ಮಕ್ಕಳ ಸಾಹಿತ್ಯ ಕೃತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ

Jul 6, 2025 - 04:32
Jul 6, 2025 - 04:33
 0
ಮಕ್ಕಳ ಸಾಹಿತ್ಯ ಕೃತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ: ಪಟ್ಟಣದ ವಿದ್ಯಾಚೇತನ ಪ್ರಕಾಶನದಿಂದ ಕೊಡಮಾಡುವ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ವಿವಿಧ ಮಕ್ಕಳ ಸಾಹಿತ್ಯ ಕೃತಿಗಳು ಆಯ್ಕೆಯಾಗಿವೆ.


ಬೆಂಗಳೂರಿನ ವಸು ವತ್ಸಲಾ ಅವರ ಅಂತರಿಕ್ಷದಲ್ಲಿ ವಿಹಾ ಕಥಾಸಂಕಲನ, ತುಮಕೂರಿನ ನಾಗಭೂಷಣ ಅವರ ಮಿನುಗುವ ಮನುಷ್ಯ ಕಾದಂಬರಿ, ಬೀಳಗಿಯ ಸೋಮಲಿಂಗ ಬೇಡರ ಅವರ ಬಾರೆಚುಕ್ಕಿ ಬೆಳ್ಳಿಚುಕ್ಕಿ ಕವನ ಸಂಕಲನ ಮತ್ತು ೧೮ ವರ್ಷದೊಳಗಿನ ಮಕ್ಕಳು ಬರೆದ ಕೃತಿಗಳಿಗಿರುವ ಚಿಗುರು ಪ್ರಶಸ್ತಿಗೆ ಆಲಮೇಲದ ನವ್ಯ ಕತ್ತಿ ಅವರ ಮಾಯಾ ಗುಹೆ ಕಥಾ ಸಂಕಲನ ಮತ್ತು ಸಿದ್ದಾಪುರದ ಎಚ್.ವಿದ್ಯಾಶ್ರೀ ಅವರ ನಕ್ಷತ್ರ ಪಟಲ ಕವನ ಸಂಕಲನ ಆಯ್ಕೆಯಾಗಿರುತ್ತವೆ.


ಜು.೧೩ರಂದು ಸಿಂದಗಿಯ ಸಾರಂಗಮಠದಲ್ಲಿ ಜರಗುವ ಸಮಾರಂಭದಲ್ಲಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿದ್ಯಾಚೇತನ ಪ್ರಕಾಶನದ ಪ್ರಕಾಶಕ, ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.