ಮಾನಸಿಕ ಒತ್ತಡ ನಿರ್ವಹಣೆಗೆ ಯೋಗ ಅತ್ಯಂತ ಮುಖ್ಯ : ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ಕಾನೂನು ಅಧಿಕಾರಿ ಡಾ.ರಂಜಿತಾ ಕೆ. ಆರ್.

Jun 22, 2025 - 09:04
 0
ಮಾನಸಿಕ ಒತ್ತಡ ನಿರ್ವಹಣೆಗೆ ಯೋಗ ಅತ್ಯಂತ ಮುಖ್ಯ : ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ಕಾನೂನು ಅಧಿಕಾರಿ ಡಾ.ರಂಜಿತಾ ಕೆ. ಆರ್.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರಶಾಸ್ತ್ರ ವಿಭಾಗದ ಯೋಗ ಮತ್ತು ವ್ಯಾಯಾಮ ವಿಜ್ಞಾನ ಕೇಂದ್ರ, ಆಯುಷ್ ಸಚಿವಾಲಯ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಿಂದ ಮತ್ತು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ “ಒಂದು ಭೂಮಿ, ಒಂದು ಆರೋಗ್ಯ ಶಿರ್ಷಿಕೆಯಡಿ 12 ದಿನಗಳ ಯೋಗ ಸಂಗಮ, ಯೋಗ ಸಮಾವೇಶ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ಕಾನೂನು ಅಧಿಕಾರಿ ಡಾ. ರಂಜಿತಾ ಕೆ. ಆರ್. ಮಾತನಾಡಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಕಾರ್ಯಗಳಲ್ಲಿ ಹೆಚ್ಚಿದ ಮಾನಸಿಕ ಒತ್ತಡ ನಿರ್ವಹಣೆಗೆ ಅತ್ಯಂತ ಮುಖ್ಯವಾದ ಆಯಾಮವಾಗಿದೆ ಎಂದು ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ಕಾನೂನು ಅಧಿಕಾರಿ ಡಾ. ರಂಜಿತಾ ಕೆ. ಆರ್. ಹೇಳಿದರು.      

 ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರಶಾಸ್ತ್ರ ವಿಭಾಗದ ಯೋಗ ಮತ್ತು ವ್ಯಾಯಾಮ ವಿಜ್ಞಾನ ಕೇಂದ್ರ, ಆಯುಷ್ ಸಚಿವಾಲಯ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯಿAದ ಮತ್ತು ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ “ಒಂದು ಭೂಮಿ, ಒಂದು ಆರೋಗ್ಯ ಶಿರ್ಷಿಕೆಯಡಿ ೧೨ ದಿನಗಳ ಯೋಗ ಸಂಗಮ, ಯೋಗ ಸಮಾವೇಶ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಯೋಗ ಅಭ್ಯಾಸದ ಮೂಲಕ ನಾವೆಲ್ಲರೂ ನಮ್ಮೊಳಗಿನ ಅನಂತ ಶಕ್ತಿಯನ್ನು ಅರಿತುಕೊಳ್ಳಬಹುದು." ಎಂದು ಸ್ವಾಮಿ ವಿವೇಕಾನಂದರ ವಾಕ್ಯಗಳನ್ನು ತಿಳಿಸುತ್ತಾ, ಪ್ರಾಚೀನ ಕಾಲದಲ್ಲಿ ಸೂರ್ಯನಮಸ್ಕಾರದಿಂದ ಆಗುವ ಪ್ರಯೋಜಗಳ ಕುರಿತು ವಿವರಿಸಿದರು.                      

ಯೋಗ ಶಿಕ್ಷಕ ಎಂ. ಪಿ. ದೊಡಮನಿ ಹಾಗೂ ಅವರ ತಂಡ ಡಾ. ಪ್ರಿಯಾಂಕಾ, ಡಾ. ಗನಿಂಗ್ಸ್ಟನ್, ಸುಧನ್ವ, ವಿವೇಕ್, ಕುಮಾರಿ ಆಯುಷಿ, ಕುಮಾರಿ ಸಾಕ್ಷಿ ಮತ್ತು ಕುಮಾರಿ ತಾನ್ವಿ ಸಂಪೂರ್ಣ ಯೋಗಾಸನಗಳನ್ನು  ಪ್ರದರ್ಶಿಸಿದರು.  ಈ ಅಭ್ಯಾಸದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪಗಳು ಒಳಗೊಂಡಿದ್ದವು.        

ಯೋಗ ಫಿಸಿಯಾಲಜಿಯಲ್ಲಿ ಮೌಲ್ಯ ವೃದ್ಧಿ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.            

ಜೊತೆಗೆ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನೀಡುತ್ತಿರುವ ಒಂದು ವರ್ಷದ ಯೋಗ ಪ್ರಮಾಣಪತ್ರ ಕೋರ್ಸ್ಗೆ ಹೊಸದಾಗಿ ಸೇರಿರುವ ವಿದ್ಯಾರ್ಥಿಗಳಿಗೆ ಸ್ವಾಗತಿಸಲಾಯಿತು.        

ಈ ಸಂದರ್ಭದಲ್ಲಿ ಶರೀರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸುಮಂಗಲಾ ಪಾಟೀಲ, ಪ್ಯಾಥಾಲಜಿ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಹಿಪ್ಪರಗಿ, ಫಿಸಿಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಲತಾ ಮುಳ್ಳೂರು, ಪ್ರಾಧ್ಯಾಪಕಿ ಮತ್ತು ಯೋಗ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪೂರ ಉಪಸ್ಥಿತರಿದ್ದರು.            

ಈ ಕಾರ್ಯಕ್ರಮದಲ್ಲಿ ಬಿಎಲ್ಡಿಇ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು, ವಿಭಾಗದ ಮುಖ್ಯಸ್ಥರು, ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಮತ್ತು ಸಿಬ್ಬಂದಿಗಳು ಸೇರಿ ಸುಮಾರು ೨೫೦ ಮಂದಿ ಭಾಗವಹಿಸಿದ್ದರು.        

ಶರೀರಶಾಸ್ತ್ರ ವಿಭಾಗ ಪ್ರಾಧ್ಯಾಪಕಿ, ಡಾ. ಶ್ರೀಲಕ್ಷ್ಮಿ ಬಗಲಿ ವಂದಿಸಿದರು. ಶರೀರವಿಜ್ಞಾನ ವಿಭಾಗ ಸಹ ಪ್ರಾಧ್ಯಾಪಕಿ ಡಾ. ಅನಿತಾ ತೇಲಿ ಸ್ವಾಗತಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.