ಗುರು ಪೂರ್ಣಿಮೆ ದರ್ಶನಕ್ಕೆ ಬಂದವರು ಮಸಣ ಸೇರಿದರು

Jul 13, 2025 - 10:44
 0
ಗುರು ಪೂರ್ಣಿಮೆ ದರ್ಶನಕ್ಕೆ ಬಂದವರು ಮಸಣ ಸೇರಿದರು
ಅಫಜಲಪುರ ತಾಲೂಕಿನ ಚವಡಾಪುರ, ದೇವಲ ಗಾಣಗಾಪೂರ ಮಧ್ಯದಲ್ಲಿ ಸಂಭವಿಸಿದ ಅಪಘಾತದ ದೃಶ್ಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಅಫಜಲಪುರ: ಗುರು ಪೂರ್ಣಿಮೆಯಂದು ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆಂದು ಬಂದಿದ್ದ ಇಬ್ಬರು ಅಪಘಾತದಲ್ಲಿ ಮೃತ ಪಟ್ಟು ಮಸಣ ಸೇರುವಂತಾಗಿದೆ.


ತಾಲೂಕಿನ ಚವಡಾಪುರ, ದೇವಲ ಗಾಣಗಾಪೂರ ರಸ್ತೆಯಲ್ಲಿ ಬುಧವಾರ ರಾತ್ರಿ ೧೦.೩೦ರ ಸುಮಾರಿಗೆ ಆಟೋ ವತ್ತು ಸಾರಿಗೆ ಬಸ್ಸಿನ ಮಧ್ಯ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಆಟೋದಲ್ಲಿದ್ದ ಮಹಾರಷ್ಟçದ ಮೂಲದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪಿಎಸ್‌ಐ ರಾಹುಲ್ ಪವಾಡೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.