರ್ಗಾವಣೆಯಾಗಿದ್ದ ವಿಜಯಕುಮಾರ ಮಿರಿಯಾಲ್, ಚಂದ್ರಶೇಖರ್ ನರೆಲ್ಲಾ‌ ಹಾಗೂ ಸುನೀಲ್ ಮೋಕಾ ಎಂಬುವರನ್ನ ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. 

ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ 02 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10 ಕೋಟಿ 75 ಲಕ್ಷ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಇನ್ನುಳಿದ ಆರೋಪಿತರು ಹಾಗೂ ಕಳುವಾದ ವಸ್ತುಗಳ ಪತ್ತೆ ಕಾರ್ಯ ಮುಂದುವರೆದಿದೆ.

-ಲಕ್ಷ್ಮಣ ಬಿ ನಿಂಬರಗಿ 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

ವಿಜಯಪುರ

ಬಂಧಿತರಿಂದ 10.5 ಕೆಜಿ ಚಿನ್ನಾಭರಣ, ಎರಡು ಕಾರುಗಳ ವಶಕ್ಕೆ ಪಡೆಯಲಾಗಿದೆ. ಕಳೆದ 2025 ಮೇ 25 ರಂದು ಕಳ್ಳತನ ನಡೆದ ಬಳಿಕ. ಖದೀಮರ ಹುಡುಕಾಟ ನಡೆಸಿದ ಪೊಲೀಸರು 8 ತಂಡಗಳಾಗಿ ರಚನೆ ಮಾಡಿ ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿದ್ದರು. ಕೊನೆಗೆ ಆರೋಪಿಗಳು ಗೋವಾದಲ್ಲಿ ಇರೋದು ಪತ್ತೆಯಾದ ಬಳಿಕ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನ ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ‌ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಮಾಹಿತಿ ನೀಡಿದರು.

 ಬಂಧಿತ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ತನ್ನ ಸಹೋದರ ಹಾಗೂ ಸ್ನೇಹಿತರ ಮೂಲಕ ನಕಲಿ ಕಿ ತಯಾರಿ ಮಾಡಿ ಬ್ಯಾಂಕ್ ಲಾಕರ್ ತೆಗೆದು ಬಂಗಾರ ಕಳ್ಳತನ ಮಾಡಿದ್ದಾರೆ. ಇದಕ್ಕಾಗಿ ಒಂದು ತಿಂಗಳ ಕಾಲ ಪ್ಲಾನ್ ಮಾಡಿದ್ದಾನೆ‌. ಜೊತೆಗೆ ಹಾಲಿವುಡ್ ಚಿತ್ರಗಳಲ್ಲಿ ಬ್ಯಾಂಕ್ ಕಳ್ಳತನ ಮಾಡಿ ಪರಾರಿಯಾಗಿವು ದೃಶ್ಯಗಳನ್ನ ನೋಡಿ ಪರಾರಿಯಾದ್ದಾನೆ. 

ಬಂಗಾರ ಕದ್ದು ಕಾರ್ ನಲ್ಲಿ ಹಾಕಿ, ಸುತ್ತಾಡಲು ತಂದಿದ್ದ ಬೈಕ್ ಗಳನ್ನ ಟ್ರಕ್ ನಲ್ಲಿ ಹಾಕಿ ಎಸ್ಕೇಪ್ ಆಗಿದ್ದರು. ಜೊತೆಗೆ ಬ್ಯಾಂಕ್ ಸಿಸಿಟಿವಿ ಕಾರ್ಯಾಚರಣೆ, ಸ್ಥಳೀಯರ ಚಲನ ವಲನಗಳನ್ನ ಗಮನಿಸಿದ್ದ ಮ್ಯಾನೇಜರ್ ಯಾರಿಗೂ ಅನುಮಾನ ಬರದಂತೆ ಸಂಜೆ ವೇಳೆಯಲ್ಲಿ ಕಳ್ಳತನ ಮಾಡಿದ್ದ. 

ತನಿಖೆಯ ದಿಕ್ಕು ತಪ್ಪಿಸಲು ಗೊಂಬೆ ಇಟ್ಟು ಮಾಟ ಮಂತ್ರದ ನಾಟಕ ಮಾಡಿದ್ದ.‌ ಆದರೆ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಸದ್ಯ ಮೂವರು ಆರೋಪಿಗಳನ್ನ ಮಾತ್ರ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅನ್ನ ಕೊಟ್ಟ ಸಂಸ್ಥೆಗೆ ದ್ರೋಹ ಬಗೆದ ಮ್ಯಾನೇಜರ್ ಬಂಧಿತನಾಗಿದ್ದಾನೆ.

ವಿಜಯಕುಮಾರ್ (41), ಚಂದ್ರಶೇಖರ್ (38), ಸುನೀಲ್ (40) ಬಂಧಿತ ಆರೋಪಿಗಳು. ಜೊತೆಗೆ 10.5 ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘಿಸಿದ ಎಸ್ಪಿ ನಿಂಬರಗಿ 

ಹೌದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದ ಕೆನರಾ ಬ್ಯಾಂಕ್‌ನಲ್ಲಿ ದರೋಡೆ ನಡೆದ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ ಹಾಗೂ ಶಂಕರ ಮಾರಿಹಾಳ ಮಾರ್ಗದರ್ಶನಲ್ಲಿ ಡಿಎಸ್ಪಿಗಳಾದ ಟಿ ಎಸ್ ಸುಲ್ಪಿ, ಸುನೀಲ ಕಾಂಬಳೆ, ಬಲ್ಲಪ್ಪ ನಂದಗಾವಿ, ಸಿಪಿಐಗಳಾದ ರಮೇಶ ಅವಜಿ, ಗುರುಶಾಂತ ದಾಶ್ಯಾಳ, ಅಶೋಕ ಚವ್ಹಾಣ, ಪಿಎಸ್ಐ ಗಳಾದ ಶ್ರೀಕಾಂತ ಕಾಂಬಳೆ, ಅಶೋಕ ನಾಯಕ, ದೇವರಾಜ್ ಉಳ್ಳಾಗಡ್ಡಿ, ಬಸವರಾಜ ತಿಪ್ಪರೆಡ್ಡಿ, ರಾಕೇಶ ಬಗಲಿ, ಸೋಮೇಶ ಗೆಜ್ಜಿ, ವಿನೋದ ದೊಡ್ಡಮನಿ, ವಿನೋದ ಪೂಜಾರಿ, ಶಿವಾನಂದ ಪಾಟೀಲ, ಯತೀಶ ಕೆ, ಶ್ರೀಮತಿ ನಾಗರತ್ನ ಉಪ್ಪಲದಿನ್ನಿ ಹಾಗೂ ಹಲವಾರು ಸಿಬ್ಬಂದಿಗಳನ್ನೊಳಗೊಂಡ 08 ವಿಶೇಷ ತಂಡಗಳನ್ನು ಆರೋಪಿತರ ಪತ್ತೆ ಕುರಿತು ರಚಿಸಲಾಗಿತ್ತು. ಪ್ರಕರಣದ ಪತ್ತೆ ಕುರಿತು ಕರ್ತವ್ಯ ನಿರ್ವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಶ್ಲಾಘಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.