ಮಾದಕ ವ್ಯಸನಿಗಳಿಂದ ವಿದ್ಯಾರ್ಥಿಗಳು ದೂರವಿರಿ : ಸಿಪಿಐ ಮಲ್ಲಯ್ಯ ಮಠಪತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ವಿಜಯಪುರ ನಗರದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿ0ಗ್ ಆಂಡ್ ಟೆಕ್ನಾಲಜಿಯಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಸಂಚಾರಿ ನಿಯಮಗಳ ಅರಿವು ಹಾಗೂ ಸೈಬರ್ ಸೆಕ್ಯೂರಿಟಿಗಳ ಬಗ್ಗೆ ಜಾಗೃತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಜಲನಗರ ಪೋಲೀಸ್ ಠಾಣೆಯ ಪಿಎಸ್‌ಐ ಸಂಗಾಪೂರ, ಸಿಪಿಐ ಮಲ್ಲಯ್ಯ ಮಠಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಕಷ್ಟು ಯುವ ಪೀಳಿಗೆ ದಿನೇ ದಿನೇ ಮಾದಕ ವ್ಯಸನಿಗಳಾಗುತ್ತಿದ್ದು ಮಕ್ಕಳು, ಯುವಕರು ಮಾದಕ ದ್ರವ್ಯಗಳತ್ತ ಆಕರ್ಷಿತರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಹೀಗಾಗಿ ವಿದ್ಯಾರ್ಥಿಗಳಾದವರು ಮಾದಕ ವ್ಯಸನದಿಂದ ದೂರವಾಗಿರಬೇಕು ಮಾದಕ ದ್ರವ್ಯ ಸೇರಿದಂತೆ ನಾನಾ ಚಟಗಳಿಂದ ಅದೇಷ್ಟೋ ವಿದ್ಯಾರ್ಥಿಗಳು ಹಾಳಾಗಿ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ ಹಾಗಾಗಿ ಅದರಿಂದ ದೂರ ಇದಷ್ಟು ಒಳ್ಳೆಯದೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇನ್ನು ಸಂಚಾರ ನಿಯಮದ ಉಲ್ಲಂಘನೆಯಿ0ದ ಪ್ರಾಣಾಪಾಯ ಸಂಭವಿಸುತ್ತದೆ ಹಾಗಾಗಿ, ಅತ್ಯಮೂಲ್ಯ ಜೀವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹೆಲ್ಮೆಟ್ ರಹಿತ ಬೈಕ್ ಚಾಲನೆ ಮಾಡಿದರೆ ಅದು ಅಪರಾಧವಾಗುತ್ತದೆ. ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದಾಗ ನಿಮ್ಮ ಸಹಾಯ ಹಸ್ತವನ್ನು ಚಾಚಿ ನೆರವಾಗಬೇಕು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮತ್ತು ನಾಲ್ಕು ಚಕ್ರದ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇದರಿಂದ ಅನಾಹುತವನ್ನು ತಪ್ಪಿಸಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಿಕ್ಯಾಬ್‌ನ ಎಐಎಂಎಲ್ ವಿಭಾಗದ ಮುಖ್ಯಸ್ಥ ಅಸ್ಲಂ ಕರ್ಜಗಿಯವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್, ಇಂಟರ್ನೆಟ್ ಮತ್ತು ಸ್ಮಾರ್ಟ್ ಫೋನುಗಳು ಆಧುನಿಕ ಬದುಕಿನ ಆಧಾರಸ್ತಂಭಗಳಾಗಿರುವ ಹೊತ್ತಿನಲ್ಲೇ ಅವು ದಿನನಿತ್ಯದ ಜೀವನದ ಸವಾಲುಗಳಾಗಿಯೂ ಪರಿಣಮಿಸಿವೆ. ಮತ್ತು ಇಂದು ಅಂತರ್ಜಾಲ ಎನ್ನುವುದು ನಮ್ಮಲ್ಲರಿಗೂ ತವರು ಮನೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಗೆಳೆಯ ಗೆಳತಿಯರ ಗುಂಪೊ0ದನ್ನು ಸೃಷ್ಟಿ ಮಾಡಿಕೊಂಡು ತಮ್ಮ ಯಾವುದಾದರೂ ಪೋಟೋ ಅಪ್ಲೋಡ್ ಮಾಡುತ್ತಾರೆ. ಕಾಮೆಂಟ್ಸ ಹಾಗೂ ಲೈಕ್ಸ್ ಗಳನ್ನು ನೋಡಿಕೊಂಡು ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿರುತ್ತಾರೆ. ನೀವು ಪೋಸ್ಟ್ ಮಾಡಿರುವ ಪೊಟೊಗಳು ಸೈಬರ್ ಕಳ್ಳರು ದುರುಪಯೋಗ ಪಡೆಸಿಕೊಳ್ಳುತ್ತಾರೆಂದು ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಿಕ್ಯಾಬ್ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸೈಯದ್ ಅಬ್ಬಾಸ್ ಅಲಿ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ನೇತ್ರಾವತಿ ಪುರೋಹಿತ, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕ ಆಶಿಪ್ ಇಕ್ಬಾಲ್ ದೊಡಮನಿ. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ ಪ್ರೋ ಸಚಿನ್ ಪಾಂಡೆ, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.