ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದಿಂದ ಲ್ಯಾಪಟಾಪ್ ವಿತರಿಸಿದ ಶಾಸಕ ಮನಗೂಳಿ

Jun 22, 2025 - 08:56
 0
ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದಿಂದ ಲ್ಯಾಪಟಾಪ್ ವಿತರಿಸಿದ ಶಾಸಕ ಮನಗೂಳಿ
ತಹಶೀಲ್ದಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದಿಂದ ಲ್ಯಾಪಟಾಪ ವಿತರಿಸಿ ಶಾಸಕ ಅಶೋಕ ಎಮ್ ಮನಗೂಳಿ ಮಾತನಾಡಿದರು.  

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಆಲಮೇಲ: ಜನಸಾಮಾನ್ಯರಿಗೆ ರೈತರಿಗೆ ಯಾವುದೇ ಅನಾನುಕೂಲ ತೊಂದರೆಯಾಗಬಾರು ಎಂದು ಕಂದಾಯ ಸಚಿವ ಕೃಷ್ಣಾ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಬಹುದೊಡ್ಡ ಬದಲಾವಣೆ ಮಾಡುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.        

ಶನಿವಾರ ತಹಶೀಲ್ದಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದಿಂದ ಲ್ಯಾಪಟಾಪ ವಿತರಿಸಿ ಮಾತನಾಡಿದರು.            

ಸರ್ಕಾರದ ಯಾವುದೇ ಯೋಜನೆಗಳು ಸರಿಯಾಗಿ ಸದ್ಬಳಕೆಯಾಗಬೇಕು ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಸಾಮನ್ಯ ಜನರ ಯಾವುದೆ ಕೆಲಸಕ್ಕೂ ತೊಂದರೆ ಅನುಭವಿಸಬಾರದು ಎಂದು ಗ್ರಾಮ ಲೆಕ್ಕಾಧಿಕಾರಿಗಳು ಜನರ ಮನೆ ಬಾಗಿಲೆಗೆ ತೆರಳಿ ಸರ್ಕಾರದ ಸೇವೆ ವದಗಿಸುವ ಕೆಲಸಕ್ಕೆ ಬೇಕಾದ ಸೌಲಭ್ಯಗಳು ಅಧಿಕಾರಿಗಳಿಗೆ ಒದಗಿಸುವ ಸಲುವಾಗಿ ಅದಕ್ಕೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಂದಾಯ ಇಲಾಖೆಯಿಂದ ಲ್ಯಾಪಟಾಪ ನೀಡಲಾಗುತ್ತಿದೆ ಎಂದು ಹೇಳಿದರು.            

ಈ ವೇಳೆ ತಹಶೀಲ್ದಾರ ಕೆ. ವಿಜಯಕುಮಾರ, ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ, ಪ.ಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ನೀರಿಕ್ಷಕ ಎಂ.ಎ. ಅತ್ತಾರ, ಆಲಮೇಲ ತಾಲೂಕಿನ ಎಲ್ಲ ಗ್ರಾಮ ಲೇಕ್ಕಾಧಿಕಾರಿಗಳು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.