ಯೋಗದ ಮಹತ್ವ ಸಾರಿದ ಭಾರತ ಋಷಿಮುನಿಗಳು : ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ

Jun 22, 2025 - 09:09
 0
ಯೋಗದ ಮಹತ್ವ ಸಾರಿದ ಭಾರತ ಋಷಿಮುನಿಗಳು : ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ
ಬಂದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿವಸ ಆಚರಣೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಚಾಲನೆ ನೀಡಿ ಮಾತನಾಡಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ : ಹಲವು ಶತಮಾನಗಳ ಹಿಂದೆಯೇ ಭಾರತದ ಋಷಿಮುನಿಗಳು ವಿಶ್ವಕ್ಕೆ ಯೋಗದ ಮಹತ್ವದ ಅರಿವು ಮೂಡಿಸಿದ್ದಾರೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ಹೇಳಿದರು.            

ತಾಲೂಕು ಬಂದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿವಸ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.        

ಇಂದಿನ ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ನಾವುಗಳು, ಯೋಗದಿಂದ ದೂರ ಉಳಿಯುತ್ತಿದ್ದೇವೆ ಎಂದು ವಿಶಾದ ವ್ಯಕ್ತಪಡಿಸಿ, ಯೋಗದಿಂದ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ದೈಹಿಕವಾಗಿ, ಮಾನಸಿಕವಾಗಿ ಸ್ಟೈರ್ಯ ಬರುವದಲ್ಲದೇ ಅದರಿಂದ ಹಲವು ರೋಗರುಜಿನಗಳಿಂದ ಕೂಡಾ ದೂರ ಇರಬಹುದು ಎಂದು ತಿಳಿಸಿದರು.    

ಪ್ರೌಢ ಶಾಲೆ ದೈಹಿಕ ಶಿಕ್ಷಕಿ ಸವಿತಾ ಇಂಗಳಗಿ ಅವರು ಯೋಗವನ್ನು ನಡೆಸಿಕೊಟ್ಟರು ಸೂರ್ಯ ನಮಸ್ಕಾರದಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಹಠ ಸೂರ್ಯ ನಮಸ್ಕಾರ, ಅಯ್ಯಂಗಾರ್ ಸೂರ್ಯ ನಮಸ್ಕಾರ ಮತ್ತು ಅಷ್ಟಾಂಗ ಸೂರ್ಯ ನಮಸ್ಕಾರ ಇವುಗಳ ಉಪಯುಕ್ತ ಮಾಹಿತಿ ನೀಡಿ ಯೋಗಾಭ್ಯಾಸ ಮಾಡಿಸಿದರು.        

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಗ್ರಾಪಂ ಅದ್ಯಕ್ಷ ಯಮನಪ್ಪ ಹೊಸಮನಿ, ಐಇಸಿ ಸಂಯೋಜಕ ಭೀಮರಾಯ ಚೌಧರಿ, ಕಾರ್ಯದರ್ಶಿ ರಾಜಾಸಾಬ್ ಮುಜಾವರ, ಪ್ರ.ದ.ಸ. ರಾಜಶೇಖರ ಹಿರೇಕುರುಬರ, ರಾಜು ವಡ್ಡರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.