ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ತಯಾರಿ : ಆಲಮಟ್ಟಿ ಶಾಲಾ ಗ್ರೌಂಡ್ ನಲ್ಲಿ ರನ್ನಿಂಗ್ ಟ್ರ್ಯಾಕ್ ಸಿದ್ದತೆ

Jul 13, 2025 - 11:50
 0
ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ತಯಾರಿ : ಆಲಮಟ್ಟಿ ಶಾಲಾ ಗ್ರೌಂಡ್ ನಲ್ಲಿ ರನ್ನಿಂಗ್ ಟ್ರ್ಯಾಕ್ ಸಿದ್ದತೆ
ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಆಶ್ರಯದಲ್ಲಿ ಅಗಸ್ಟ ನಲ್ಲಿ ನಡೆಯಲಿರುವ 2025-26 ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಓಟದ ಸ್ಪರ್ಧೆಗಳ ಟ್ರ್ಯಾಕ್ ಸಮತಟ್ಟ ಮಾಡುವ ಸಿದ್ದತಾ ಕಾರ್ಯ ಹಳಕಟ್ಟಿ ಶಾಲಾ ಮೈದಾನದಲ್ಲಿ ಶುಕ್ರವಾರ ಜೆಸಿಬಿ ಮೂಲಕ ನಡೆಯಿತು. ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ದೈಹಿಕ ಶಿಕ್ಷಕ ಎಸ್.ಎಚ್.ನಾಗಣಿ ಇದ್ದಾರೆ.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಆಲಮಟ್ಟಿ : ಪ್ರಸಕ್ತ 2024-25 ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಆತಿಥ್ಯ ವಹಿಸಿರುವ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಕ್ರೀಡಾಕೂಟದ ಪೂರ್ವ ತಯಾರಿಯ ಸಿದ್ದತಾ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿವೆ.


     ಬರುವ ಅಗಸ್ಟ 1 ರಿಂದ ಎರಡು ದಿನಗಳಕಾಲ ಈ ಕ್ರೀಡಾಕೂಟ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಹಳಕಟ್ಟಿ ಶಾಲೆಯಲ್ಲಿ ಪೂರ್ವ ಸಿದ್ದತಾ ಕಾರ್ಯಗಳು ಸಮರೋಪಾದಿಯಲ್ಲಿ ಸಾಗುತ್ತಿವೆ.
      ಈಗಾಗಲೇ ಗುಂಪು ಆಟಗಳ ವಿವಿಧ ಅಂಕಣಗಳು ಭಾಗಶಃ ಸಿದ್ದಗೊಂಡಿವೆ.ವಾಲಿಬಾಲ್, ಥ್ರೋ ಬಾಲ, ಖೋಖೋ, ಕಬಡ್ಡಿ ಸೇರಿದಂತೆ ನಾನಾ ಮೈದಾನಗಳು ಅಂತಿಮ ಹಂತದ ತಯಾರಿಯಲ್ಲಿವೆ. ರಿಲೇ ಓಟ ಸೇರಿದಂತೆ ಹಲ ವಿಧದ ಓಟಗಳ ಒಳಗೊಂಡ ಟ್ರ್ಯಾಕ್‌ ಯೊಂದನ್ನು ಇದೀಗ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸಮತಟ್ಟಾದ ಉತ್ತಮ ರೀತಿಯಲ್ಲಿ ಟ್ರ್ಯಾಕ್ ಸಿದ್ದತಾ ಕೆಲಸ ಶುಕ್ರವಾರ ಆರಂಭಗೊಂಡಿದ್ದು ಅದಷ್ಟು ಬೇಗ ಸಿದ್ದಗೊಳ್ಳಲ್ಲಿದೆ ಎಂದು ಕ್ರೀಡಾಕೂಟ ಸಂಘಟನಾ ಅಧ್ಯಕ್ಷರಾದ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹಾಗೂ ಸಂಘಟನಾ ಕಾರ್ಯದರ್ಶಿ, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಚ್.ನಾಗಣಿ ತಿಳಿಸಿದರು.


      ಆಲಮಟ್ಟಿ ಸಮೀಪದ ಚಿಮ್ಮಲಗಿ ಭಾಗ 1 ಎ ಗ್ರಾಮದ ಪ್ರಮುಖರಾದ ಎಂ.ಆರ್. ಕಮತಗಿ ಅವರು ತಮ್ಮ ಜೆಸಿಬಿ ಯಂತ್ರವನ್ನು ಉಚಿತವಾಗಿ ಸೇವಾ ಮನೋಭಾವದಿಂದ ದಿನದ ಮಟ್ಟಿಗೆ ನೀಡಿದ ಪ್ರಯುಕ್ತ ರನ್ನಿಂಗ್ ಟ್ರ್ಯಾಕ್ ಸಮತಟ್ಟ ಕಾರ್ಯ ಕೈಗೊಳ್ಳಲಾಗಿದೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು ಸಹ ಶ್ರಮದಾನದ ಮೂಲಕ ಅಂಕಣಗಳ ಹಾಗೂ ಮೈದಾನದ ಸ್ವಚ್ಛತಾ ಕಾಯಕದಲ್ಲಿ ನಿರತರಾಗಿ ಶ್ರಮಿಸಿದ್ದಾರೆ. ಮಕ್ಕಳ ಸೇವಾಭಾವ ಸ್ವಾಭಾವಿಕವಾಗಿ ಇಲ್ಲಿ ಮಿನುಗಿದೆ. ಎಂ.ಎಚ್.ಎಮ.ಪಪೂ ಕಾಲೇಜು ಪ್ರಾಚಾರ್ಯರಾದ ಪ್ರಭುಸ್ವಾಮಿ ಹೇಮಗಿರಿಮಠ ಅವರ ಹಾಗೂ ಕಾಲೇಜು ಸಿಬ್ಬಂದಿಗಳ, ವಿದ್ಯಾರ್ಥಿಗಳ ಸಹಕಾರ ಸಹಕಾರಿಯಾಗಿದೆ. ಆಟದ ಮೈದಾನ ಹಸಿರು ಸಸ್ಯೋಲೆಗಳ ಮಧ್ಯೆ ನಳನಳಿಸುತ್ತಿದ್ದು ಆಟೋಟಗಳ ಕ್ರೀಡಾ ಹಬ್ಬದ ಕಲರವಕ್ಕೆ ಸನ್ನದ್ಧಗೊಳ್ಳುತ್ತಿದೆ. ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಹಲ ಸಮಿತಿಗಳನ್ನು ರಚಿಸಲಾಗುತ್ತಿದೆ.ಯಶಸ್ಸಿಯಾಗಿ ಕೂಟ ಸಂಯೋಜಿಸಲು ಅನೇಕ ಪೂರ್ವನಿಯೋಜಿತ ಸಿದ್ದತೆಗಳು ಸಾಗುತ್ತಿವೆ.


 ಹಳಕಟ್ಟಿ ಶಾಲೆಯ ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಅವರ ಮೇಲುಸ್ತುವಾರಿಯಲ್ಲಿ ಸಕಲ ವ್ಯವಸ್ಥೆ ಅಚ್ಚುತನದಿಂದ ನೆರವೇರುತ್ತಿವೆ. ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಗುಲಾಬಚಂದ ಜಾಧವ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಸಚೀನ ಹೆಬ್ಬಾಳ, ಶಾಂತೂ ತಡಸಿ, ಗೋಪಾಲ ಬಂಡಿವಡ್ಡರ, ಸಿದ್ದು ಪಟ್ಟಣಶೆಟ್ಟಿ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಇತರರು ಸಹಕಾರ ಹಸ್ತಚಾಚಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.