ಜಗತ್ತಿನಲ್ಲಿ ಜನಿಸಿದ ಪ್ರಯೊಬ್ಬರಿಗೂ ಬದುಕುವ ಹಕ್ಕು ಇದೆ : ಡಾ.ಮಹಾಂತೇಶ ಬಿರಾದಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಜಗತ್ತಿನಲ್ಲಿ ಜನಿಸಿದ ಪ್ರಯೊಬ್ಬರಿಗೂ ಬದುಕುವ ಹಕ್ಕು ಇದೆ. ಯುದ್ಧ, ಹಿಂಸೆ, ಧರ್ಮದ ಹೆಸರಿನಲ್ಲಿ ದ್ವೇಷದಿಂದ ಇನ್ನೊಬ್ಬರ ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.
ವಿಜಯಪುರ ಸೈಕ್ಲಿಂಗ್ ಗ್ರುಪ್ ಆಷಾಢ ಮಾಸದಲ್ಲಿ ಪಂಡರಪುರಕ್ಕೆ ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ದ್ವೇಷ, ದೇಶ, ಧರ್ಮಗಳನ್ನು ತೊರೆದು ನೆಮ್ಮದಿಯಿಂದ ಮುಂದುವರೆಯಬೇಕು ಎಂಬ ಪ್ರಾರ್ಥನೆಯೊಂದಿಗೆ ಈ ಯಾತ್ರೆಯನ್ನು ಮಾಡುತ್ತಿದ್ದು, ಇದು ಈಡೇರಲಿ ಎಂದರು.
ಈ ಯಾತ್ರೆಗೆ ಹಸಿರು ನಿಶಾನೆ ತೋರಿದ ಬಿ.ಎಲ್.ಡಿ.ಇ ಡೀಮ್ಡ್ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ವಿಸಿಜಿ ವಿನೂತನ ಕಾರ್ಯಚಟುವಟಿಕೆಗಳ ಮೂಲಕ ಮೆಚ್ಚುಗೆ ಗಳಿಸಿದೆ. ಆರೋಗ್ಯ, ಪರಿಸರ, ಕ್ರೀಡೆ ಹೀಗೆ ಸದಭಿರುಚಿ ವಿಷಯಗಳನ್ನು ಯುವಜನತೆಗೆ ಅರಿವು ಮೂಡಿಸುತ್ತಿರುವ ಕಾರ್ಯಕ್ಕೆ ಎಲ್ಲರ ಬೆಂಬಲವಿದೆ ಎಂದರು.
ವಿಜಯಪುರ ನಗರ ಸೈಕ್ಲಿಸ್ಟ್ ಗಳಾದ ಬಸವರಾಜ ದೇವರ, ಶಿವನಗೌಡ ಪಾಟೀಲ, ಮುತ್ತಣ್ಣ ಬಿರಾದಾರ, ಶ್ರೀಕಾಂತ ಮಂತ್ರಿ, ಮಾಣಿಕರಾವ ಕುಲಕರ್ಣಿ, ಡಾ. ಮಲ್ಲಿಕಾರ್ಜುನ ಯಲಗೊಂಡ, ಅನಿಲ ಧಾರವಾಡಕರ, ಡಾ. ಆನಂದ ಜಳಕಿ, ಸಂತೋಷ ಸಜ್ಜನ, ಸೋಮಶೇಖರ ಸ್ವಾಮಿ, ಶ್ರೀಕಾಂತ ರಾಕ್, ವಿನಯಕುಮಾರ ಪಾಟೀಲ, ಶಂಭು ಕರ್ಪೂರಮಠ, ವಿಜಯ ಬಾಗೇಲಿ, ಸಂತೋಷ ಔರಸಂಗ, ಸಿದ್ದು ನಾಯ್ಕೋಡಿ, ಸೋಮು ಎಲ್.ಐ.ಸಿ, ಸಚಿನ ಪಾಟೀಲ, ವಿಜಯಕುಮಾರ ಕೋರೆ, ವೀರೇಂದ್ರ ಗುಚ್ಚಟ್ಟಿ, ಡಾ. ರವಿ ಸಂಕ, ಶ್ರೀನಿವಾಸ, ಡಾ.ರವಿಕುಮಾರ ಚೌಧರಿ, ಭೀಮಾಶಂಕರ, ಶಾಂತೇಶ ಕಳಸಗೊಂಡ, ಹನಮಂತ, ಶಿವಾನಂದ ಯರನಾಳ, ಡಾ.ಪ್ರವೀಣ ಚೌರ, ಸೋಮಲಿಂಗ, ಶಿವರಾಜ ಪಾಟೀಲ, ಚಂದ್ರಹಾಸ ಬಣ್ಣದ, ಶಿವಶಂಕರ ಸಿದ್ದಣ್ಣವರ, ಅಂಬರೀಷ ಭೈರಗೊಂಡ, ವಿನೋದ ಸಜ್ಜನ, ಗುರುಶಾಂತ ಕಾಪಸೆ, ನರೇನ ಕಳಸಗೊಂಡ, ಗಜಾನಂದ ಮಂದಾಲಿ ಒಟ್ಟು ೩೭ ಜನ ಹಾಗೂ ಅಥಣಿ ತಾಲೂಕಿನ ಕೊಟ್ಟಲಗಿಯ ಮುರುಗೇಶ ಅಳಬಾಳ, ಶಿವಾ, ವಿನಯ ಕೋಟಿ, ಮುರುಗೇಶ ಕೋಟಿ, ಅಮೋಘಸಿದ್ದ ಬಸನಾಳ, ಡಾ.ಸುನೀಲ ಕುಸುಗಲ್ ೭ ಸೈಕ್ಲಿಸ್ಟ್ ಗಳು ಸೇರಿದಂತೆ ಒಟ್ಟು ೪೪ ಜನ ತೆರಳಿದ್ದು, ಈ ಯಾತ್ರೆಯು ಶನಿವಾರ ಸಂಜೆ ಪಂಡರಪುರಕ್ಕೆ ತಲುಪಲಿದೆ. ೧೧೦ಕಿ.ಮೀ ಉದ್ದದ ಪಂಡರಪುರ ಯಾತ್ರೆಯಲ್ಲಿ ಮಹಾರಾಷ್ಟ್ರದ ವಿವಿಧ ಸೈಕ್ಲಿಂಗ್ ಗ್ರುಪ್ ಸೇರಿ ಎರಡು ಸಾವಿರಕ್ಕೂ ಹೆಚ್ಚು ಸೈಕ್ಲಿಸ್ಟ್ ಗಳು ಪಂಡರಪುರದಲ್ಲಿ ಸೇರಲಿದ್ದಾರೆ. ರವಿವಾರ ಬೆಳಿಗ್ಗೆ ೬ಗಂ. ಪಂಡರಪುರ ಸೈಕ್ಲಿಂಗ್ ಕ್ಲಬ್, ನಾಸಿಕ್ ಸೈಕ್ಲಿಸ್ಟ್ ಕ್ಲಬ್ ಮತ್ತು ಬಾರಾಮತಿ ಸೈಕ್ಲಿಸ್ಟ್ ಕ್ಲಬ್ ಆಯೋಜಿಸಿದ ೪ನೇ ಅಖಿಲ ಮಹಾರಾಷ್ಟ್ರ ಪಂಡರಪುರ ಸೈಕಲ್ ಸವಾರಿ ಸಮ್ಮೇಳನದಲ್ಲಿ ಭಾಗವಹಿಸಿ, ನಗರ ಪ್ರದಕ್ಷಿಣೆ ಮಾಡಲಿದೆ ಎಂದು ವಿಸಿಜಿ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.