ವಂದೇ ಭಾರತ ರೈಲು ಆರಂಭಿಸುವಂತೆ ಶಾಸಕ ಅಶೋಕ ಮನಗೂಳಿ ಮನವಿ

Jul 6, 2025 - 04:39
Jul 6, 2025 - 04:43
 0
ವಂದೇ ಭಾರತ ರೈಲು ಆರಂಭಿಸುವಂತೆ ಶಾಸಕ ಅಶೋಕ ಮನಗೂಳಿ ಮನವಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ: ವಿಜಯಪುರ ಜಿಲ್ಲೆ ಅತಿ ವೇಗವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸಾರ್ವಜನಿಕರು ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಬೆಂಗಳೂರು ಮಹಾನಗರಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಈಗ ಸದ್ಯ ಗೋಲಗುಂಬಜ್ ಎಕ್ಸ್ಪ್ರೇಸ್ ರೈಲ್ವೆ ಸೇವೆ ವಿಜಯಪುರದಿಂದ ಸಾಯಂಕಾಲ ೦೪:೩೦ಗಂಟೆಗೆ ಹೊರಟು ಬೆಂಗಳೂರು ಮಹಾನಗರಕ್ಕೆ ಮರು ದಿನ ಬೆಳಿಗ್ಗೆ ೮:೩೦ಗಂಟೆಗೆ ತುಲುಪುತ್ತದೆ. ಇದರಿಂದ ಪ್ರಾಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಇದರಿಂದ ಸಾರ್ವಜನಿಕರು ಖಾಸಗಿ ಹಾಗೂ ಸಾರಿಗೆ ಬಸ್ ಅವಲಂಭಿಸಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.


ರಾಷ್ಟ್ರದ ತುಂಬಾ ವಂದೇ ಭಾರತ ಎಂಬ ಆಧುನಿಕ ರೈಲ್ವೆ ಸೇವೆ ಪ್ರಾರಂಭದಡಿ ದೇಶದ ಜನರ ತ್ವರಿತ ಪ್ರಯಾಣದ ಕನಸು ನನಸು ಮಾಡಿರುವುದು ಸಂತಸದ ವಿಷಯ. ಹಾಗಾಗಿ ವಿಜಯಪುರ-ಬೆಂಗಳೂರು-ವಿಜಯಪುರ ಮಾರ್ಗ ಮಧ್ಯ ರಾತ್ರಿ ೭ಗಂಟೆಗೆ ಸೂಪರ ಫಾಸ್ಟ್ ರೈಲು ಸೇವೆ ಆರಂಭಿಸಿದರೆ ಸಮಸ್ತ ವಿಜಯಪುರ ಜಿಲ್ಲೆಯ ಜನತೆಗೆ ಅನುಕೂಲವಾವ ಜೊತೆಗೆ ರೈಲ್ವೆ ಇಲಾಖೆಗೂ ಆದಾಯ ಹೆಚ್ಚುತ್ತದೆ. ಆದ್ದರಿಂದ ಈ ಮಾರ್ಗ ಮದ್ಯದಲ್ಲಿ ವಂದೇ ಭಾರತ ರೈಲು ಸೇವೆ ಆರಂಭಿಸುವ ಪರಿಶೀಲನೆ ಮಾಡಿ ವಿಜಯಪುರ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

” ತೋಟಗಾರಿಕಾ ಬೆಳೆಗಳು, ಕಬ್ಬು, ಲಿಂಬೆ, ದ್ರಾಕ್ಷಿ, ಈರುಳ್ಳಿ, ತರಕಾರಿ, ದಾಳಿಂಬೆ ಬೆಳೆಗಳಿಗೆ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಹೆಸರುವಾಸಿ. ಈ ಭಾಗದ ರೈತರು ಬೆಳೆಗಳನ್ನು ಮಾರಾಟ ಮಾಡಲು ದಿನನಿತ್ಯ ಬೆಂಗಳೂರು ನಗರಕ್ಕೆ ಹೋಗುತ್ತಾರೆ. ಇವರಿಗೆ ರಸ್ತೆ ಸಾರಿಗೆ ವ್ಯವಸ್ಥೆ ದುಬಾರಿಯಾಗಿರುವುದರಿಂದ ನಮ್ಮ ಭಾಗದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ವಂದೇ ಭಾರತ ರೈಲು ಸೇವೆ ಜಿಲ್ಲೆಗೆ ಪ್ರಾರಂಭಿಸಬೇಕು ಎನ್ನುವುದು ನಮ್ಮ ಕನಸು.”

– ಅಶೋಕ ಮನಗೂಳಿ
ಶಾಸಕರು, ಸಿಂದಗಿ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.