ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸಮತೋಲನಕ್ಕೆ ಯೋಗ ಅಗತ್ಯ

Jun 22, 2025 - 09:20
 0
ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸಮತೋಲನಕ್ಕೆ ಯೋಗ ಅಗತ್ಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ: ಯೋಗವು ನಮ್ಮ ದೇಶದಲ್ಲಿ ಸುಮಾರು ೬ ರಿಂದ ೭ ಸಾವಿರ ವರ್ಷಗಳ ಹಿಂದೆಯೇ ಇರುವ ಜಾಗತಿಕ ವಿದ್ಯೆ. ಯೋಗ ಒಂದು ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ತಿಳಿಸುತ್ತದೆ. ಇದು ವ್ಯಕ್ತಿಯ ಮನಸ್ಸು, ದೇಹದಲ್ಲಿ ಸಮತೋಲನವನ್ನು ಕಾಪಾಡಲು ಹಾಗೂ ಕ್ರಿಯೆ, ಸಂಯಮ, ಚಿಂತನೆ, ಏಕಾಗ್ರತೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವನ್ನಾಗಿಸುತ್ತದೆ. ಯೋಗದಿಂದ ಒತ್ತಡ, ಆತಂಕ ಮತ್ತು ಸಂಘರ್ಷಯುಕ್ತವಾದ ಜೀವನದಿಂದ ಮುಕ್ತಿ ಹೊಂದಲು ಸಾಧ್ಯ. ನಮ್ಮ ಋಷಿ-ಮುನಿಗಳು ನೀಡಿದ ಈ ಯೋಗದ ಕೊಡುಗೆ ಇಂದು ಇಡೀ ಜಗತ್ತಿಗೆ ಆರೋಗ್ಯ-ಸ್ವಾಸ್ಥö್ಯ ಕಾಪಾಡುವ ಸಾಧನವಾಗಿದೆ ಮುಖ್ಯ ಗುರುಮಾತೆ ಶ್ರೀಮತಿ. ಎಸ್.ಎಸ್.ಕೊಪ್ಪದ ಅಭಿಪ್ರಾಯಪಟ್ಟರು.        

ಅವರು ಬಬಲೇಶ್ವರ ತಾಲೂಕಿನ ತೊರವಿ ವಸ್ತಿ ಹೊಕ್ಕುಂಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ ೨೧ ರಂದು ಅಂತರಾಷ್ಟಿçÃಯ ಯೋಗ ದಿನದ ಪ್ರಯುಕ್ತ ಹಮ್ಮಿಕೊಂಡ ಯೋಗ ಶಿಬಿರ ದಲ್ಲಿ ಮಾತನಾಡುತ್ತಿದ್ದರು.              

ಇಂದಿನ ಒತ್ತಡಮಯ ಮತ್ತು ಸಂಘರ್ಷಮಯವಾದ ಜೀವನದಲ್ಲಿ ನಾವೆಲ್ಲರೂ ಯೋಗ, ವ್ಯಾಯಾಮ ಮಾಡುವುದರ ಮೂಲಕ ಮಾನಸಿಕ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಕೇವಲ ಈ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಿದರೆ ಸಾಲದು. ಇದು ಪ್ರತಿನಿತ್ಯದ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವದರೊಂದಿಗೆ ರಾಷ್ಟçದ ಸ್ವಾಸ್ಥö್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾಗಬೇಕಾಗಿರುವುದು ಅತಿ ಅವಶ್ಯವೆಂದು ಹೇಳಿದರು.                    

ಶಿಕ್ಷಕಿ ಎಸ್.ಜಿ.ರೆಬಗೊಂಡ ಅವರು ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮೀತಿ ಸದಸ್ಯರು ಹಾಗೂ ಪಾಲಕರು ಸಹ ಪಾಲ್ಗೊಂಡಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.