ಸಮುದಾಯ ಭವನ ನಿರ್ಮಾಣಕ್ಕೆ ೭೦ ಲಕ್ಷ ಮಂಜೂರು : ಯತ್ನಾಳ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ೨೦೨೨-೨೩ನೇ ಸಾಲಿನಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆಗೊಂಡು, ಬಿಡುಗಡೆಯಾಗದೆ ಬಾಕಿ ಉಳಿದ ಅನುದಾನದಲ್ಲಿ ನಗರದ ೭ ದೇವಸ್ಥಾನಗಳ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ರೂ.೭೦ ಲಕ್ಷ ಅನುದಾನ ಮಂಜೂರಿಸಲಾಗಿದ್ದು, ಮೊದಲ ಕಂತಿನಲ್ಲಿ ರೂ.೨೫ ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ವಾರ್ಡ್ ನಂ.೨೨ರ ಜೋರಾಪುರ ಪೇಠ ಬಜಂತ್ರಿ ಓಣಿಯಲ್ಲಿರುವ ದುರ್ಗಾದೇವಿ ದೇವಸ್ಥಾನ ಹತ್ತಿರ ಸಮುದಾಯ ನಿರ್ಮಾಣಕ್ಕೆ ರೂ.೧೦ ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.೫ ಲಕ್ಷ ಬಿಡುಗಡೆ ಆಗಿದೆ. ವಾರ್ಡ್ ನಂ.೨ರ ದರ್ಗಾದಲ್ಲಿರುವ ಕರಿಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.೫ ಲಕ್ಷ ಬಿಡುಗಡೆ ಆಗಿದೆ. ವಾರ್ಡ್ ನಂ.೨೬ರ ದಿವಟಗೇರಿ ಗಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.೫ ಲಕ್ಷ ಬಿಡುಗಡೆ ಆಗಿದೆ.
ವಾರ್ಡ್ ನಂ.೯ರ ಚಂದಾಬಾವಡಿ ರಸ್ತೆಯಲ್ಲಿರುವ ಈಶ್ವರಲಿಂಗ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.೫ ಲಕ್ಷ ಬಿಡುಗಡೆ ಆಗಿದೆ. ವಾರ್ಡ್ ನಂ.೧ರ ಜೋರಾಪುರ ಪೇಠ ಪುರಾತನ ಹನುಮಾನ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ ಮಂಜೂರಾಗಿದ್ದು, ಇದರಲ್ಲಿ ರೂ.೫ ಲಕ್ಷ ಬಿಡುಗಡೆ ಆಗಿದೆ. ವಾರ್ಡ್ ನಂ.೨ರ ದರ್ಗಾದಲ್ಲಿ ಬರುವ ಶಿವಬಸಪ್ಪ ಗದ್ದುಗೆ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ ಹಾಗೂ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ರೂ.೧೦ ಲಕ್ಷ ಮಂಜೂರಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.