ಬಾಲಭಾರತಿ ಸಂಸ್ಥೆಯಲ್ಲಿ ಆರ್.ಎಸ್.ಎಸ್ ಸಿದ್ಧಾಂತ ಒಳಗೊಂಡಿದೆ : ಘೋರ್ಪಡೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ತಾಳಿಕೋಟೆ ತಾಲೂಕಿನಲ್ಲಿ ಕಳೆದ ೪೨ ವರ್ಷಗಳ ಹಿಂದೆ ಜನ್ಮತಾಳಿದ ಬಾಲಭಾರತಿ ವಿದ್ಯಾ ಸಂಸ್ಥೆ ಅನೇಕ ವಿದ್ಯಾರ್ಥೀಗಳಿಗೆ ವಿದ್ಯಾ-ಬುದ್ಧಿಯನ್ನು ನೀಡುತ್ತಾ ಮುನ್ನಡೆದ ಈ ಸಂಸ್ಥೆ ಬಾಲಭಾರತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಲಕ್ಷö್ಮಣಸಿಂಗ್ ಅಮರಸಿಂಗ್ ಹಜೇರಿ ಪ್ರೌಢಶಾಲೆಯನ್ನು ಪ್ರಾರಂಭ ಮಾಡುವುದರೊಂದಿಗೆ ಅಸಂಖ್ಯಾತ ವಿದ್ಯಾರ್ಥೀಗಳೊಂದಿಗೆ ಈಗಲೂ ಮುನ್ನಡೆದು ದೇಶಪ್ರೇಮವನ್ನು ಮೂಡಿಸುತ್ತಾ ಸಾಗಿದೆ ಎಂದು ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ನುಡಿದರು.
ಶನಿವಾರರಂದು ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಲಕ್ಷö್ಮಣಸಿಂಗ್ ವಿದ್ಯಾಭಾರತಿ ಪ್ರೌಢಶಾಲೆ ಇವುಗಳ ಸಹಯೋಗದೊಂದಿಗೆ ಸಂಸ್ಥೆಯ ಸಬಾಭವನದಲ್ಲಿ ಏರ್ಪಡಿಸಲಾದ ೨೦೨೫-೨೬ನೇ ಸಾಲಿನ ಶಾಲಾ ಸಂಸತ್ತು ಹಾಗೂ ಕ್ರೀಡಾ ಕೂಟದ ಕ್ರೀಡಾ ವಿಭಾಗ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಸತ್ತ್ ಪಟ್ಟಿಯನ್ನು ಬಿಡುಗಡೆಗೊಳಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಈ ವಿದ್ಯಾಸಂಸ್ಥೆಯಲ್ಲಿ ಮುಖ್ಯವಾಗಿ ಭಾರತೀಯ ಸಂಸ್ಕೃತಿ ಕುರಿತು ಹಾಗೂ ಸಂಸ್ಕಾರ ಕುರಿತು ಅರಿವು ಮುಡಿಸಲಾಗುತ್ತದೆ ಸಂWದ ಶಕ್ತಿ ಸಂಘದ ಇತಿಹಾಸ ನೆನಪಿಸಿ ಶಿಸ್ತಿನ ಸಿಪಾಯಿಗಳನ್ನಾಗಿ ವಿದ್ಯಾವಂತರನ್ನಾಗಿ ರೂಪಿಸಲಾಗುತ್ತದೆ ಎಂದರು.ಈ ಹಿಂದೆ ಈ ಶಾಲೆಯ ಬೆಳವಣಿಗೆಗಾಗಿ ಶ್ರಮಿಸಿದ ಅಂದಿನ ಅಧ್ಯಕ್ಷ ದಿ.ವಿಠ್ಠಲಸಿಂಗ್ ಹಜೇರಿ ಹಾಗೂ ಅವರ ಸಹೋದರ ದಿ.ಲಕ್ಷö್ಮಣಸಿಂಗ್ ಹಜೇರಿ ಅವರ ಸೇವಾ ಕಾರ್ಯ ಇನ್ನು ಅಜರಾಮರವಾಗಿ ಉಳಿದಿದೆ ಎಂದರು. ಈ ಶಾಲೆಗಳಲ್ಲಿ ಪ್ರತಿವರ್ಷ ವಿವಿಧ ವರ್ಗಗಳ ಫಲಿತಾಂಶವನ್ನು ನೋಡಿದಾಗ ನೂರಕ್ಕೆ ನೂರರಷ್ಟು ವಿದ್ಯಾರ್ಥೀಗಳು ಸಾಧನೆಮಾಡುತ್ತಾ ತೋರಿಸುತ್ತಾ ಸಾಗಿದ್ದಾರೆ ಇದಕ್ಕೆ ಕಾರಣ ಎಲ್ಲ ಶಿಕ್ಷಕರ ಸೇವಾ ಕಾರ್ಯವೇ ಮಹತ್ವದ್ದಾಗಿದೆ ಎಂದು ಶಾಲಾ ಸಂಸತ್ತ ಕುರಿತು ವಿವರಿಸಿದರು.
ಇನ್ನೋರ್ವ ಮುಖ್ಯ ಅಥಿತಿಯಾಗಿ ಆಗಮಿಸಿದ ಸಿ.ಆರ್.ಪಿ ರಾಜು ವಿಜಾಪುರ ಅವರು ಮಾತನಾಡಿ ಶಾಲಾ ಸಂಸತ್ತೇನ್ನುವುದನ್ನು ಶಾಲೆಗಳಲ್ಲಿಯೇ ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾದರಿಯಂತೆ ವಿದ್ಯಾರ್ಥೀಗಳಿಗೆ ಅರ್ಥೈಸಲಾಗುತ್ತದೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುವ ಗಾದೆಯಂತೆ ಇಂತಹ ಕಲಿಕೆ ಗುರುತಿಸುವ ಹಾಗೂ ಅರ್ಥೈಸುವುದರಿಂದಲೇ ವಿದ್ಯಾರ್ಥೀಗಳು ಪ್ರಜಾಪ್ರಭುತ್ವದ ಅನುಭವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ಸಂಸತ್ತಿನ ಮಂತ್ರಿ ಮಂಡಲ ಅರ್ಥೈಸಿಕೊಂಡು ನಡೆದು ವಿದ್ಯೆಯಲ್ಲಿ ಪರಿಣಿತರಾಗಿ ಉನ್ನತ ಸ್ಥಾನ ಮಾನ ಏರಬೇಕೆಂದು ವಿದ್ಯಾರ್ಥೀಗಳಿಗೆ ಸಲಹೆ ನೀಡಿದರು.
ಇನ್ನೋರ್ವ ಬಾಲಭಾರತಿ ಸಂಸ್ಥೆಯ ಅಧ್ಯಕ್ಷ ಚಿದಂಬರ ಕರಮರಕರ ಅವರು ಮಾತನಾಡಿ ಶಾಲೆಯ ವಿದ್ಯಾರ್ಥೀಗಳಲ್ಲಿ ಶಿಸ್ತು ಸಂಯಮತೆ ಮೂಡಿಸುವ ಕಾರ್ಯ ಇನ್ನು ಹೆಚ್ಚಾಗಬೇಕಾಗಿದೆ ಈ ಕುರಿತು ಶಿಕ್ಷಕರು ತಮ್ಮ ಶಿಕ್ಷಣ ನೀಡುತ್ತೀರುವ ಸೇವೆಯಲ್ಲಿ ವಿದ್ಯಾರ್ಥೀಗಳು ರೂಡಿಸಿ ಕೋಳ್ಳುವಂತೆ ಸೂಚಿಸುವ ಕಾರ್ಯವಾಗಬೇಕೆಂಬುದರ ಕುರಿತು ಶಿಕ್ಷಕರಿಗೆ ಕಿವಿಮಾತನ್ನು ಹೇಳಿದರು.
ಇನ್ನೋರ್ವ ಸಾನಿಧ್ಯವಹಿಸಿ ಕ್ರೀಡಾವಿಭಾಗದ ಕ್ರೀಡಾಕೂಟದ ಉದ್ಘಾಟನೆಯನ್ನು ನೇರವೇರಿಸಿ ಸನ್ಮಾನ ಸ್ವಿಕರಿಸಿದ ಖ್ಯಾತಪ್ರವಚನಕಾರರಾದ ಸಿದ್ದರಾಮಶಿವಯೋಗಿಗಳು ಮಾತನಾಡಿ ವಿದ್ಯಾರ್ಥೀಗಳು ಮಾತಾ-ಪೀತರನ್ನು ಗೌರವ ಭಾವನೆಯಿಂದ ಕಾಣಬೇಕು ಅವರು ಮಾಡಿದಂತಹ ಸೇವಾಕಾರ್ಯ ಮರಳಿ ಅವರಿಗೆ ಮುಪ್ಪಾವಸ್ತೆಯಲ್ಲಿ ಮಾಡುವ ಕಾರ್ಯ ಮಾಡಿ ನಿಮ್ಮ ಸಾರ್ಥಕ ಸೇವೆಯನ್ನು ಅರ್ಪೀಸಿದರೇ ಭಗವಂತ ವಲಿದೇ ವಲಿಯುತ್ತಾನೆಂದರು.
ಶಿಕ್ಷಕ ರಮೇಶ ಕುಲಕರ್ಣಿ ಪ್ರಾಸ್ಥಾವಿಕ ಮಾತನಾಡಿದರು. ಶಾಲಾ ಸಂಸತ್ತನಲ್ಲಿ ಆಯ್ಕೆಗೊಂಡ ವಿದ್ಯಾರ್ಥೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲು ಸಿದ್ದರಾಮ ಶಿವಯೋಗಿಗಳಿಗೆ ಪಾದಪೂಜೆ ನೇರವೆರಿಸಿ ಘೋಷವಾದ್ಯ ವೈಭವಗಳೊಂದಿಗೆ ವೇದಿಕೆಗೆ ಕರೆತರಲಾಯಿತು.ವೇದಿಕೇಯ ಮೇಲೆ ಬಾಲಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಅಮರಸಿಂಗ್ ಹಜೇರಿ,ಪತ್ರಕರ್ತರಾದ ಸಂಜಯಸಿAಗ್ ಹಜೇರಿ,ಅಬ್ದುಲಘನಿ ಮಕಾಂದಾರ,ಸAಗನಗೌಡ ಹಾಗೂ ಸಂಸ್ಥೆಯ ಸದಸ್ಯರುಗಳಾದ ಸಂಬಾಜಿ ವಾಡ್ಕರ ,ವಾಸುದೇವ ಹೆಬಸೂರ,ಶಾಮ ಹಂಚಾಟೆ,ತಮ್ಮಣ್ಣ ದೇಶಪಾಂಡೆ,ಶ್ರೀನಿವಾಸ ಸೋನಾರ, ಶಿಕ್ಷಕರಾದ ವೆಂಕೋಬಾ ನಾಯ್ಕೊಡಿ,ಶರಣರ ಸರ್,ಗುರುರಾಜ ಶಟ್ಟರ, ಧರ್ಮಣ್ಣ ಕಟ್ಟಿಮನಿ,ರಾಘವೇಂದ್ರ ಕುಲಕರ್ಣಿ,ಶಶಿಕಲಾ ಕುಂಟೋಜಿ,ರೂಪಾ ನಾಗಾವಿ, ಪ್ರದೀಪಗೊಂಡ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಸುಮಂಗಲಾ ಯಾಳವಾರ ನಿರೂಪಿಸಿದರು.ಶೈಲಾಶ್ರೀ ಸುರಪುರ ಸ್ವಾಗತಿಸಿದರು, ಮಹೇಶ ಔದಿ ವಂದಿಸಿದರು.