ಯೋಗ ಮಾಡುವುದರಿಂದ ಮಾನಸಿಕ ಆರೋಗ್ಯವಾಗಿರಲು ಸಾಧ್ಯ

Jun 22, 2025 - 09:17
 0
ಯೋಗ ಮಾಡುವುದರಿಂದ ಮಾನಸಿಕ ಆರೋಗ್ಯವಾಗಿರಲು ಸಾಧ್ಯ
ನಿಡಗುಂದಿಯ ಜಿವಿವಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವಯೋಗದಿನ ಕಾರ್ಯಕ್ರಮವನ್ನು ಸಂಸ್ಥೆ ಚೇರ್ಮನ್ ಸಿದ್ಧಣ್ಣ ನಾಗಠಾಣ ಉದ್ಘಾಟಿಸಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ನಿಡಗುಂದಿ: ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ಜಿವಿವಿಎಸ್ ಸಮೂಹ ಸಂಸ್ಥೆ ಚೇರ್ಮನ್ ಸಿದ್ಧಣ್ಣ ನಾಗಠಾಣ ಹೇಳಿದರು.

               ಪಟ್ಟಣದ ಜಿವಿವಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ಅಂತರಾಷ್ಟಿçÃಯ ಯೋಗದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗವು ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಭಾರತೀಯರಾದ ನಾವು ಪ್ರತಿದಿನ ಯೋಗವನ್ನು ಮಾಡುವುದರಿಂದ ಮಾನಸಿಕ ಒತ್ತಡದಿಂದ ಬರುವ ಅನೇಕ ರೋಗಗಳನ್ನು ನಿಗ್ರಹಿಸಬಹುದು ಎಂದರು.            

ದೈಹಿಕ ಶಿಕ್ಷಕ ಎಸ್.ಎಂ ಹೆಬ್ಬಾಳ ಮಾತನಾಡಿ, ಋಷಿ ಮುನಿಗಳಿಂದ ಉಡುಗೊರೆಯಾಗಿ ಬಂದಿರುವ ಯೋಗ ಶಿಕ್ಷಣ, ಇಂದು ದೇಶ ವಿದೇಶಗಳಲ್ಲಿ ವ್ಯಾಪಿಸಿದೆ.     ದೇಹದ ಸರ್ವಾಂಗೀಣ ಆರೋಗ್ಯಕ್ಕೆ ಯೋಗ ಉತ್ತಮ ಕ್ರಿಯೆ. ಯೋಗದ ಮೂಲಕ ಜಗತ್ತೇ ಆರೋಗ್ಯ ಪೂರ್ಣವಾಗಿರಬೇಕು ಎಂಬುದಾಗಿದೆ. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಆರೋಗ್ಯಯುತ ಜೀವನ ನಡೆಸಬೇಕು ಎಂದರು.                

ಈ ವೇಳೆಯಲ್ಲಿ ಜಿವಿವಿಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ: ಅನುಪ್ ನಾಗಠಾಣ ಹಾಗೂ ಶಿಕ್ಷಣ ಸಂಸ್ಥೆಯ ಶಿಕ್ಷಕ ಸಿಬ್ಬಂದಿ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.