ಮಾದಕ ವಸ್ತು ಇಡೀ ಜೀವನವೇ ನಾಶ ಮಾಡುತ್ತದೆ : ಸಿಪಿಐ ಮಹ್ಮದ ಫಶುಉದ್ದೀನ್

Jun 20, 2025 - 12:27
 0
ಮಾದಕ ವಸ್ತು ಇಡೀ ಜೀವನವೇ ನಾಶ ಮಾಡುತ್ತದೆ : ಸಿಪಿಐ ಮಹ್ಮದ ಫಶುಉದ್ದೀನ್
ತಾಳಿಕೋಟೆ : ಪಟ್ಟಣದ ಎಸ್.ಕೆ.ಪ.ಪೂ. ಮಹಾ ವಿದ್ಯಾಲಯದ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾದ ಮಾದಕ ವಸ್ತು ನಿಷೇದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಿಪಿಐ ಮಹ್ಮದ ಪಶುಉದ್ದೀನ್ ಅವರು ಮಾತನಾಡಿದರು.
ತಾಳಿಕೋಟೆ :  ಇಂದಿನ ಆಧುನಿಕ ಭರಾಟೆಯಲ್ಲಿರುವ ಯುವ ಸಮೂಹ ಸಿಗರೇಟ್, ಗುಟಕಾ, ತಂಬಾಕು, ಗಾಂಜಾ, ಅಲ್ಲದೇ ಇನ್ನಿತರ ಮಾದಕ ವಸ್ತುಗಳನ್ನು ತಮ್ಮ ಪ್ಯಾಶನ್ ರೀತಿಯಲ್ಲಿ ಬಳೆಸಿಕೊಳ್ಳುತ್ತಾ ತಮ್ಮ ಇಡೀ ಜೀವನವನ್ನೇ ಬಲಿ ಕೊಡುತ್ತಾ ಸಾಗಿರುವದು ದುರದೃಷ್ಠಕರವಾದ ಸಂಗತಿಯಾಗಿದೆ ಇಂತಹ ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳು ದೂರವಿದ್ದು ತಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕೆAದು ಸಿಪಿಐ ಮಹ್ಮದ ಫಶುಉದ್ದೀನ್ ಅವರು ಹೇಳಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಪಧವಿ ಪೂರ್ವ ಮಹಾ ವಿದ್ಯಾಲಯದ ಆವರಣದಲ್ಲಿ ಸ್ಥಳೀಯ ಪೊಲೀಸ್ ಠಾಣೆಯವತಿಯಿಂದ ಏರ್ಪಡಿಸಲಾದ ಮಾದಕ ವಸ್ತು ನಿಷೇದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಮಾದಕ ವಸ್ತುಗಳ ಚಟಕ್ಕೆ ಒಮ್ಮೆ ದಾಸರಾದರೆ ಅದರಿಂದ ಹೊರಬರಲು ಬಹಳೇ ಕಷ್ಟದಾಯಕವಾಗಿದೆ ಕೆಲವು ಕಡೆಗಳಲ್ಲಿ ಯುವಕರು ಒಂದು ಚಟ ತೇಜಿಸಲು ಮತ್ತೊಂದು ಚಟಕ್ಕೆ ದಾಸರಾಗುತ್ತಾರೆ ನಿಷೇದಿತಗೊಂಡಿರುವ ಯಾವುದೇ ಮಾದಕ ವಸ್ತುಗಳಾದರೂ ಕೂಡಾ ಜೀವಕ್ಕೆ ಕಂಟಕವಾಗಿವೆ ವಿದ್ಯಾರ್ಥಿ ಜೀವನವೆಂಬುದು ಸುಂದರ ಜೀವನವಾಗಿ ಈ ಸಮಯದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಸಮಯವಾಗಿದೆ ಇಂತಹ ಮಾದಕ ವಸ್ತುಗಳ ಚಟಕ್ಕೆ ದಾಸರಾಗದೇ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದ ಅವರು ಇಂದಿನ ದಿನಮಾನದಲ್ಲಿ ಸೈಬರ್ ಕ್ರೆöÊಂ ಎಂಬ ಪೇಡಂಭೂತಕ್ಕೆ ಸಾಕಷ್ಟು ಜನರು ವಂಚನೆಗೊಳಗಾಗುತ್ತಿದ್ದಾರೆ ಸಂಪರ್ಕಕ್ಕೆ ಸಿಗದ ಕರೆಗಳ ಮೂಲಕ ಓಟಿಪಿ ಪಡೆದು ಹಣವನ್ನು ವಂಚಿಸಿರುವ ಪ್ರಕರ್ಣಗಳು ಕಂಡುಬರುತ್ತಿವೆ ಸಾಮಾಜಿಕ ಜಾಲತಾಣಗಳನ್ನು ಬಳೆಸುವಾಗಲೂ ಎಚ್ಚರವಹಿಸಬೇಕೆಂದು ತಿಳಿ ಹೇಳಿದ ಅಧಿಕಾರಿ ಮಹ್ಮದ ಪಶುಉದ್ದೀನ್ ಅವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮೊದಲು ರಸ್ತೆ ನಿಯಮಗಳನ್ನು ತಿಳಿದುಕೊಳ್ಳಬೇಕು ಇಂದು ಬೆಳೆಯುತ್ತಿರುವ ನಗರಗಳಲ್ಲಿ ಸಂಚರಿಸುವಾಗ ಏಚ್ಚರವಹಿಸಬೇಕೆಂದು ಅವರು ಇನ್ನೂ ವಯಸ್ಕರಾಗದ ಮಕ್ಕಳನ್ನು ಮಧುವೆ ಮಾಡುವದು ಅಪರಾದವಾಗಿದೆ ಬಾಲ್ಯವಿವಾಹ ನಿಷೇದ ಕಾಯ್ದೆ ಅತ್ಯಂತ ಕಠಿಣವಾದುದ್ದಾಗಿದೆ ಇನ್ನೂ ತಿಳುವಳಿಕೆ ಇಲ್ಲದ ಮಕ್ಕಳಿಗೆ ಮಧುವೆ ಮಾಡುವದರಿಂದ ವಯಸ್ಕರಾದ ಮೇಲೆ ಮನೆಯಲ್ಲಿ ಸಮಸ್ಯೆಗಳ ಸರಮಾಲೆಯಿಂದಲೇ ಸಾಕಷ್ಟು ಕಡೆಗಳಲ್ಲಿ ಬಿಡುಗಡೆ ಹಂತಕ್ಕೆ ಬಂದಿರುವದು ಕಂಡಿದ್ದೇವೆAದ ಅವರು ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ಮಕ್ಕಳ ಸಹಾಯ ವಾಣಿ ೧೯೩೦ಗೆ ಕರೆ ಮಾಡಿ ಮಾಹಿತಿ ನೀಡಬೇಕು ನಿಮ್ಮ ಸಹಾಯಕ್ಕೆ ಪೊಲೀಸ್ ಇಲಾಖೆ ಸದಾ ಕೆಲಸ ಮಾಡುತ್ತದೆ ಎಂದು ಹೇಳಿದ ಅವರು ಲೈಂಗಿಕ ಕಿರುಕುಳ, ಮತ್ತು ಪೋಕ್ಸೋ ಕಾಯ್ದೆ, ಮಹಿಳೆಯರ ರಕ್ಷಣೆ, ಮಾದಕ ವಸ್ತುಗಳ ವೆಸನ ಕುರಿತು ಅಲ್ಲದೇ ಕಾನೂನಿನ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಎಎಸ್‌ಐ ಸಂಜೀವ ಬಾಗೇವಾಡಿ, ಎಸ್.ಕೆ.ಪಿಯು ಕಾಲೇಜ್ ಅಧ್ಯಕ್ಷ ಎಂ.ಆರ್.ಕತ್ತಿ, ಎಸ್.ಕೆ.ಪ್ರೌಢ ಶಾಲೆಯ ಅಧ್ಯಕ್ಷ ಎಂ.ಸಿ.ಕತ್ತಿ, ಪಿಯು ಕಾಲೇಜ್ ಪ್ರಾಚಾರ್ಯ ಕೆ.ಕಿಶೋರಕುಮಾರ, ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಜಗದೀಶ ಕಟ್ಟಿಮನಿ, ಮಹಿಳಾ ಕಾಲೇಜ್ ಪ್ರಾಚಾರ್ಯ ಶ್ರೀಮತಿ ಜೆ.ಸಿ.ಹಿರೇಮಠ, ಉಪನ್ಯಾಸಕ ಎಸ್.ಎಸ್.ನೆಲ್ಲಗಿ, ಪೊಲೀಸ್ ಸಿಬ್ಬಂದಿಗಳಾದ ಎಂ.ಎಲ್.ಪಟ್ಟೇದ, ಸಿದ್ದನಗೌಡ ದೊಡಮನಿ, ರವಿ ಬಿರಾದಾರ, ಬಸವರಾಜ ಹಡಲಗಿ, ರಾಮನಗೌಡ ಬಿರಾದಾರ, ಹಾಗೂ ಪಿಯು ಕಾಲೇಜ್ ಮತ್ತು ಪ್ರೌಢ ಶಾಲಾ ವಿಭಾಗದ ಸಿಬ್ಬಂದಿಗಳು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.