ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮೇಲ : ಸಾಹಿತ್ಯದ ನೆಲೆಬಿಡು, ದೇಸಗತಿ ಮನೆತನದಲ್ಲಿ ಬರುವ ಆಲಮೇಲ, ಹಲವಾರು ವರ್ಷಗಳ ಹಿಂದೆ ಕಲಾದಗಿ ಎಂಬ ಜಿಲ್ಲೆ ಇತ್ತು ಆವಾಗ ಆಲಮೇಲ ಪರಗಣವಾಗಿತ್ತು ಅಂದಿನ ಕಾಲದಲ್ಲಿ ಆಲಮೇಲ ನಗರಕ್ಕೆ ಅನೇಕ ದಾರಿಗಳು ಇದ್ದವು ಅವುಗಳಲ್ಲಿ ಕೆಲವು ದಾರಿಗಳು ರಾಜಕೀಯ ಇಚ್ಚಾಶಕ್ತಿಯ ಕೊರತೆ ಯಿಂದ ಮುಚ್ಚಿಹೋದವು ಎಂದು ಆಲಮೇಲ ಪಟ್ಟಣದ ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ ಹೇಳಿದರು.
ಅರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಅನಿಧಿಷ್ಟಾವಧಿ ಧರಣಿಯ ೫ನೇ ದಿನದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಸಗತಿ ಮನೆತನದಲ್ಲಿ ಇದ್ದ ಈ ಪಟ್ಟಣವು ಊರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಅಗಸಿಗಳಿದ್ದವು ದೇವರ ಅಗಸಿ ಮೂಲಕ ಹೋಗುವ ರಸ್ತೆಗೆ ಊರಿನ ದಿಬ್ಬದ ಮೇಲೆ ಬಿಳಿಗುಡಿಯ ಆರಾದ್ಯದೈವ ಪೀರ ಗಾಲಿಸಾಬ ನೆಲೆಸಿದ್ದು ಈ ದರ್ಗಾಕ್ಕೆ ಹೋಗಲು ಆಗ ವಿಶಾಲವಾದ ರಸ್ತೆ ಇತ್ತು ಈಗ ಅದು ಒತ್ತುವರಿ ಆಗಿದೆ ಈ ಒತ್ತುವರಿ ತೆರವುಗೊಳಿಸಲು ನಾವು ಹೋರಾಟ ಮಾಡಬೇಕಿದೆ. ಈ ಹೋರಾಟ ನಮಗೆ ಹೊಸದೇನಲ್ಲ ಆಲಮೇಲದಲ್ಲಿ ಏನೇ ಪಡೆಯಬೇಕಾದರು ಹೋರಾಟ ಮಾಡಬೇಕಿದೆ ಅದು ತಾಲೂಕಾ ಹೋರಾಟ ಆಗಲಿ, ಸರಕಾರಿ ಆಸ್ಪತ್ರೆಆಗಲಿ, ಹೀಗೆ ಅನೇಕ ಹೋರಾಟಗಳು ತೀವ್ರವಾದಾಗ ಜನರ ಮೇಲೆ ಪೋಲಿಸರಿಂದ ಏಟು ಬಿದ್ದವು ,ಮತ್ತು ಕೇಸುಗಳು ಬಿದ್ದವು ಅದು ಹಳೆಯದು.
ಈಗ ಹೋರಾಟ ಉಗ್ರ ಮಟ್ಟಕ್ಕೆ ಹೋಗುವ ಮತ್ತು ಆಮರಣ ಉಪವಾಸ ಕೈಗೊಳ್ಳುವ ಮುಂಚೆ ದಪ್ಪ ಚರ್ಮದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಬಂದು ಬಗೆಹರಿಸಿ ಕೊಡಬೇಕಾಗಿದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಪರಿಸ್ಥಿತಿ ಕೈಮೀರಿ ಹೋದರೆ ಅದಕ್ಕೆ ಜಿಲ್ಲಾ ಆಡಳಿತ ಹೊಣೆಯಾಗುತ್ತಿದೆ ಎಂದು ಹೇಳಿದರು.
ಇಂದಿನ ಹೋರಾಟದಲ್ಲಿ ಬಿಜೆಪಿ ಮುಖಂಡ ಅಂಬರೀಷ ಸಾಲಕ್ಕಿ, ಪಿ.ಟಿ ಪಾಟೀಲ, ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಸಂಜು ಯಂಟಮಾನ, ರವಿ ಬಡದಾಳ, ಶಿವಾನಂದ ಜಗತಿ, ದೇವಪ್ಪ ಗುಣಾರಿ, ಶ್ರೀಶೈಲ ಬೋವಿ, ಅಪ್ಪು ಶೆಟ್ಟಿ, ರಾಜು ಮೇತ್ರಿ, ಶಶೀಧರ ನಾಯ್ಕೋಡಿ, ಹರೀಶ ಯಂಟಮಾನ, ಸೋಮು ಮೇಲಿನಮನಿ, ಸುಬಾಷ ಪೂಜಾರಿ, ಶರಣು ಗುರುಕಾರ, ಶಿವು ಯಂಟಮಾನ, ನಾಗಪ್ಪ ತಳವಾರ, ಶಿವು ತಳವಾರ, ಇತರರು ಇದ್ದರು.