ಬಡವರ ಹಸಿವು ಮುಕ್ತಗೊಳಿಸಿರುವ ಸಿಎಂ ಸಿದ್ದರಾಮಯ್ಯ : ಶಾಸಕ ಅಶೋಕ ಮನಗೂಳಿ

Jun 22, 2025 - 08:53
 0
ಬಡವರ ಹಸಿವು ಮುಕ್ತಗೊಳಿಸಿರುವ ಸಿಎಂ ಸಿದ್ದರಾಮಯ್ಯ : ಶಾಸಕ ಅಶೋಕ ಮನಗೂಳಿ
ಶನಿವಾರ ಇಂಡಿ ರಸ್ತೆಯ ಯುಕೆಪಿ ಕ್ಯಾಂಪಿನ ಆವರಣದ ತಹಶೀಲ್ದಾರ ಕಚೇರಿ ಹತ್ತಿರ ನರ‍್ಮಾಣ ಮಾಡಿರುವ ನೂತನ ಇಂದಿರಾ ಕ್ಯಾಂಟೀನ್ ಶಾಸಕ ಅಶೋಕ ಎಮ್ ಮನಗೂಳಿ ಉದ್ಘಾಟಿಸಿ ಮಾತನಾಡಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಆಲಮೇಲ: ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತರುವ ಮೂಲಕ ಬಡವರ ಹಸಿವು ಮುಕ್ತಗೊಳಿಸಿರುವ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.        

ಶನಿವಾರ ಇಂಡಿ ರಸ್ತೆಯ ಯುಕೆಪಿ ಕ್ಯಾಂಪಿನ ಆವರಣದ ತಹಶೀಲ್ದಾರ ಕಚೇರಿ ಹತ್ತಿರ ನಿರ್ಮಾಣ ಮಾಡಿರುವ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.                

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿಸನ ಯೋಜನೆ ಇದಾಗಿದ್ದು ಬಡವರು ಹಸಿವಿನಿಂದ ಬಳಲಬಾರದು ಎಂದು ಅತಿ ಕಡಿಮೇ ವೆಚ್ಚದಲ್ಲಿ ಗುಣಮಟ್ಟದ ಆಹರ ನೀಡುವ ಯೋಜನೆ ಜಾರಿಗೆ ತಂದರು. ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರ ಸ್ಥಗಿತಗೊಳಿದ್ದರು ಮತ್ತೆ ಅಧಿಕಾರಕ್ಕೆ ಬಂದು ಪುನಃ ಆರಂಬಿಸಿ ಬಡವರಿಗೆ ಅನಕೂಲ ವದಗಿಸಿದ್ದಾರೆ ಮತ್ತು ಅದೆ ರೀತಿ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳು ಈಡೆರಿಸಿದ ಏಕೈಕ ಮುಖ್ಯಮಂತ್ರಿ ಅದು ಸಿದ್ದರಾಮಯ್ಯನವರು ಎಂದರು.      

 ರಾಜಕೀಯದಲ್ಲಿ ಯಾವುದು ಶಾಶ್ವತವಿಲ್ಲ ಶಾಸ್ವತವಾಗಿರುವದು ನಾವು ಮಾಡಿರುವ ಪ್ರಾಮಾಣಿಕ ಸೇವೆ. ಒಬ್ಬ ಜನಪ್ರತಿನಿಧಿಯಾಗಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿದರೆ ಅದು ಸಾರ್ಥಕವಾಗುವದು ಎಂದರು.          

 ಆಲಮೇಲದ ಬಹುದಿನಗಳ ಕನಸಾದ ತೋಟಗಾರಿಕೆ ಕಾಲೇಜು ಮತ್ತು ಕಡಣಿ ಬ್ರೀಜ್ ನಿರ್ಮಾಣ ಕಾಮಗಾರಿ ಎರಡಮೂರು ತಿಂಗಳಲ್ಲಿ ಚಾಲನೆ ನೀಡಲಾಗುವದು ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ೫೦ ಕೋಟಿ ಸಿಂದಗಿ ಕ್ಷೇತ್ರಕ್ಕೆ ನೀಡಿದ್ದು ಅದರಲ್ಲಿ ಆಲಮೇಲ ಪಟ್ಟಣಕ್ಕೆ ಬಹುತೆಕ ಅನುದಾನ ನೀಡುವ ಮೂಲಕ ಅಭಿವೃದ್ದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.                    

ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ಮಾತನಾಡಿ ಬಡವರ ಹಸಿವು ಮುಕ್ತಗೊಳಿಸಲು ಮೊದಲ ಬಾರಿಗೆ ಉಚಿತ ರೇಷನ ಯೋಜನೆ ಜಾರಿಗೆ ತಂದಿರುವದು ಇಂದ್ರಾಗಾAದಿ ಅವರ ನೆನಪಿಗಾಗಿ ಈ ಇಂದ್ರಾ ಕ್ಯಾಂಟಿನ ಆರಂಬಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾದ ಅನ್ನರಾಮಯ್ಯ ಎಂದರು.    

ಶಾಸಕ ಅಶೋಕ ಮನಗೂಳಿ ಅವರು ಆಲಮೇಲ ಪಟ್ಟಣ ಸೇರಿದಂತೆ ಹೊಸ ತಾಲೂಕಿನ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಅವರ ಅಭಿವೃದ್ದಿ ಕಾರ್ಯಕ್ಕೆ ತಾಲೂಕಿನ ಜನ ಸಂಪ್ರೂರ್ಣವಾಗಿ ಸಹಕಾರ ನೀಡಲಾಗುವದು ಎಂದು ಹೇಳಿದರು.          

 ಸಾನಿಧ್ಯ ವಹಿಸಿದ ಹಿರೇಮಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ಜಿಲ್ಲಾ ಯೋಜಾನಾಧಿಕಾರಿ ಸೌದಾಗರ, ತಹಶೀಲ್ದಾರ ಕೆ. ವಿಜಯಕುಮಾರ ಮಾತನಾಡಿದರು. ಅಳ್ಳೋಳ್ಳಿಮಠದ ಶ್ರೀಶೈಲಯ್ಯ ಮಹಾಸ್ವಾಮಿಜಿ, ಅಧಿಕಾರಿ ವಿದ್ಯಾಧರ ನ್ಯಾಮಗೊಂಡ, ಪ.ಪಂ. ಸಿ.ಓ ಸುರೇಶ ನಾಯಕ ಮುಂತಾದವರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.