ಯಾಂತ್ರಿಕ ಬದುಕಿಗೆ ಯೋಗಾಭ್ಯಾಸ ಅತ್ಯಗತ್ಯ : ಸುರೇಶಗೌಡ ಬಿರಾದಾರ

Jun 21, 2025 - 11:10
 0
ಯಾಂತ್ರಿಕ ಬದುಕಿಗೆ ಯೋಗಾಭ್ಯಾಸ ಅತ್ಯಗತ್ಯ : ಸುರೇಶಗೌಡ ಬಿರಾದಾರ

ವಿಜಯಪುರ: ಇಂದಿನ ಯಾಂತ್ರಿಕ ಬದುಕಿನಲ್ಲಿ ಯೋಗಾಭ್ಯಾಸ ಅತ್ಯಗತ್ಯವಾಗಿದ್ದು, ಯೋಗ ಎಲ್ಲಾ ರೋಗಕ್ಕೂ ಮದ್ದಾಗಿದೆ ಎಂದು ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಹೇಳಿದರು.
        ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ  ಹಮ್ಮಿಕೊಂಡ 'ಅಂತಾರಾಷ್ಟ್ರೀಯ ಯೋಗ ದಿನ' ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
   ಸಮಾಜದಲ್ಲಿ ಇತರರೊಡನೆ ಬೆರೆಯುವ ಮನೋಸ್ಥೈರ್ಯ ಹೆಚ್ಚಾಗಬೇಕೆಂದರೆ ಯೋಗಾಭ್ಯಾಸ ಮಾಡಬೇಕು. ಇದರಿಂದ ತನ್ನ ಮನಸ್ಸಿನ ಮೇಲೆ ನಿಯಂತ್ರಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
       ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿ,
ಯೋಗವು ಭಾರತೀಯ ಸಂಸ್ಕ್ರತಿಯ ಮೂಲ ಬೇರು. ಇಡೀ ವಿಶ್ವಕ್ಕೆ ನಮ್ಮ ದೇಶದ ಪರಿಚಯ ಆಗಿರುವುದೇ ಯೋಗ ಮತ್ತು ಅಧ್ಯಾತ್ಮಿಕತೆಯಿಂದ. ಯೋಗವು ಆರೋಗ್ಯ ವೃದ್ಧಿಸುವ ಸಾಧನವಾಗಿದೆ ಎಂದು ಹೇಳಿದರು.
        ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಹಾಗೂ ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಸಚೀನ ಅವಟಿ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಲಕ್ಷ್ಮೀ ಮಸೂತಿ,ರೇಣುಕಾ ಭಜಂತ್ರಿ, ಶ್ರುತಿ ಪೂಜಾರಿ, ಸಿದ್ದು ರತ್ನಾಕರ, ರಾಜಶೇಖರ ಶಿರಶ್ಯಾಡ, ಅಲ್ಲಾಭಕ್ಷ ಇನಾಮದಾರ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.