ಮಹಿಳಾ ವಿವಿಯಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

Jun 22, 2025 - 09:02
 0
ಮಹಿಳಾ ವಿವಿಯಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ೧೧ನೆಯ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಯೋಗವನ್ನು ಪ್ರತಿದಿನದ ಜೀವನದ ಭಾಗವನ್ನಾಗಿ ಮಾಡಿಕೊಂಡರೆ, ಸುಸ್ಥಿರ ಆರೋಗ್ಯ ಮತ್ತು ಸಂತುಷ್ಟ ಜೀವನ ಸಾಧ್ಯವಾಗುತ್ತದೆ ಎಂದು ವಿಜಯಪುರದ ಶಾರದಾಶ್ರಮದ ಕೈವಲ್ಯಮಯಿ ಮಾತಾಜಿ ಹೇಳಿದರು.                      

 ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ೧೧ನೆಯ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವೇಗದ ಯುಗದಲ್ಲಿ ಮಾನವನಿಗೆ ಮಾನಸಿಕ ಮತ್ತು ದೈಹಿಕ ಸಮತೋಲನ ಅತ್ಯಂತ ಅಗತ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯೋಗ ಒಂದು ವರದಾನದಂತೆ ಪರಿಣಮಿಸಿದೆ. ಯೋಗದ ಮೂಲಕ ವ್ಯಕ್ತಿ ತನ್ನ ದೇಹ, ಮನಸ್ಸು ಹಾಗೂ ಉಸಿರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದರಿಂದ ಮಾನಸಿಕ ಒತ್ತಡ, ಆತಂಕ, ಡಿಪ್ರೆಷನ್ ಮುಂತಾದ ಸಮಸ್ಯೆಗಳಿಂದ ಮುಕ್ತಿ ದೊರಕುತ್ತದೆ. ಪ್ರತಿದಿನ ೩೦ ನಿಮಿಷ ಯೋಗ ಅಭ್ಯಾಸ ಮಾಡಿದರೆ ದೀರ್ಘಕಾಲಿಕ ಆರೋಗ್ಯಕ್ಕೆ ಪೂರಕವಾಗುತ್ತದೆ. ಯೋಗವು ಕೇವಲ ದೇಹದ ವ್ಯಾಯಾಮವಷ್ಟೆ ಅಲ್ಲ; ಅದು ಮನಸ್ಸಿನ ಶಾಂತಿ, ಚಿಂತನ ಶಕ್ತಿ ಹಾಗೂ ಆತ್ಮದ ಶುದ್ಧತೆಗೆ ದಾರಿ ಒದಗಿಸುತ್ತದೆ ಎಂದರು.                                

ಇದೇ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವೈಯಕ್ತಿಕ ಆರೋಗ್ಯ ಸುಧಾರಿತವಾದಾಗ, ಅದು ಒಬ್ಬ ವ್ಯಕ್ತಿಯಿಂದ ಕುಟುಂಬಕ್ಕೆ, ಸಮಾಜಕ್ಕೆ ವ್ಯಾಪಿಸುತ್ತಾ, ಒಟ್ಟಾರೆ ಶಾಂತಿಯುತ ಹಾಗೂ ಸುಂದರವಾದ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ದಿನದಲ್ಲೊಂದು ತುಣುಕು ಸಮಯವನ್ನು ಯೋಗಕ್ಕೆ ಮೀಸಲಿಟ್ಟು, ಸ್ವಯಂ ಆರೋಗ್ಯವಂತರಾಗುವ ಪ್ರಯತ್ನವನ್ನು ಮಾಡಬೇಕು ಎಂದರು.        

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಸೂಕ್ತವಾದ ಚಟುವಟಿಕೆ ಮತ್ತು ಯೋಗದಿಂದ ನೆನಪಿನ ಶಕ್ತಿ ಜೀರ್ಣಶಕ್ತಿ ಮತ್ತು ಗ್ರಹಣ ಶಕ್ತಿಗಳು ಹೆಚ್ಚಾಗುತ್ತವೆ ಇದರಿಂದ ವಿದ್ಯಾಭ್ಯಾಸಕ್ಕೆ ಮತ್ತು ಆರೋಗ್ಯ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.                                

 ಕಾರ್ಯಕ್ರಮದಲ್ಲ್ಲಿ ವಿಭಾಗದ ಎಲ್ಲಾ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯ ಬೇರೆ ಬೇರೆ ವಿಭಾಗಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ ಸ್ವಾಗತಿಸಿ, ಪ್ರ‍್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ತೇಜಸ್ವಿನಿ ನಿರೂಪಿಸಿದರು. ಪ್ರೊ.ಜ್ಯೋತಿ ಉಪಾಧ್ಯಾಯ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.