ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

Jun 25, 2025 - 03:58
Jun 25, 2025 - 04:00
 0
ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ದೇವರಹಿಪ್ಪರಗಿ: ರೈತರು ತಮ್ಮ ಜಮೀನಿಗಳಿಗೆ ಹೋಗಲು ದಾರಿ ಬಿಡಿಸಿಕೊಡಲು ಆಗ್ರಹಿಸಿ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ದೇವರಹಿಪ್ಪರಗಿ ತಾಳಿಕೋಟಿ ಮುಖ್ಯ ರಸ್ತೆ ಬಂದು ಮಾಡಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಯಾಳವಾರ ಹಾಗೂ ನಾಗರಾಳ ಡೋಣ ಗ್ರಾಮದ ರೈತರು ತಮ್ಮ ಜಮೀನಿಗಳಿಗೆ ಈಗ ಕೆಲ ಬಲಾಡ್ಯರು ದಾರಿಯನ್ನು ಬಿಡದೆ ಅಡ್ಡಪಡಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಹಾಗೂ ಸಿಪಿಐ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ಹಲವಾರು ರೈತರು ಮಾತನಾಡಿ ಈಗಷ್ಟೇ ಮುಂಗಾರು ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿ ಬಿಡಿಸಿಕೊಡಬೇಕೆಂದು ಒತ್ತಾಯಿಸಿದರು.

ರೈತರು ಹೊಲಗಳಿಗೆ ಹೋಗಲು ಕಾಲುದಾರಿ, ಬಂಡಿದಾರಿಗಳನ್ನು ಸಹ ಬಂದ್‌ ಮಾಡಲಾಗಿದೆ. ಇದರಿಂದ ಜಮೀನುಗಳು ಇದ್ದು ಸಹ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.ತಹಶೀಲ್ದಾರ್ ಅವರು ಬರುತ್ತೇನೆ ಎಂದು ಅನಿವಾರ್ಯ ಕಾರಣದಿಂದ ಬಾರದಕ್ಕೆ ಮಂಗಳವಾರ ಸಂಜೆ 5ಗಂಟೆಯ ನಂತರ ದೇವರಹಿಪ್ಪರಗಿ ತಾಳಿಕೋಟೆ ರಸ್ತೆ ಬಂದ್ ಮಾಡಿ ಮುಳ್ಳು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ವಿಜಯಕುಮಾರ ನಾಡಗೌಡ, ಸಂಗನಗೌಡ ತೆಗ್ಗಿನಮನಿ, ಸಂತೋಷ ಮುಸುಗುರಿ, ರಾಮನಗೌಡ ಉಮ್ಮಣ್ಣವರ, ಮಡಿವಾಳಪ್ಪ ಉಮ್ಮಣ್ಣವರ, ಬಸಯ್ಯ ಚರಂತಿಮಠ,ಬಸಯ್ಯ ಹಿರೇಮಠ, ಸೋಮಯ್ಯ ಹಿರೇಮಠ,ದೇವೇಂದ್ರ ಖಾನಾಪುರ, ಬಸನಗೌಡ ಬಿರಾದಾರ,ನಿಂಗನಗೌಡ ಖಾನಾಪುರ, ಭೀಮಣ್ಣ ಉಪ್ಪಾರ, ಬಸನಗೌಡ ದೊಡ್ಡಮನಿ, ರಮೇಶ್ ಗುರುಮಠ ಸೇರಿದಂತೆ ಎರಡು ಗ್ರಾಮದ ರೈತರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.