ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಬೇಕು : ಡಿವೈಎಸ್ಪಿ ಬಸವರಾಜ ಯಲಿಗಾರ

Jun 24, 2025 - 18:19
 0
ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಬೇಕು : ಡಿವೈಎಸ್ಪಿ ಬಸವರಾಜ ಯಲಿಗಾರ
ವಿಜಯಪುರ ನಗರದ  ಪ್ರತಿಷ್ಠಿತ  ಬಿ ಎಲ್ ಡಿ ಈ ಸಂಸ್ಥೆಯ  ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ  ವಿಜಯಪುರ ಜಿಲ್ಲಾ ಪೊಲೀಸ್ ಗಾಂಧಿ ಚೌಕ್ ಪೊಲೀಸ್ ಠಾಣೆ, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿದರು.      

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೆ? ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜ ಮಾದವ ವಸ್ತುಗಳಿಂದ ಮುಕ್ತವಾಗಿರಬೇಕು ಎಂದು ಡಿವೈಎಸ್ಪಿ ಬಸವರಾಜ ಯಲಿಗಾರ ಹೇಳಿದರು.

                ವಿಜಯಪುರ ನಗರದ  ಪ್ರತಿಷ್ಠಿತ  ಬಿ ಎಲ್ ಡಿ ಈ ಸಂಸ್ಥೆಯ  ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ  ವಿಜಯಪುರ ಜಿಲ್ಲಾ ಪೊಲೀಸ್ ಗಾಂಧಿ ಚೌಕ್ ಪೊಲೀಸ್ ಠಾಣೆ, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ  "ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮ "ದಲ್ಲಿ ಮಾತನಾಡಿದರು.        

ಮುಂದುವರೆದು ಮಾತನಾಡಿದ ಅವರು ಇಂದಿನ ಯುವಕರು  ಮೂರು ಋಣಗಳಾದ ತಂದೆ ತಾಯಿ  ಗುರುಗಳ ಋಣ ಎಂದಿಗೂ  ಮರೆಯಬಾರದು  ಸದ್ಗುಣ ಸಚ್ಚಾರಿತ್ರ‍್ಯ ತಮ್ಮ ಜೀವನದಲ್ಲಿ  ಅಳವಡಿಸಿಕೊಳ್ಳಬೇಕು    ದುಷ್ಟತೆಗಳಿಂದ ದೂರವಿರಬೇಕು ಮಾದಕ ವಸ್ತುಗಳು  ನಮ್ಮ ವ್ಯಕ್ತಿತ್ವಕ್ಕೆ  ಹಾಗೂ ಆರೋಗ್ಯಕ್ಕೆ  ಮಾರಕವಾಗಿವೆ  ಮೊಬೈಲ್ ಎಷ್ಟು ಪ್ರಯೋಜನವಾಗಿದೆ  ಅಷ್ಟೇ  ದುಷ್ಪರಿಣಾಮವಿದೆ  ವಿದ್ಯಾರ್ಥಿಗಳಾದ ನೀವು  ಮೊಬೈಲ್ ಬಳಕೆಯನ್ನು  ಕಡಿಮೆ ಮಾಡಬೇಕು  ಎಂದು ಕಿವಿಮಾತು ಹೇಳಿದರು.       

ಮಾದಕ ವಸ್ತುಗಳ  ಹಾಗೂ ಅಕ್ರಮ ಮಾರಾಟ  ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ಚೌಕಿದ  ಪೊಲೀಸ್ ಠಾಣೆಯ  ಸಿ ಪಿ ಆಯ್   ಪ್ರದೀಪ್ ತಳಕೇರಿ  ಜಾಗತಿಕ  ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ ೨೬ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.                         ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್ ಎಸ್ ಆವರಣದ ಆಡಳಿತ ಅಧಿಕಾರಿಗಳಾದ ಪ್ರೊ ಆಯ್ ಎಸ್ ಕಾಳಪ್ಪನವರ ಸರ್ ವಹಿಸಿ ಮಾತನಾಡಿದರು.        

ಇದೇ ಸಂದರ್ಭದಲ್ಲಿ  "ನನ್ನೊಳಗಿನ ನಾನು ನೀನೆ " ಕೃತಿಯನ್ನು ಹೊರ ತಂದ ಡಿವೈಎಸ್ಪಿ ಬಸವರಾಜ ಯಲಿಗಾರ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಾಂಧಿ ಚೌಕ್  ಪೊಲೀಸ್ ಠಾಣೆಯ  ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಸುಷ್ಮಾ  ನಂದಿಗೊAಡ   ಹಿರಿಯ ಉಪನ್ಯಾಸಕರಾದ   ಟಿ ಎಮ್ ಪವಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.                        

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು  ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು/ ಕಾರ್ಯಕ್ರಮವನ್ನು ಮಹಾಂತೇಶ  ಜಂಡೆ ನಿರೂಪಿಸಿದರು. ಎಸ್ ಟಿ ತೇಲಕರ ಸ್ವಾಗತಿಸಿದರು. ಎ ವಿ ಸಾಲಕ್ಕಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.