ಕನ್ನಡದ ಕಟ್ಟಾಳು ಸಂಗಪ್ಪ ದೇವಪ್ಪ ಮೇತ್ರಿ ಲಿಂಗೈಕ್ಯ

Jul 6, 2025 - 10:19
 0
ಕನ್ನಡದ ಕಟ್ಟಾಳು ಸಂಗಪ್ಪ ದೇವಪ್ಪ ಮೇತ್ರಿ ಲಿಂಗೈಕ್ಯ
ಕನ್ನಡದ ಕಟ್ಟಾಳು ಸಂಗಪ್ಪ ದೇವಪ್ಪ ಮೇತ್ರಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ಗಡಿನಾಡು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಮೈಸಲಿಗೆ ,ಹಂದ್ರಾಳ ಮುಂತಾದ ಗ್ರಾಮಗಳಲ್ಲಿ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿ , ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಾ ಆ ಭಾಗದಲ್ಲಿ ಕನ್ನಡ ಉಳಿಯಲು ,ಬೆಳೆಯಲು ಕಾರಣಕರ್ತರು ಹಾಗೂ ವಿಜಯಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಟ್ಟಾಳು ಪ್ರಶಸ್ತಿ ಪುರಸ್ಕೃತರಾದ ಇಂಡಿ ತಾಲೂಕಿನ ಪಡನೂರು ಗ್ರಾಮದ ಸಂಗಪ್ಪ ದೇವಪ್ಪ ಮೇತ್ರಿ ಇತ್ತೀಚಿಗೆ ತಮ್ಮ 91ನೆಯ ವಯಸ್ಸಿನಲ್ಲಿ ಲಿಂಗೈಕ್ಯರಾದರು.

ಗಡಿನಾಡಿನಲ್ಲಿ ಕನ್ನಡ ಶಾಲೆಯ ಶಿಕ್ಷಕ ವೃತ್ತಿಯೊಂದಿಗೆ ಅಂಚೆ ಇಲಾಖೆಯ  ಜವಾಬ್ದಾರಿಯನ್ನು ಹಲವು ವರ್ಷ ನಿರ್ವಹಿಸುತ್ತಾ ಕನ್ನಡ ಪರ ಚಿಂತನೆಯನ್ನು ಜಾಗೃತಗೊಳಿಸಲು ಕಾರಣರಾದವರು, 
ಮೈಸಲಿಗೆ ಗ್ರಾಮದ ಪ್ರಮುಖರಾದ ಲಾಲಸಂಗಿ ಯವರಿಗೆ ಶಿಕ್ಷಣ ಸಂಸ್ಥೆ ಆರಂಭಿಸಿ ಕನ್ನಡ ಮಾಧ್ಯಮ ಶಾಲೆ- ಕಾಲೇಜುಗಳನ್ನು ಸ್ಥಾಪಿಸಲು ಪ್ರೇರಣೆ, ಪ್ರೋತ್ಸಾಹ ನೀಡಿದ್ದಾರೆ. ಅಲ್ಲಿಯ ಪಂಚಮುಖಿ ಮಾರುತಿ ಮಂದಿರದ ಭಕ್ತಾರಾದ ಇವರು ಹಲವಾರು ಧಾರ್ಮಿಕ ,ಭಕ್ತಿ ಪರವಾದ ಕಾರ್ಯಗಳು ನಡೆಯಲು ಕಾರಣಕರ್ತರಾಗಿದ್ದಾರೆ. ಗಡಿ ಭಾಗದಲ್ಲಿ ಕನ್ನಡ ಉಳಿಯಬೇಕು ಬೆಳೆಯಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಹಲವಾರು ಶಾಲೆ, ಪ್ರೌಢಶಾಲೆಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ಮಾಡಿದ್ದಾರೆ. ಕನ್ನಡ ಈ ಭಾಗದ ಜೀವ ಸತ್ವವಾದ ಭಾಷೆ. ಭಾಷಾವಾರು ಪ್ರಾಂತ ವಿಂಗಡಣೆಯಾಗುವಾಗ ಅಕ್ಕಲಕೋಟೆ ತಾಲೂಕು ನಮ್ಮಿಂದ ಕೈ ಬಿಟ್ಟು ಹೋಗಿದೆ, ಆದರೂ ಇದು ಕರ್ನಾಟಕದ ಭಾಗವೆಂದು ನಾವು ಭಾವಿಸಿಕೊಂಡು ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂಬ ಅಭಿಲಾಷೆ ಅವರದಾಗಿತ್ತು. ಈ ಹಿನ್ನೆಲೆಯಾಗಿ ಹತ್ತು ಹಲವಾರು ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಅವರದಾಗಿದೆ. ಅವರು ಸಿಕ್ಯಾಬ್ ಸಂಸ್ಥೆಯೆ ಎ ಆರ್ ಎಸ್ ಇನಾಂದಾರ ಕಲಾ,ವಿಜ್ಞಾನ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಹಾಗೂ ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಮೇತ್ರಿ, ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಭೀಮಾಶಂಕರ ಮೇತ್ರಿಎಂಬ ಪುತ್ರರನ್ನು ಹಾಗೂ ಶರಣಮ್ಮ ಹಾವಳಗಿ ಎಂಬ ಪುತ್ರಿಯನ್ನು ಹೊಂದಿದ್ದು ಇವರನ್ನು ,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 ಅವರ ಅಂತ್ಯಕ್ರಿಯೆಯು ಸ್ವಗ್ರಾಮ ಪಡನೂರಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನುಡಿ ನಮನ ಸಲ್ಲಿಸುವ ಮೂಲಕ ಜರಗಿತು.

ಈ ಕಾರ್ಯದಲ್ಲಿ ಹಳ್ಳಿ-ಬಾಲಗಾಂವ ಹಿರೇಮಠ ಗುರುಗಳು, ಮೈ ಸಲಿಗೆ ಗ್ರಾಮದ ಪಂಚಮುಖಿ ಹನುಮಂತ ದೇವರ ಅರ್ಚಕರಾದ ಸಿದ್ದರಾಮ ಹೂಗಾರ, ವಿಜಯಪುರದ ಮಲ್ಲಯ್ಯಸ್ವಾಮಿ ಹಿರೇಮಠ, ಪಡನೂರಿನ ಕೇದಾರನಾಥ ಹಿರೇಮಠ ,ಸೋಮು ಹಿರೇಮಠ, ಇಂಡಿ ಮತಕ್ಷೇತ್ರದ ಶಾಸಕರ ಸಹೋದರರಾದ ಬಸವಂತರಾಯಗೌಡ ಪಾಟೀಲ, ಕಾಂಗ್ರೆಸ್ ಧುರೀಣರಾದ ಕಲ್ಲನಗೌಡ ಬಿರಾದಾರ ,ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಮಹಾಂತಗೌಡ ಪಾಟೀಲ, ವಿದ್ಯಾ ಪೋಷಕರಾದ ಮೈಸಲಿಗೆಯ ಲಾಳಸಂಗಿ, ಸಿಕ್ಯಾಬ  ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಎ,.ಎಸ್ .ಪಾಟೀಲ್ , ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್ ಕೆ ಯಡಹಳ್ಳಿ ಹಾಗೂ ಪ್ರಾಧ್ಯಾಪಕರು ,ಬಸವೇಶ್ವರ ಪ .ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಕುಲಕರಣಿ ಹಾಗೂ ಪ್ರಾಧ್ಯಾಪಕರು ಖೇಡ ಮಹಾವಿದ್ಯಾಲಯದ ಪ್ರಾಚಾರ್ಯ ಎಂ ಡಿ .ಹೆಬ್ಬಿ ಹಾಗೂ ಪ್ರಾಧ್ಯಾಪಕರು, ವಿಜಯಪುರ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷರಾದ  ರವೀಂದ್ರ ಬಿಜ್ಜರಗಿ, ಐಶ್ವರ್ಯ ನಗರ ಗಜಾನನ ಉತ್ಸವ ಮಂಡಳಿಯ ಅಧ್ಯಕ್ಷರಾದ ದೇಶಟ್ಟಿ, ಮಾಜಿ ಅಧ್ಯಕ್ಷರಾದ ರಾಜುಗೌಡ ಪಾಟೀಲ, ಉದ್ಯಮಿದರಾದ  ಭೀಮಾಶಂಕರ ತಾಳಿಕೋಟಿ ,ಸಿದ್ದು ಜೋಗುರ, ನಾನಾಗೌಡ ಪಾಟೀಲ, ರಾಮಗೊಂಡಪ್ಪ ಗುದ್ದಿ,ವಾಣಿಜ್ಯ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷರಾದ ವೀರಣ್ಣ ಹುಂಡೆಕಾರ,ಮಾರುತಿ ದೇವಸ್ಥಾನದ ಅಧ್ಯಕ್ಷರಾದ ಬಿ ಎನ್ ಬಿರಾದಾರ, ಸಾಹಿತಿ ಸಾಹಿತಿಗಳಾದ ಜಿ.ಬಿ. ಸಾಲಕ್ಕಿ, ಗುರುರಾಜ್ ಮೆಡಿದಾರ್ ,ಎಂ ಆರ್ ಬಡಿಗೇರ್, ಎಂ ಓ ಶಿರೂರ್ ಪ್ರೊ ಎಸ್ ಜಿ ಹೆಬ್ಬಳ್ಳಿ ಪ್ರೊ. ರಾಜೇಂದ್ರ ಕುಮಾರ ಪಾಟೀಲ ,ಪ್ರೊ ವಿ ಎಂ ಪಾಟೀಲ, ಬೊಮ್ಮನ ಜೋಗಿಯ ಪ್ರೇಮನಗೌಡ ಪಾಟೀಲ್, ಜಮಖಂಡಿಯ ಧರೆಪ್ಪ ಧರೆಪ್ಪಗೊಳ, ನಿವೃತ್ತ ಅಭಿಯಂತರರಾದ ಎಸ್ ಜಿ ತೊದಲಬಾಗಿ  ಶ್ರೀಶೈಲ ಬೆಲ್ಲದ ,ಮಧು ಕಲಾದಗಿ ,ಲಕ್ಷ್ಮಣ ಮೇತ್ರಿ, ಜಿ ಡಿ ಬಾಗೇವಾಡಿ ಅಶೋಕ್ ಬನ್ನಟ್ಟಿ ,ಬಿ ವಿ ಪಾಟೀಲ ಪಾಯಣ್ಣ ಪಡಸಲಗಿ ಜೆ ಎಸ್. ಸೊಡ್ಡಗಿ   ಮುಂತಾದ ಗಣ್ಯರು, ಪಡನೂರ ಗ್ರಾಮದ ಸಮಸ್ತ ಗುರು ಹಿರಿಯರು,ಅಗರಖೇಡ ಲಚ್ಯಾಣ, ಮೈಸಲಗೆ ,ಹೊಳೆಸಂಖ, ಅಕ್ಕಲಕೋಟ, ಸೋಲಾಪುರ, ಲೋಣಿ ಬಿ ಕೆ . ಝಳಕಿ ,ಇಂಡಿ, ಬಮ್ಮನಜೋಗಿ ,ಸಿಂದಗಿ,ಪುಣೆ, ಸಾಲೋಟಗಿ ಹೊಸೂರ, ಬರಗುಡಿ, ಅಂಕಲಗಿ,ಖೇಡಗಿ,ತಡವಾಳ, ಹಂದ್ರಾಳ ಮುಂತಾದ ಗ್ರಾಮಗಳ ಗಣ್ಯಮಾನ್ಯರು ಬಂಧು ಬಾಂಧವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.