ಆಲಮೇಲ: ಆಲಮೇಲದ ಕೆಪಿಆರ್ ಸಕ್ಕರೆ ಕಾರ್ಖಾನೆ ಆಡಳಿ ಮಂಡಳಿ ರೈತರನ್ನು ಹಾಗೂ ಸ್ಥಳಿಯ ಕಬ್ಬು ಕಟಾವು ಮತ್ತು ಸಾಗಾಣೆದಾರರನ್ನು ಸಂಪೂರ್ಣವಾಗಿ ನಿರ್ಲಲಕ್ಷಿಸಿ ಸರ್ಕಾರದ ಆದೇಶವನ್ನು ಪಾಲನೆ ಮಾಡದೆ ಸರ್ವಾಧಿಕಾರದಂತೆ ವರ್ತಿಸುತ್ತಿದ್ದಾರೆ ಎಂದು ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘದ ಅಧ್ಯಕ್ಷ ಶಶಿಧರ ನಾಯ್ಕೋಡಿ ಹೇಳಿದರು.
ಗುರುವಾರ ಕಬ್ಬು ಕಟಾವು ಮತ್ತು ಸಾಗಾಣೆದಾರರ ಸಂಘ ಹಮ್ಮಿಕೊಂಡಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಆಲಮೇಲದ ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವುದಾರರ ಮತ್ತು ಸಾಗಣೆ ಮಾಡುವ ಟ್ಯಾಕ್ಟರ ವಾಹನಗಳ ಸಾಗಣೆ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಧರಿಸುವ ಮದ್ಯಾಂತರ ಆದೇಶವನ್ನು ದಿಕ್ಕರಿಸಿ ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸುವ ಧರವನ್ನು ನೀಡಲಾಗುವದು ಎಂದು ಶರಥ ವಿಧಿಸಿ ಒಪ್ಪಂದಕ್ಕೆ ಮುಂದಾಗಿದ್ದು ಇದು ಸರ್ವಾಧಿಕಾರ ಧೋರಣೆಯಾಗಿದ್ದು ಇದನ್ನು ವಿರೋಧಿಸಿ ಸ್ಥಳಿಯ ಕಬ್ಬು ಕಟಾವು ಮತ್ತು ಸಾಗಣೆದಾರರ ವಾಹನ ಮಾಲಿಕರ ಸಂಘ ಒಪ್ಪಂದ (ಅಗ್ರಿಮೆಂಟ್) ಸ್ಥಗಿತಗೊಳಿಸಲಾಗಿದೆ. ಕೆಪಿಆರ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಹೊಸದಾಗಿ ವಿದಿಸಿರುವ ಶರಥಗಳು ಹಿಂಪಡೆದು ಒಪ್ಪಂದಕ್ಕೆ ಮುಂದಾಗಬೇಕು ಅಲ್ಲಿವರೆಗೂ ಕಟಾವು ಮತ್ತು ಸಾಗಾಣೆದಾರರ ಒಪ್ಪಂದ (ಅಗ್ರಿಮೆಂಟ್) ಮಾಡುವದಿಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸದೆ ತಮ್ಮದೆ ಶರಥಗಳ ಮೂಲಕವೆ ಒಪ್ಪಂದ ಮಾಡಿಕೊಳ್ಳಲು ಮುಂದಾದರೆ ಅವರ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಕಟಾವು ಮತ್ತು ಸಾಗಾಣೆದಾರರ ವಾಹನ ಮಾಲಿಕರು ತಹಶೀಲ್ದಾರ, ಉಪಾ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಕಾದು ನೋಡುತ್ತೆವೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಇದೆ ಜೂನ ೨೩ ರಿಂದ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಂತೇಶ ಕತ್ತಿ, ಮಹೇಶ ಹುನಳ್ಳಿ, ರಾಜು ಮೇತ್ರಿ, ನಿಂಗರಾಜ ಕುಂಟೋಜಿ, ಗೋಪಾಲ ಬಿರಾದಾರ ಸೇರಿದಂತೆ ಇತರರು ಇದ್ದರು.