ಹಿಕ್ಕನಗುತ್ತಿ ಗ್ರಾಪಂ ಅಧ್ಯಕ್ಷರಾಗಿ ಸರಸ್ವತಿ ತಳವಾರ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ : ಕೋರ್ಟ್ ಆದೇಶದ ಮೇರೆಗೆ ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸರಸ್ವತಿ ರಮೇಶ ತಳವಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಗೊತ್ತುವಳಿಯಾಗಿ ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಮೇ ೧೯ ೨೦೨೫ ರಂದು ಚುನಾವಣೆ ನಡೆಸಲಾಗಿತ್ತು. ಆದರೆ ಚುನಾವಣಾ ವಿಷಯವು ಉಚ್ಚ ನ್ಯಾಯಾಲಯ ಕಲಬುರ್ಗಿ ಯಲ್ಲಿ ಇರುವುದರಿಂದ ಘೋಷಣೆ ಮಾಡಲು ಆಗಿರಲಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಂತರ ಉಚ್ಚ ನ್ಯಾಯಾಲಯ ಕಲಬುರಗಿ ಇವರ ಆದೇಶದ ಮೇರೆಗೆ ದಿನಾಂಕ ೨೦.೦೬.೨೦೨೫ ರಂದು ಚುನಾವಣಾ ಅಧಿಕಾರಿಯವರು. ದಿನಾಂಕ ೧೯ ೫ ೨೦೨೫ ರಂದು ನಡೆದ ಚುನಾವಣೆಯ ಪ್ರಕಾರ ಅವಿರೋಧವಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿ ಸರಸ್ವತಿ ರಮೇಶ ತಳವಾರ ಇವರನ್ನು ಹಿಕ್ಕನಗುತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಲಾಯಿತು.
ನೂತನ ಅಧ್ಯಕ್ಷರಿಗೆ ಬಿಜೆಪಿ ಮುಖಂಡ ರವಿಕಾಂತ ನಾಯ್ಕೋಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಾನೂನಿನ ಆದೇಶಗಳನ್ನು ಪಾಲಿಸುವುದರ ಜೊತೆಗೆ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ವಾರ್ಡ್ ಗಳಲ್ಲಿ ಸಂಚರಿಸಿ ಸಾರ್ವಜನಿಕರು ಮತ್ತು ಸದಸ್ಯರು ನನ್ನ ಮೇಲೆ ಇಟ್ಟಿರುವ ಭಾರವಸೆಗಳನ್ನು ಹುಸಿಯಾಗದಂತೆ ಅಭಿವೃದ್ಧಿಯತ್ತ ದಾಪುಗಲು ಹಾಕುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ ಅಡವಿ, ಸದಸ್ಯರುಗಳಾದ ವ್ಹಿ ವಾಯ್ ಬಿರಾದಾರ, ಚಂದ್ರಕಾAತ ಸಣಮನಿ,ಶಿವಾನಂದ ಮರಬದ, ಕಸ್ತೂರಿಬಾಯಿ ಸಾತಲಗಾಂವ, ಗಿರಿಜಾಬಾಯಿ ಬಡಿಗೇರ, ಪರಮೇಶ್ವರ ದೇಸಾಯಿ, ಅರ್ಜುನ ದೊಡ್ಮನಿ, ಮಾನಂದ ಮಾದರ, ಹಾಗೂ ರವಿಕಾಂತ ನಾಯಿಕೋಡಿ,ಸಿದ್ದು ಸಾತಲಗಾಂವ, ನಾಗಣ್ಣ ಬಿರಾದಾರ, ಶಂಕರ್ ಬೊಮ್ಮನಹಳ್ಳಿ, ಇತರರು ಇದ್ದರು.