ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ: ಬೂದಿಹಾಳ ಪೀರಾಪೂರ ಏತ ನೀರಾವರಿಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತಾಪಿ ಜನರು ಶನಿವಾರರಂದು ನಾವದಗಿ ಕ್ರಾಸ್‌ದಿಂದ ಕೊಡಗಾನೂರ ಗ್ರಾಸ್‌ದ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪ್ರಾರಂಬಿಸಿದರು.
ಪ್ರತಿಭಟನಾ ಮೇರವಣಿಗೆಯ ನೇತೃತ್ವ ವಹಿಸಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಸಂಬಂದಿಸಿ ಈಗಾಗಲೇ ೭೨೮ ಕೋಟಿ ರೂ. ವೆಚ್ಚದಲ್ಲಿ ಮುಖ್ಯ ಪೈಪಲೈನ್‌ದಿಂದ ಹಿಡಿದು ಉಳಿದ ಎಲ್ಲ ಕಾಮಗಾರಿಯೂ ಮುಕ್ತಾಯಗೊಂಡಿದೆ ಆದರೆ ಕೊನೆಯ ಹಂತದ ಹೊಲ ಗಾಲುವೆ ಕಾಮಗಾರಿಯು ಇಷ್ಟೋತ್ತಿಗಾಗಲೇ ಪೂರ್ಣಗೊಂಡು ನೀರು ಹರಿಯಬೇಕಾಗಿತ್ತು ಆದರೆ ಸರ್ಕಾರದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಕಾಮಗಾರಿಯೂ ಅಪೂರ್ಣಗೊಂಡಿದೆ ಇದೇ ರೀತಿ ಮುಂದುವರೆದರೆ ಈಗಾಗಲೇ ಈ ಯೋಜನೆಗೆ ಸಂಬಂದಿಸಿ ಖರ್ಚು ವೆಚ್ಚ ಮಾಡಿದ ಹಣ ಎಲ್ಲವೂ ಹಾಳಾಗಿ ಹೋಗಲಿದೆ ಈ ಯೋಜನೆಯು ಪೂರ್ಣಗೊಂಡರೆ ತಾಳಿಕೋಟೆ ತಾಲೂಕಿನ ೩೮ ಗ್ರಾಮಗಳ ರೈತರಿಗೆ ಅನೂಕೂಲವಾಗಲಿದೆ ಅಲ್ಲದೇ ತಾಲೂಕಿನ ೫೧ ಸಾವಿರ ಏಕರೆ ಪ್ರದೇಶ ನೀರಾವರಿಗೊಳಪಡಲಿದೆ ಇದಕ್ಕೆ ಸದ್ಯ ಅಗತ್ಯವಿರುವ ೧೭೦ ಕೋಟಿ ಅನುದಾನವನ್ನು ಸರ್ಕಾರವು ಸೀಘ್ರವೇ ಬಿಡುಗಡೆಗೊಳಿಸಿ ಮುಂದುವರೆದ ಕಾಮಗಾರಿಯನ್ನು ಪ್ರಾರಂಬಿಸಬೇಕೆಂದು ಒತ್ತಾಯಿಸಿದ ಅವರು ಸರ್ಕಾರದ ಮತ್ತು ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆಯಿಂದ ಕಾಮಗಾರಿಯೂ ಅಪೂರ್ಣಗೊಳ್ಳಲು ಕಾರಣವಾಗಿದೆ ಜಿಲ್ಲೆಯಲ್ಲಿ ೫ ನಧಿಗಳು ಹರಿಯುತ್ತಿದ್ದರೂ ಕೂಡಾ ಈ ಜಿಲ್ಲೆಯ ಭೂಮಿ ಕಳೆದುಕೊಂಡ ರೈತರಿಗೆ ಕುಡಿಯಲೂ ಸಹ ನೀರು ಸಿಗುತ್ತಿಲ್ಲಾ ಬೂದಿಹಾಳ-ಫೀರಾಪೂರ ನೀರಾವರಿ ಯೋಜನೆಯು ರೈತರ ಪಾಲಿನ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಈ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತಹ ಕಾರ್ಯ ಸರ್ಕಾರ ಮತ್ತು ಸರ್ಕಾರದ ಜನಪ್ರತಿನಿಧಿಗಳು ಮಾಡಬೇಕೆಂದು ಒತ್ತಾಯಿಸಿದ ಅವರು ಕೂಡಲೇ ಈ ವಿಷಯ ಕುರಿತು ಸರ್ಕಾರದಿಂದ ಸೂಕ್ತ ನಿರ್ದೇಶನ ಹೊರಬಿಳ್ಳದಿದ್ದರೆ ೩೮ ಗ್ರಾಮಗಳ ರೈತರು ಬೀದಿಗಿಳಿದು ಸರ್ಕಾರದ ವಿರೂದ್ದ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಏಚ್ಚರಿಸಿದರು.
ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಬಿರಾದಾರ(ಅಸ್ಕಿ) ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕೊನೆಯ ಹಂತದ ಕಾಮಗಾರಿಯು ಈಗಾಗಲೇ ಮುಕ್ತಾಯಗೊಂಡು ನೀರು ಹರಿಯಬೇಕಾಗಿತ್ತು ಸರ್ಕಾರದ ನಿರ್ಲಕ್ಷದಿಂದ ಇಡೀ ಯೋಜನೆಯೇ ಹಳ್ಳ ಹಿಡಿಯುವ ಹಂತಕ್ಕೆ ಬರುತ್ತಿದೆ ಕೂಡಲೇ ಸರ್ಕಾರದ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವರು ಮುಂದುವರೆದ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಮಯದಲ್ಲಿ ರೈತ ಮುಖಂಡರಾದ ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಎಂ.ಎಂ.ಪಾಟೀಲ(ಸಾಲವಾಡಗಿ), ರಾಜುಗೌಡ ಕೊಳೂರ, ಹಣಮಂತ್ರಾಯ ಕೊಣ್ಯಾಳ, ಶರಣುಧನಿ ದೇಶಮುಖ, ವಿರೇಶ ಹಿರೇಮಠ, ರಾಜುಸಾಹುಕಾರ ಇಬ್ರಾಹಿಂಪೂರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮ ಒಳಗೊಂಡು ೩೮ ಗ್ರಾಮಗಳ ರೈತಾಪಿ ಜನರು ಪಾಲ್ಗೊಂಡಿದ್ದರು.
----
ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಯ ಕೊನೆಯ ಹಂತದ ಕಾಮಗಾರಿಯು ಈಗಾಗಲೇ ಪೂರ್ಣಗೊಂಡು ರೈತರ ಜಮೀನುಗಳಿಗೆ ನೀರು ಹರಿಯಬೇಕಾಗಿತ್ತು ಈ ಕಾಮಗಾರಿಯು ಅಪೂರ್ಣಗೊಂಡಿದ್ದರಿಂದ ಸರ್ಕಾರದ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈಗಾಗಲೇ ಮುಕ್ತಾಯಗೊಂಡ ೭೨೮ ಕೋಟಿ ರೂ. ಬೃಹತ್ ಯೋಜನೆಯು ಹಳ್ಳ ಹಿಡಿಯುತ್ತಾ ಸಾಗಿದೆ.
ಅರವಿಂದ ಕುಲಕರ್ಣಿ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ