ಗೊಬ್ಬರ ಕೃತಕ ಅಭಾವ ಸೃಷ್ಟಿಗೆ ಆಕ್ರೋಶ

Jul 22, 2025 - 23:11
 0
ಗೊಬ್ಬರ ಕೃತಕ ಅಭಾವ ಸೃಷ್ಟಿಗೆ ಆಕ್ರೋಶ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಇಂಡಿ : ತಾಲೂಕಿನಲ್ಲಿ ಕೃಷಿ ಪರಿಕರಗಳ ಮಾರಾಟಗಾರರು ಡಿಎಪಿ ಮತ್ತು ಯುರಿಯಾ ಗೊಬ್ಬರ ಕೃತಕ ಅಭಾವ ಸೃಷ್ಟಿಸಿ ದಾಸ್ತಾನು ಮಾಡಿಟ್ಟುಕೊಂಡು  ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ  ರೈತರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೊಗಿ ನೇತೃತ್ವದಲ್ಲಿ ಕಂದಾಯ ಉಪವಿಬಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಕೂಡ ಮಾಡಿದ್ದಾರೆ.        

ಆದರೆ ಇಂದಿಗೂ ಯಾವದೇ ಕ್ರಮ ಕೈಕೊಳ್ಳದೆ ಕಾರಣ ಮಾರಾಟಗಾರರು ರೈತರಿಗೆ  ಹೆಚ್ಚಿನ ದರ ಹಾಗೂ ಪರ್ಯಾಯವಾಗಿ ನ್ಯಾನೋ ಗೊಬ್ಬರವನ್ನು ಪೂರೈಕೆ ಮಾಡುತ್ತಿದ್ದಾರೆ.        

ಡಿಎಪಿ ಮತ್ತು ಯೂರಿಯಾ ಅವಶ್ಯವಿರುವಷ್ಟು  ಎಂಆರ್‌ಪಿ ಬೆಲೆಯಲ್ಲಿ ಕೊಡಬೇಕು. ಗೊಬ್ಬರ ಇಲ್ಲವೆಂದು ಬೇರೆ ಲಿಕ್ವಿಡ್  ಕೊಡುತ್ತಿದ್ದಾರೆ.  ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಗೋದಾಮಿನಲ್ಲಿ ಬಚ್ಚಿಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆದೂರು ದಾಖಲೆ ಮಾಡಿ ಕಠಿಣ ಕ್ರಮ ಕೈಕೊಳ್ಳಬೇಕು ಕಡ್ಡಾಯವಾಗಿ ಕಾನೂನು ಬಾಹಿರವಾಗಿ ನ್ಯಾನೋ ಡಿಎಪಿ ಮತ್ತು  ಯುರಿಯಾ ರೈತರಿಗೆ ಕೊಡುವದನ್ನು ತಡೆಯಬೇಕು.        

ನಕಲಿ ರಸಗೊಬ್ಬರ ಕ್ರಿಮಿನಾಶಕಗಳ ಉತ್ಪಾದಕರು ಮತ್ತು ಮಾರಾಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡು  ಬಂಧಿಸಬೇಕು.       ರಸಗೊಬ್ಬರ ಮತ್ತು ಕ್ರಿಮಿನಾಶಕ ಬೀಜಗಳಿಗೆ  ಕಡ್ಡಾಯವಾಗಿ ಕಂಪ್ಯೂಟರ್ ಜೆಎಸ್ ಟಿ ಬಿಲ್ ನೀಡಬೇಕು. ಸಹಾಯಧನದ ಸಬ್ಸಿಡಿ ಯೋಜನೆಗಳನ್ನು ಬಹಿರಂಗವಾಗಿ  ಕೃಷಿ ಇಲಾಖೆ ಪ್ರಚಾರ ಪಡಿಸಬೇಕು. ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಸ್ಟಾಕ್ ನೋಟಿಸ ಬೋರ್ಡು  ಕಡ್ಡಾಯವಾಗಿ ಪ್ರತಿ ಅಂಗಡಿಗಳಲ್ಲಿ ಪ್ರದರ್ಶಿಸಬೇಕು ಎಂಬುದು ರೈತರ ಆಗ್ರಹವಾಗಿದೆ.


 ನ್ಯಾನೋ ಯುರಿಯಾ ಮತ್ತು ನ್ಯಾನೋ ಡಿಎಪಿ  ಹಾಗೂ ಸಂಯುಕ್ತ ರಸಗೊಬ್ಬರ ಬಳಕೆಗೆ ಶಿಫಾರಸು ಕೇಂದ್ರ ಸರಕಾರ ಮಾಡಲಾಗಿದ್ದು ಇವು ಕೂಡ ಉತ್ತಮ ಕೆಲಸ ನಿರ್ವಹಿಸಬಲ್ಲವುಗಳಾಗಿದ್ದು ರೈತರು ಬಳಕೆ ಮಾಡಿದರೆ ತಪ್ಪಿಲ್ಲ. ಗೊಬ್ಬರಗಳ ಕೃತಕ ಅಭಾವ ಸೃಷ್ಟಿಗೆ ಕಾರಣರಾದ ಮಾರಾಟಗಾರರ ಮೇಲೆ ಕ್ರಮ ಕೈಕೊಳ್ಳಲಾಗುವುದು.

-ಚಂದ್ರಕಾ0ತ ಪವಾರ  
ಉಪ ನಿರ್ದೇಶಕರು 
ಕೃಷಿ ಇಲಾಖೆ 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.