ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರವೃತ್ತಿ ಹೆಚ್ಚಲಿ

Jun 20, 2025 - 23:21
 0
ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರವೃತ್ತಿ ಹೆಚ್ಚಲಿ

ಮುದ್ದೇಬಿಹಾಳ : ಅಭ್ಯುದಯ ಪದವಿ ಕಾಲೇಜಿನಲ್ಲಿ ಬಿಎ.,ಬಿ.ಎಸ್ಸಿ,ಬಿ.ಕಾಂ ಓದುವ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವಾರಕ್ಕೊಮ್ಮೆ ಎರಡು ಗಂಟೆ ಕಾಲ ಸ್ಪರ್ಧಾತ್ಮಕ ಕೋರ್ಸ್ಗಳಿಗೆ ಅನುಕೂಲವಾಗುವ ಹೈಬ್ರಿಡ್ ತರಗತಿಗಳನ್ನು ಸ್ಮಾರ್ಟ್ ಬೋರ್ಡ್ಗಳ ಮೂಲಕ ನಡೆಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.


 ಪಟ್ಟಣದ ಅಭ್ಯುದಯ ಪದವಿ ಕಾಲೇಜಿನಲ್ಲಿ ಶುಕ್ರವಾರ ಸಂಯೋಜಿತ ಪದವಿಗಳ ಕುರಿತ ಹಮ್ಮಿಕೊಂಡಿದ್ದ ಎರಡು ದಿನದ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರ ಪ್ರತಿ ವರ್ಷ ಜನೇವರಿ ತಿಂಗಳಲ್ಲೇ ಆಯಾ ವರ್ಷದ ನೇಮಕಾತಿ ಅಧಿಸೂಚನೆಯನ್ನು ವಿವಿಧ ಇಲಾಖೆಗಳ ಮೂಲಕ ಪ್ರಕಟಿಸುತ್ತದೆ.ಬ್ಯಾಂಕಿAಗ್ ಕ್ಷೇತ್ರದಲ್ಲಿ ನಮ್ಮ ರಾಜ್ಯದ ಜನ ಸ್ಪರ್ಧಿಸುವುದು ವಿರಳವಾಗಿದೆ.ಅನ್ಯಭಾಷಿಕರೆ ಇಂದಿನ ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸುತ್ತಾರೆ.ನಮ್ಮಲ್ಲೂ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರವೃತ್ತಿ ಹೆಚ್ಚಳವಾಗಬೇಕು ಎಂಬ ಉದ್ದೇಶದಿಂದ ಈ ತರಬೇತಿ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.


ಕವಿವಿ ಮಾಜಿ ಕುಲಪತಿ ಎಚ್.ಬಿ.ವಾಲೀಕಾರ ಮಾತನಾಡಿ, ಈ ಭಾಗದ ಬಡ,ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹಿಂದುಳಿದ ಪ್ರದೇಶವಾಗಿರುವ ಇಲ್ಲಿನ ವಿದ್ಯಾರ್ಥಿಗಳು ದೂರದ ಊರುಗಳಿಗೆ ತರಬೇತಿಗೆ ಹೋಗದೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸ್ಮಾರ್ಟ್ ಕ್ಲಾಸ್‌ಗಳನ್ನು ನಡೆಸಿ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ,ಮಾರ್ಗದರ್ಶಕರೊAದಿಗೆ ಸಂವಹನ,ಸಮಸ್ಯೆಗಳಿಗೆ ಪರಿಹಾರ ಕೇಳುವ ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ವಕೀಲ ಬಿ.ಜಿ.ಜಗ್ಗಲ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್ಲ,ಸAಪನ್ಮೂಲ ವ್ಯಕ್ತಿ ಶೇಖಪ್ಪ ಮೇಟಿ, ಕೆ.ಅಶೋಕ,ಹುಲ್ಲೂರು ಪಿಕೆಪಿಎಸ್ ಅಧ್ಯಕ್ಷ ಸುರೇಶ ಹಳೇಮನಿ,ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಪ್ರಾಚಾರ್ಯ ಆರ್.ಎಸ್.ಜಡಗಿ, ಪಿಯು ಕಾಲೇಜು ಪ್ರಾಚಾರ್ಯ ಎಂ.ಎA.ಧನ್ನೂರ,ಪ್ರೌಢಶಾಲೆ ಮುಖ್ಯಗುರು ಪ್ರಶಾಂತ ಬಿರಾದಾರ ಇದ್ದರು.
----
ಎಸ್.ಎಸ್.ಎಲ್.ಸಿ,ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ನಮ್ಮ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಕೋರ್ಸ್ಗಳಿಗೆ ನುರಿತ ಶಿಕ್ಷಣ ತಜ್ಞರಿಂದ ತರಗತಿಗಳನ್ನು ನೀಡಲಾಗುತ್ತದೆ.ಧಾರವಾಡ,ಬೆಂಗಳೂರು ಮಹಾನಗರಗಳಲ್ಲಿ ನೀಡಲಾಗುವ ತರಬೇತಿ ಮಾದರಿಯಲ್ಲಿ ಸ್ಪಾರ್ಟ್ ಕ್ಲಾಸ್‌ಗಳ ಮೂಲಕ ತರಬೇತಿ ನೀಡಲಾಗುತ್ತದೆ.ಆರಂಭದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ನಂತರದಲ್ಲಿ ಹೊರಗಿನ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
--ಎಂ.ಎನ್.ಮದರಿ,ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.