ತಿಕೋಟಾ ತಾಲೂಕಾ ಅಭಿವೃದ್ಧಿ ಸಮಿತಿ ಪೂರ್ವಭಾವಿ ಸಭೆ

ವಿಜಯಪುರ : ವಿವಿಧ ಕಾಮಗಾರಿಗಳು ಹಾಗೂ ತಿಕೋಟಾ ತಾಲೂಕಾ ಅಭಿವೃದ್ಧಿ ಸಮಿತಿ ರಚನೆಗಾಗಿ ತಿಕೋಟಾದ ವಿರಕ್ತಮಠದಲ್ಲಿ ಪೂರ್ವಭಾವಿ ಸಭೆ ಗುರುವಾರ ಜರುಗಿತು.
ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಬ ಯರನಾಳ ಅವರು ಮಾತನಾಡಿ ನಮ್ಮ ಅಭಿವೃದ್ಧಿ ಆಗಬೇಕಾದರೆ ಹಿಂದೂ ಮುಸ್ಲಿಂ, ಕ್ರೆöÊಸ್ತ ಬುದ್ದ ಮುಂತಾದ ಧರ್ಮಗಳ ಜನರು ಒಂದಾಗಿ ಭಾವೈಕ್ಯದಿಂದ ಬದುಕಬೇಕು. ಅಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಹೇಳಿದರು. ಅವರು ವಿಜಯಪುರದ ಸಮಾಜ ವಿಜ್ಞಾನ ವೇದಿಕೆ ಹಾಗೂ ತಿಕೋಟಾ ನಾಗರಿಕರ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡ ಶಾಂತಿ, ಸೌಹಾರ್ದತೆ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಾಕುಬ ಜತ್ತಿ, ಹಾಜಿಲಾಲ ಕೊಟ್ಟಲಗಿ, ದತ್ತು ಪೂಜಾರಿ ಮುಂತಾದವರು ಮಾತನಾಡಿ ಎಲ್ಲರೂ ಒಮದಾಗಿ ಶ್ರಮಿಸುವುದು ಹಾಗೂ ನಮ್ಮ ಭಾಗದ ಸಚಿವ ಎಂ.ಬಿ. ಪಾಟೀಲ ಅವರ ಸಹಕಾರ ಪಡೆದುಕೊಂಡು ಅಬಿವೃದ್ದಿ ಹೊಂದುವುದುಈ ವೇದಿಕೆಯ ಉದ್ದೇಶ ಎಂದು ವಿವರಿಸಿದರು.
ಪ್ರಾರಂಭದಲ್ಲಿ ಸೋಮಶೇಖರ ದ. ಜತ್ತಿ ಸ್ವಾಗತಿಸಿದರು. ಚನ್ನಯ್ಯ ಸಾಲಿಮಠ ನಿರೂಪಿಸಿದರು. ರಜು ಹಬ್ಬು ವಂದಿಸಿದರು.