ತಾಲೂಕಾ ದಲಿತ ಸಂಚಾಲಕರಾಗಿ ಬಸರಕೋಡ ನೇಮಕ

Jun 20, 2025 - 23:37
 0
ತಾಲೂಕಾ ದಲಿತ ಸಂಚಾಲಕರಾಗಿ ಬಸರಕೋಡ ನೇಮಕ

ಮುದ್ದೇಬಿಹಾಳ : ಕರ್ನಾಟಕ ದಲಿತ ಸಂಘರ್ಷ ಸಮೀತಿ sಸಂಘಟನೆಯ ಮುದ್ದೇಬಿಹಾಳ ತಾಲೂಕಾ ಸಂಚಾಲಕರನ್ನಾಗಿ ಪರಸಪ್ಪ ಬಸರಕೋಡ ಮಡಿಕೇಶ್ವರ ಇವರನ್ನು ನೇಮಕ ಮಾಡಲಾಯಿತು.            

ಸ್ಥಳೀಯ ಪ್ರವಾಸಿ ಮಂದಿರಲದಲ್ಲಿ ಏರ್ಪಡಿಸಲಾದ ಈ ನೇಮಕ ಪ್ರಕ್ರೀಯೆಯಲ್ಲಿ ಜಿಲ್ಲಾಧ್ಯಕ್ಷರಾದ ಅರವಿಂದ ಸಾಲವಾಡಗಿ ಅವರು ಆದೇಶ ಪತ್ರವನ್ನು ನೀಡುವದರೊಂದಿಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರ ತತ್ವಸಿದ್ದಾಂತಗಳಲ್ಲಿ ನಂಬಿಕೆಯಿಟ್ಟು ಸಮೀತಿಯ ಎಲ್ಲ ನಿಯಮಾವಳಿಗೆ ಬದ್ದರಾಗಿ ಶೋಷಿತ ಸಮುದಾಯಗಳ ಏಳಿಗೆಗಾಗಿ ಹಾಗೂ ಸಂಘಟನೆಯ ಎಲ್ಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘಟನೆಯನ್ನು ಬಲವರ್ದನೆಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸವನ್ನು ಮಾಡಬೇಕೆಂದರು ಹೇಳಿದರು.              

 ಈ ಸಮಯದಲ್ಲಿ ಮಂಜುನಾಥ ವಾಲ್ಮಿಕಿ, ನಿಡಗುಂದಿ ತಾಲೂಕಾ ಅಧ್ಯಕ್ಷ ಮೌನೇಶ ಹೆಬ್ಬಾಳ, ರವಿ ಬಸರಕೊಡ, ಪರಶುರಾಮ ಬಸರಕೋಡ, ಗುರು ಚಲಮಿ, ಚಂದ್ರಪ್ಪ ದೊಡಮನಿ, ಪ್ರಶಾಂತ ಬಸರಕೊಡ ಅವರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.