ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ಕೊಡಿ,ಇಲ್ಲವೇ ಖುರ್ಚಿ ಬಿಡಿ : ಮಾಜಿ ಎಂ.ಎಲ್.ಸಿ ಶಹಾಪೂರ ಆಗ್ರಹ

Jun 25, 2025 - 07:17
 0
ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ಕೊಡಿ,ಇಲ್ಲವೇ ಖುರ್ಚಿ ಬಿಡಿ : ಮಾಜಿ ಎಂ.ಎಲ್.ಸಿ ಶಹಾಪೂರ ಆಗ್ರಹ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಮುದ್ದೇಬಿಹಾಳ : ಗಜೇಂದ್ರಗಡದಲ್ಲಿ ಶಾಲೆಯ ಕೊಠಡಿ ಕುಸಿದು ಒಬ್ಬ ಶಿಕ್ಷಕರು, ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶಾಲೆಗಳ ಮೂಲಭೂತ ಸೌರ‍್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಹೇಳಿದರು.

 ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಸರ್ಕಾರ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸಲು, ಶಿಥಿಲಗೊಂಡಿರುವ ಕೊಠಡಿಗಳ ದುರಸ್ತಿಗೆ ಅನುದಾನ ನೀಡಿಲ್ಲ. ಸರ್ವ ಶಿಕ್ಷಣ ಅಭಿಯಾನ ಮುಗಿದ ನಂತರ ಶಾಲೆಯ ಮೂಲಭೂತ ಸೌರ‍್ಯಕ್ಕೆ ಆದ್ಯತೆ ಸಿಕ್ಕಿಲ್ಲ.೨೦೧೬ರಲ್ಲಿ ಯಮಕನಮರಡಿಯಲ್ಲಿ ಶಾಲೆಯ ಕೊಠಡಿ ಕುಸಿದು ವಿದ್ಯಾರ್ಥಿ ಅಸುನೀಗಿದ್ದರು.ಆಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರು ೭೦೦೦ ಕೋಟಿ ರೂ.ಗಳನ್ನು ಶಾಲೆಗಳ ಮೂಲಭೂತ ಸೌರ‍್ಯಗಳ ಸುಧಾರಣೆಗೆ ನೀಡಲಾಗಿತ್ತು ಎಂದು ಹೇಳಿದರು.

 ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ರೂಪಾಯಿ ದುಡ್ಡು ಶಾಲೆಗಳ ದುರಸ್ತಿಗೆ ಕೊಟ್ಟಿಲ್ಲ.ಶಿಕ್ಷಣ ಸಚಿವರು,ಮಾಜಿ ಸಚಿವರು,ಮಾಜಿ ಶಾಸಕರು,ಶಿಕ್ಷಣ ತಜ್ಞರ ಸಭೆ ಕರೆದು ಶಿಕ್ಷಣ ಕ್ಷೇತ್ರದ ಕಾಯಕಲ್ಪಕ್ಕೆ ಯೋಜನೆ ರೂಪಿಸಬೇಕು ಎಂದ ಅವರು ಶೇ.೩೦ರಷ್ಟು ಖಾಲಿ ಹುದ್ದೆ ಇವೆ.ಒಳಮೀಸಲಾತಿ ನೆಪದಲ್ಲಿ ಖಾಲಿ ಹುದ್ದೆ ತುಂಬಲು ತಯಾರಿಲ್ಲ.ಇದರಿಂದ ಶಿಕ್ಷಣ ಕ್ಷೇತ್ರ ಕುಂಠಿತಗೊಳ್ಳುತ್ತದೆ ಎಂದು ಹೇಳಿದರು.

ಅನುದಾನಿತ ಶಾಲೆಗಳಿಗೆ ಖಾಲಿ ಹುದ್ದೆ ತುಂಬಲು ಅವಕಾಶ ನೀಡಲಾಗುವುದು ಎಂದು ವರ್ಷದ ಹಿಂದೆ ಹೇಳಿದ್ದರವರು ಈವರೆಗೂ ಆ ಬಗ್ಗೆ ಒಂದು ಮಾತಿಲ್ಲ.ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ.ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ಕೊಡಿ.ಇಲ್ಲವೇ ಖುರ್ಚಿ ಬಿಡಿ ಎಂದು ಒತ್ತಾಯಿಸುವುದಾಗಿ ಹೇಳಿದರು.

ಮುಖಂಡ ಮಲ್ಲಿಕಾರ್ಜುನ ದೇವರಮನಿ, ಶ್ರೀಶೈಲ ದೊಡಮನಿ,ಅಶೋಕ ರಾಠೋಡ,ರವೀಂದ್ರ ಬಿರಾದಾರ, ಸಂಜೀವ ಬಾಗೇವಾಡಿ,ಸಂತೋಷ ಬಾದರಬಂಡಿ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.