ಶಾಲಾ ವಿದ್ಯಾರ್ಥಿಗಳಿಗಾಗಿ ಥೈರಾಯ್ಡ್ ಜಾಗೃತಿ ಶಿಬಿರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯಿಂದ ನಗರದ ವಿವೇಕನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲಾ ವಿದ್ಯಾರ್ಥಿಗಳಿಗಾಗಿ ಥೈರಾಯ್ಡ್ ಜಾಗೃತಿ ಶಿಬಿರ ಏರ್ಪಡಿಸಲಾಯಿತು.
ಈ ಶಿಬಿರದಲ್ಲಿ ಥೈರಾಯ್ಡ್ ನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ಮತ್ತು ಲಕ್ಷಣಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಥೈರಾಯ್ಡ್ ಲಕ್ಷಣಗಳು ಕಂಡುಬAದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಪಡೆದುಕೊಳ್ಳಬೇಕು. ಥೈರಾಯ್ಡ್ ಗ್ರಂಥಿಯ ಕಾರ್ಯ ಮತ್ತು ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡ ನಂತಹ ಸಾಮಾನ್ಯ ಸಮಸ್ಯೆಗಳ ಕುರಿತು ತಿಳಿಸಲಾಯಿತು. ನಂತರ ಶಿಬಿರದಲ್ಲಿ ಭಾಗವಹಿಸಿದ್ದ ೧೩೩ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಉಚಿತ ಪ್ರಾಥಮಿಕ ಥೈರಾಯ್ಡ್ ತಪಾಸಣೆ ಮಾಡಲಾಯಿತು. ಥೈರಾಯ್ಡ್ ಆರೋಗ್ಯವನ್ನು ಬೆಂಬಲಿಸುವ ಜೀವನಶೈಲಿ ಅಭ್ಯಾಸಗಳು ಮತ್ತು ಆಹಾರ ಪದ್ಧತಿಗಳ ಬಗ್ಗೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ತಿಳಿಸಲಾಯಿತು.
ಈ ಶಿಬಿರವನ್ನು ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ಅಧ್ಯಕ್ಷ ಸುರೇಶ್ ದೇಸಾಯಿ ಉದ್ಘಾಟಿಸಿದರು. ವೈದ್ಯಕೀಯ ವಿಭಾಗ ಡೀನ್ ಡಾ. ತೇಜಸ್ವಿನಿ ವಲ್ಲಭ, ಡಾ. ಶ್ರುತಿ ಶೆಲಿಯನ್, ಡಾ. ಶಿವರಾಜ್ ಎಸ್. ಮಂಗ್ಯಾಲ್, ಡಾ. ಸ್ನೇಹಲ್ ಪಾಟೀಲ್, ಕಂಠೀರವ್ ಕುಲ್ಲೋಳಿ ಸೇರಿದಂತೆ ಸಮಾಲೋಚಕರು ಉಪಸ್ಥಿತರಿದ್ದರು. ಆಸ್ಪತ್ರೆ ಜನರಲ್ ಸರ್ಜರಿ ವಿಭಾಗ ಪ್ರಾಧ್ಯಾಪಕ ಡಾ. ಗಿರೀಶ್ ಕುಲ್ಲೋಳಿ ಪರಿಚಯಿಸಿದರು.