ಸಂಗನಬಸವ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಣೆ

Jun 22, 2025 - 09:06
 0
ಸಂಗನಬಸವ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಣೆ

ವಿಜಯಪುರ : ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ವಸತಿ ಪದವಿ ಪೂರ್ವ ಕಾಲೇಜು, ಮತ್ತು ಅಂತರಾಷ್ತಿçÃಯ ವಸತಿ ಶಾಲೆ ಕವಲಗಿಯಲ್ಲಿ  ನಡೆದ ೧೧ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಯೋಗ ಶಿಕ್ಷಕ ಮಲ್ಲಿಕಾರ್ಜುನ್ ಬಿ. ಅವರು ಮಕ್ಕಳಿಗೆ ತಾಡಾಸನ, ತ್ರಿಕೋನಾಸನ, ವಜ್ರಾಸನ, ಪದ್ಮಾಸನ, ವೃಕ್ಷಾಸನ ಮುಂತಾದ ಆಸನಗಳನ್ನು ಮಾಡಿಸುವುರೊಂದಿಗೆ ಆಚರಿಸಲಾಯಿತು.            

೨೦೨೪-೨೫ನೇ ಸಾಲಿನ ರಾಷ್ಟçಮಟ್ಟದ ಸ್ಪರ್ಧೇಯಲ್ಲಿ ವಿಜೇತರಾದ ಮುತ್ತಪ್ಪ ಎಚ್. ಹಾಗೂ ಸುಷ್ಮಾ ಬಿ. ಅತಿಥಿಗಳಾಗಿ ಆಗಮಿಸಿ ಯೋಗದ ವಿವಿಧ ವಿಶೇಷ ಆಸನಗಳನ್ನು ಮಕ್ಕಳ ಮುಂದೆ ಪ್ರಸ್ತುತ ಪಡಿಸಿದರು.        “ಯೋಗ ಹಾಗೂ ಸಂಗೀತ ಮನಸ್ಸಿಗೆ ಶಾಂತಿ ಸುಖ ನೀಡುವುದರೊಂದಿಗೆ ಆತ್ಮ ಸಾಕ್ಷಾತ್ಕಾರಕ್ಕೂ ಪ್ರೇರಕವಾಗುತ್ತದೆ" ಎಂದು ಪ್ರಾಚಾರ್ಯ ಹೇಮಂತ್ ಕೃಷ್ಣ ಅವರು ಯೋಗದ ಮಹತ್ವವನ್ನು ತಿಳಿಸಿದರು.        

ಶಾಲಾ ಪ್ರಾಚಾರ್ಯೆ ಶ್ರೀಮತಿ ಶರ್ಮಿಳಾ ಹೇಮಂತ್ ಅವರು “ವ್ಯಾಯಾಮ ದೇಹವನ್ನು ಸದೃಢಗೊಳಿಸಿದರೆ ಯೋಗವು ಮನಸ್ಸು ಮತ್ತು ದೇಹ, ಎರಡನ್ನು ಬಲಿಷ್ಠಗೊಳಿಸುತ್ತದೆ ಆದ್ದರಿಂದ ನಿತ್ಯ ಯೋಗವನ್ನು ರೂಢಿಸಿಕೊಳ್ಳಬೇಕು” ಎಂದರು.                  

ದೈಹಿಕ ಶಿಕ್ಷಕರಾದ ಕಿರಣ್ ಮಲ್ಲೂರ ಅವರು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿ ಕುಮಾರ ಹರ್ಷವರ್ಧನ್ ಒಡೆಯರ್ ಸ್ವಾಗತಿಸಿದರು. ಕುಮಾರಿ ಸಮೃದ್ಧಿ ಮದರಿ ವಂದನಾರ್ಪಣೆ ಮಾಡಿದಳು. ಕುಮಾರ ರಿತಿಕ್ ಸಾಲಿ ನಿರೂಪಿಸಿದರು.        

ಈ ಕಾರ್ಯಕ್ರಮದಲ್ಲಿ ಶಾಲೆ ಹಾಗೂ ಕಾಲೇಜಿನ ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.