"ಅಂತರ್ಯಾಮಿ" ಚಲನಚಿತ್ರ ಶೀಘ್ರದಲ್ಲೇ ತೆರೆಗೆ

ಗುರುರೇಣುಕಾ ಪ್ರೊಡಕ್ಷನ್ ತುಮಕೂರ ಅವರ “ಅಂತರ್ಯಾಮಿ” ಚಲನಚಿತ್ರ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವದು ಎಂದು ನಿರ್ದೇಶಕ ಕೆ.ಧನಂಜಯ ತಿಳಿಸಿದ್ದಾರೆ.  

Jun 20, 2025 - 12:48
 0
"ಅಂತರ್ಯಾಮಿ" ಚಲನಚಿತ್ರ ಶೀಘ್ರದಲ್ಲೇ ತೆರೆಗೆ
“ಅಂತರ್ಯಾಮಿ” ಚಲನಚಿತ್ರ ಶೀಘ್ರದಲ್ಲೇ ಬಿಡುಗಡೆ.

ತುಮಕೂರು : ಗುರುರೇಣುಕಾ ಪ್ರೊಡಕ್ಷನ್ ತುಮಕೂರ ಅವರ “ಅಂತರ್ಯಾಮಿ” ಚಲನಚಿತ್ರ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವದು ಎಂದು ನಿರ್ದೇಶಕ ಕೆ.ಧನಂಜಯ ತಿಳಿಸಿದ್ದಾರೆ.  
    ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ, ವಸ್ತು ವಿಷಯವಾಗಿದ್ದು, ಇಂದಿನ ಯುವ ಪೀಳಿಗೆ  ಸಾಮಾಜಿಕ ಜಾಲತಾಣದ ಗೀಳಿಗೆ ಹೇಗೆ ಬಲಿಯಾಗುತ್ತಿರುವುದರ ಪರಿಣಾಮ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಗೆ ಭಾರತದ ಭವಿಷ್ಯದ ಅಭಿವೃದ್ಧಿ ವ್ಯವಸ್ಥೆಗಳಿಗೆ ಮಾರಕವಾಗಿದೆ, ವಿದೇಶಗಳಿಗೆ ಹೇಗೆ ಪೂರಕವಾಗಿದೆ ಎಂಬುದರ ಜೊತೆಗೆ, ಯುವ ಜನತೆ ಜೊತೆಗೆ ಸಾಮಾನ್ಯ ಜನತೆ ಕೂಡ ಹೇಗೆ ಇದರ ಭಾಗವಾಗುತ್ತಿದ್ದಾರೆ, ಇದನ್ನ ನಾಯಕ ಹೇಗೆ ಸರಿ ಪಡಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ .ಸದ್ಯ ರಾಜ್ಯದ ಎಲ್ಲ ಕಡೆ   ಸಂಚರಿಸಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಚಿತ್ರಮಂದಿರಗಳಿಗೆ ಭೇಟಿ ನೀಡಲಿದೆ ಎಂದರು. 
    ೨೫ ದಿನಗಳ ಕಾಲ  ತುಮಕೂರು ಸಿದ್ದಗಂಗಾ ಮಠ, ಎಸ್.ಎಸ್.ಆಯ್.ಟಿ ಕಾಲೇಜ್, ಬಂಡೆಮಠ, ಸೋಮವಾರಪೇಟೆ, ಮಾದಾಪುರ, ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಎಲ್ಲ   ವಯಸ್ಸಿನವರಿಗೂ ಚಿತ್ರ ಇಷ್ಟವಾಗಲಿದೆ .ಈ ಮೊದಲು ಚಿತ್ರದ ಶೀರ್ಷಿಕೆಯನ್ನು  ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದ್ದರು, ಚಿತ್ರದ ಫಸ್ಟ್ ಲುಕ್ ಅನ್ನು ಮಾನ್ಯ ಗೃಹಮಂತ್ರಿ ಜಿ ಪರಮೇಶ್ವರ್‌ರವರು ಅನಾವರಣ ಮಾಡಿದ್ದರು ಎಂದು ನಿರ್ಮಾಪಕ ನವೀನ್ ಎನ್.ಜಿ ತಿಳಿಸಿದ್ದಾರೆ.
      ಚಿತ್ರದಲ್ಲಿ ನಾಯಕರಾಗಿ  ಪ್ರಣವ್, ನಾಯಕಿಯಾಗಿ  ಮೋಹಿರ ಆಚಾರ್ಯ, ಮಂಡ್ಯಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ,  ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾಂಬ , ರುದ್ರ ಮುನಿ,ಯೋಗೇಶ ಮೊದಲಾದವರಿದ್ದಾರೆ. ಛಾಯಾಗ್ರಹಣ ಎಸ್.ಬಾಲು, ವಿನಯ್ ಕಾವ್ಯ ಕಾಂತಿಯವರ ಸಾಹಿತ್ಯ , ನಾಲ್ಕು ಹಾಡುಗಳಿದ್ದು, ಪೃಥ್ವಿ ಭಟ್,  ಮೇಘನಾ ಕುಲಕರ್ಣಿ, ದೇಸಿ ಮೋಹನ್ ರವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ.     ಸಂಗೀತ ದೇಸಿ ಮೋಹನ್      ಸಂಕಲನ  ಅರವಿಂದ್ ರಾಜ್, ನೃತ್ಯ ನಿರ್ದೇಶನ ಬಾಲು ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಡಿಆಯ್ ಚೆನೈ ,ಬೆಂಗಳೂರ,  ಪಿ.ಆರ್.ಓ ಎಂಜೆಎಸ್‌ಪಿಆರ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ. ನಿರ್ದೇಶನ ತಂಡದಲ್ಲಿ ರವಿ  ಶಂಕರ್‌ನಾಗ್, ಶರತ್ ಘಾಟಿ, ಮಂಜುನಾಥ್ ಹೊಸ ರಂಗಾಪುರ, ಮುಕುಂದ, ರಾಣಾ, ವಸಂತ್  ಇದ್ದು, ಕೆ. ಧನಂಜಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು  ನಿರ್ದೇಶನ ಹೊಣೆ ಹೊತ್ತಿದ್ದಾರೆ.   ನವೀನ್ ಎನ್.ಜಿ ನಿರ್ಮಾಪಕರಾಗಿದ್ದಾರೆ. ಸಧ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕರು, ನಿರ್ಮಾಪಕರು ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.