ಪೊಲೀಸ್ ಇಲಾಖೆಯ ‘ರೋಲ್ ಮಾಡೆಲ್’ ಎಸ್ಪಿ ಲಕ್ಷ್ಮಣ ನಿಂಬರಗಿ : ಗುಮ್ಮಟನಗರಿ ಖಾಕಿ ಪಡೆಗೆ ಹ್ಯಾಟ್ಸಪ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ರಾಷ್ಟ್ರೀಕೃತ ಕ್ಯಾನರಾ ಬ್ಯಾಂಕಿನ ದರೋಡೆ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿ, ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಗುಮ್ಮಟನಗರಿ ವಿಜಯಪುರ ಪೊಲೀಸ್ ಇಲಾಖೆಗೆ ಅಮ್ಮ ಫೌಂಡೇಶನ್ ವತಿಯಿಂದ ಸಾವಿರ ಸೆಲ್ಯೂಟ್.
ಕರ್ನಾಟಕ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ದರೋಡೆ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರ ಬುದ್ದಿಮತ್ತೆ, ಅವಿರತ ಶ್ರಮ, ಚಾಣಾಕ್ಷತೆ, ಸಿಬ್ಬಂಧಿಗಳ ಜೊತೆ ಸೇವಾ ಕಾರ್ಯ, ಇಡೀ ಪ್ರಕರಣ ಸುಖಾಂತ್ಯಗೊಳಸುವಲ್ಲಿ ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿಯೇ ಅತೀ ದೊಡ್ಡ ದರೋಡೆ ಪ್ರಕರಣ ಇದಾಗಿದ್ದು, ಪೊಲೀಸ್ ಇಲಾಖೆಯ ನಿದ್ದೆಗೆಡಿಸಿತ್ತು. ಆದರೆ ಎಲ್ಲದಕ್ಕೂ ಸಮರ್ಥರೆನಿಸಿರುವ ನಮ್ಮ ವಿಜಯಪುರ ಪೊಲೀಸ್ ಇಡೀ ಪ್ರಕರಣವನ್ನು ಅತ್ಯಂತ ಕರಾರುವಕ್ಕಾಗಿ ನಿಭಾಯಿಸಿ ಸೈ ಎನಿಸಿಕೊಂಡಿರುವುದು ಶ್ಲಾಘನೀಯವಾಗಿದೆ.
ಅದರಲ್ಲೂ ಯಜಮಾನನಂತಿರುವ ಎಸ್‌ಪಿ ಅವರ ಸರಳ ಸ್ವಭಾವ, ಕ್ರೀಯಾಶೀಲತೆ, ವೃತ್ತಿ ಗಾಂಭೀರ್ಯ ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.
ಪೊಲೀಸ್ ಇಲಾಖೆಯ ‘ರೋಲ್ ಮಾಡೆಲ್’ ಆಗಿರುವ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ನಮ್ಮ ಜಿಲ್ಲೆಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ. ದರೋಡೆ ವಸ್ತುಗಳನ್ನು ಮರಳಿ ಪಡೆದು ಇಡೀ ದೇಶ ಮೆಚ್ಚುವಂತೆ ಮಾಡಿದ ಕಾರ್ಯ ಸ್ಮರಣೀಯವಾಗಿದೆ. ಇಡೀ ದೇಶಕ್ಕೆ ಕರ್ನಾಟಕ ಪೊಲೀಸ್ ಖದರ್ ಇಮ್ಮಡಿಗೊಳಿಸಿದ ಇಡೀ ಪೊಲೀಸ್ ತನಿಖಾ ತಂಡಕ್ಕೆ ವಿಜಯಪುರದ ಅಮ್ಮ ಫೌಂಡೇಶನ್ ಸಂಚಾಲಕ ಕಬೂಲ್ ಕೊಕಟನೂರ ತುಂಬು ಹೃದಯದ ಕೃತಜ್ಞತೆಗಳು ಸಲ್ಲಿಸಿದ್ದಾರೆ.