ಯೋಗಾಧ್ಯಾತ್ಮದ ಗುರು ಶ್ರೀ ಶಿವಶಂಕರ ಶಿವಾಚಾರ್ಯರು

ವರದಿ - ಕಾಡೇಶ ಎಸ್ ಕಂಪು
ರಬಕವಿ ಬನಹಟ್ಟಿ - ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿರುವುದೆ ಹೆಚ್ಚು,ಅಂತಹ ಎಲ್ಲ ಯುವಕರಿಗೆ ಯೋಗದ ಕುರಿತು ಸಂದೇಶವನ್ನು ನೀಡುವ ಮೂಲಕ ಸದೃಡ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಾಡಿನ ಅಪರೂಪದ ಸಂತ,ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಜಗದ್ಗುರು ಯೋಗಾಚಾರ್ಯ ಶ್ರೀ ಶಿವಶಂಕರ ಶಿವಾಚಾರ್ಯರು, ಶ್ರೀಗಳು ತಮ್ಮ ಅನೇಕ ಪ್ರವಚನಗಳಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸುವ ಮೂಲಕ ನಾಡಿ
ನಾದ್ಯಂತ ಯೋಗಾದ್ಯಾತ್ಮದ ಮಾರ್ಗದರ್ಶಿಗಳಾಗಿಯೂ ಚಿರಪರಿಚಿತರಾಗಿದ್ದಾರೆ,ಅಷ್ಟೇ ಅಲ್ಲದೆ ಶ್ರೀಗಳು ಶಾಲಾ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಹೇಳುವುದರ ಜೊತೆಗೆ ಜೊತೆಗೆ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಅರಿವೂ ಮೂಡಿಸುವಲ್ಲಿ ಮುಂದಾಗಿದ್ದಾರೆ,
ಆಧ್ಯಾತ್ಮದಷ್ಟೆ ಯೋಗಕ್ಕೂ ಮಹತ್ವ-- ಶ್ರೀಗಳು ಆಧ್ಯಾತ್ಮದಷ್ಟೆ ಯೋಗಕ್ಕೂ ಮಹತ್ವ ನೀಡುವ ಮೂಲಕ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡಿಯೇ ತಮ್ಮ ಮುಂದಿನ ಕಾರ್ಯಕ್ಕೆ ತೊಡಗುತ್ತಾರೆ,ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗಾಗಿ ಬೇಸಿಗೆಯಲ್ಲಿ ಯೋಗ ಹಾಗೂ ಸಂಸ್ಕಾರ ಶಿಬಿರವನ್ನು ಏರ್ಪಡಿಸುವ ಮೂಲಕ ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ,ಶ್ರೀಗಳ ನೇತೃತ್ವದಲ್ಲಿ ನಾಡಿನಾದ್ಯಂತ ಅನೇಕ ಯೋಗ ಶಿಬಿರಗಳು ಜರುಗಿದ್ದು ಹೆಮ್ಮೆಯ ವಿಷಯವೆ ಸರಿ,
ಬಾಬಾ ರಾಮದೇವರ ಬಳಿ ಯೋಗಾಭ್ಯಾಸ- ಶ್ರೀಗಳು ಯೋಗ ಗುರು ಬಾಬಾ ರಾಮದೇವರವರ ಬಳಿ 10 ವರ್ಷಗಳ ಕಾಲ ಯೋಗವನ್ನು ಕಲಿತು ಕರಗತ ಮಾಡಿಕೊಂಡು ಅಪಾರ ಪಾಂಡಿತ್ಯವುಳ್ಳವರಾಗಿದ್ದಾರೆ,ಜೊತೆಗೆ ಅಪಾರ ಭಕ್ತ ಸಮೂಹಕ್ಕೆ ಯೋಗಾಭ್ಯಾಸವನ್ನು ದಾರೆಯರೆಯುತ್ತಿದ್ದಾರೆ,
ಜ್ಞಾನ ಯೋಗಿಯ ಅಪ್ಪಟ್ಟ ಶಿಷ್ಯರು- ಶ್ರೀ ಶಿವಶಂಕರ ಶಿವಾಚಾರ್ಯರು ಬಾಲ್ಯದಲ್ಲಿಯೇ ಮನೆಯನ್ನು ತೊರೆದು ವಿಜಯಪೂರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಗರಡಿಯಲ್ಲಿ ಬೆಳೆದರು, ಶ್ರೀ ಸಿದ್ದೇಶ್ವರ ಶ್ರೀಗಳ ಅನುಗ್ರಹ ಆಶೀರ್ವಾದದಿಂದ ಸನ್ಯಾಸ ದಿಕ್ಷೆ ಪಡೆದು,ಅವರೂ ಸೂಚಿಸಿರುವ ಪೀಠಕ್ಕೆ ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಜಗದ್ಗುರುಗಳಾಗಿ ನೇಮಕಗೊಂಡರು,
ಮೌನ ಯೋಗಿಯ ಪರಮ ಶಿಷ್ಯರು- ಮೌನ ಯೋಗಿ ಜಗದ್ಗುರು ಶ್ರೀ ಶಂಕರ ಶಿವಾಚಾರ್ಯರ ಪರಮ ಶಿಷ್ಯರಾಗಿ ತಮ್ಮ ಗುರುಗಳಂತೆಯೆ ತ್ರಿವಿಧ ದಾಸೋಹದ ಮೂಲಕ ಮಾನವ ಕುಲವನ್ನು ಉದ್ಧರಿಸುವದರ ಜೊತೆಗೆ ಸದೃಡ ಸಮಾಜವನ್ನು ನಿರ್ಮಿಸುವಲ್ಲಿ ಮುಂದಾಗಿದ್ದಾರೆ,
ಜ್ಞಾನ ಯೋಗಿ ಹಾಗೂ ಮೌನ ಯೋಗಿಯ ಅಪ್ಪಟ್ಟ ಶಿಷ್ಯರಾದ ಜಗದ್ಗುರು ಯೋಗಾಚಾರ್ಯ ಶ್ರೀ ಶಿವಶಂಕರ ಶಿವಾಚಾರ್ಯರು, ತಮ್ಮ ಆಧ್ಯಾತ್ಮದ ಭೋಧನೆಯೊಂದಿಗೆ ಯೋಗದ ಜಾಗೃತಿ ಮೂಡಿಸುತ್ತಿರುವುದನ್ನು ಗಮನಿಸಿದಾಗ ನಿಜಕ್ಕೂ ಶ್ರೀಗಳ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು, ಆಧ್ಯಾತ್ಮ ಹಾಗೂ ಯೋಗದಷ್ಟೆ ಶಿಕ್ಷಣಕ್ಕೂ ಮಹತ್ವ ನೀಡಿರುವ ಶ್ರೀಗಳು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಸಮಾಜಮುಖಿ ಕಾರ್ಯದಲ್ಲಿ ತೋಡಗಿಕೊಂಡಿದ್ದಾರೆ.