ಮೂಡಲಪಾಯ ಬಯಲಾಟ ಒಂದೊಂದು ಪ್ರದೇಶಕ್ಕೆ ಪ್ರಾದೇಶಿಕ ವೈಶಿಷ್ಠಗಳನ್ನು ಒಳಗೊಂಡಿದೆ : ಡಾ.ಕೆ.ಆರ್.ದುರ್ಗಾದಾಸ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹೊಳೆನರಸೀಪುರ : ಆರ್.ಬಿ.ಪುಟ್ಟೇಗೌಡ ಮತ್ತು ಮೂಡಲಪಾಯ ಬಯಲಾಟ ತಂಡ ಹೊಳೆನರಸೀಪುರ ಇವರು ಭೀಮಾರ್ಜುನರ ಕಾಳಗ ಮೂಡಲಪಾಯ ಬಯಲಾಟದ ಪ್ರಸಂಗವನ್ನು ಪ್ರಸ್ತುತಪಡಿಸಿ, ನಾವುಗಳು ನೋಡುವಂತಹ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ ತಿಳಿಸಿದರು.
ಕರ್ನಾಟಕ ಬಯಲಾಟ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರುಗಳ ಸಂಯುಕ್ತಾಶ್ರದಲ್ಲಿ ಜು.8,9, ಮತ್ತು 10 ರವರೆಗೆ ನಡೆದ ಮೂರು ದಿನಗಳ ವಿಚಾರ ಸಂಕಿರಣ ಹಾಗೂ ಬಯಲಾಟ ಪ್ರದರ್ಶನ ಬಯಲಾಟ ಹೊಸ ಸಾಧ್ಯತೆಗಳು ಕಾರ್ಯಕ್ರಮದಲ್ಲಿ ಭೀಮಾರ್ಜುನರ ಕಾಳಗ ವೀಕ್ಷಿಸಿ ಮಾತನಾಡಿದರು.
ಕರ್ನಾಟಕ ಬಯಲಾಟ ಬಯಲಾಟ ಕಾರ್ಯಕ್ಷೇತ್ರ ಎಲ್ಲೆಲ್ಲಿವೆ ಎಂದು ನಾವುಗಳು ವಿಚಾರ ಮಾಡುವಾಗ ದಕ್ಷಿಣದ ಚಾಮರಾಜನಗರದಿಂದ ಹಿಡಿದು ಉತ್ತರದ ಬೀದರ್ ವರೆಗೆ, ಪೂರ್ವದ ಬಳ್ಳಾರಿಯಿಂದ ಹಿಡಿದು, ಪಶ್ಷಿಮದ ಬೆಳಗಾವಿ,ವಿಜಾಪುರ ಜಿಲ್ಲೆಯವರೆಗೆ ಬಯಲಾಟದ ಕಾರ್ಯಕ್ಷೇತ್ರ ಇದೆಯೆಂದು ಗೊತ್ತಾಯಿತು. ಬಹು ದೊಡ್ಡದಾದ ಕ್ಷೇತ್ರ. ಒಂದೊಂದು ಪ್ರದೇಶದ ಆಟದ ಪ್ರದೇಶ ಮತ್ತೊಂದು ಪ್ರದೇಶದ ಆಟದ ಪ್ರದೇಶಕ್ಕಿಂತ ಭಿನ್ನವಾಗಿವೆ ಮತ್ತು ಪ್ರಾದೇಶಿಕ ವೈಶಿಷ್ಠಗಳನ್ನು ಒಳಗೊಂಡಿರುತ್ತದೆ. ನಮ್ಮ ಬಯಲಾಟ ಅಕಾಡೆಮಿಯ ಸದಸ್ಯರಾದ ಡಾ.ಚಂದ್ರು ಕಾಳೇನಹಳ್ಳಿಯವರು ಈ ತಂಡದ ಭಾಗವತರಾಗಿ ಹಾಡುಗಾರಿಕೆಯನ್ನು ಹಾಡಿ ಭಾಗವಹಿಸಿದ್ದಾರೆ. ಬಹಳ ದಿನಗಳಿಂದ ಹೇಳುತ್ತಿದ್ದರು. ಈ ನಾಟಕವನ್ನು ಹೊಸ ದೃಷ್ಠಿಕೋನದಿಂದ ನಾನು ಸಿದ್ದಪಡಿಸಿದ್ದೀನಿ. ಈ ನಾಟಕದ ಪ್ರದರ್ಶನವನ್ನು ನೋಡಬೇಕು ಅಂತ. ಇವತ್ತು ನೋಡುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆಂದು ಎಲ್ಲ ಕಲಾವಿದರಿಗೂ ಬಯಲಾಟ ಅಕಾಡೆಮಿ ಪರವಾಗಿ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
ಭಾಗವತರಾಗಿ ಭಾಗವಹಿಸಿದ್ದ ಡಾ.ಚಂದ್ರು ಕಾಳೇನಹಳ್ಳಿಯವರು ಮಾತನಾಡಿ ನಮ್ಮ ಕಲಾವಿದರು ಇದೊಂದು ಅಪರೂಪ ಪ್ರಯೋಗಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ.
ನಮ್ಮ ಬಯಲು ಸೀಮೆ ಕರ್ನಾಟಕದಲ್ಲಿ ಹಾಸನ, ತುಮಕೂರು ಭಾಗಗಳಲ್ಲಿ ತುಂಬಾ ವಿರಳವಾಗಿರುವ ಸಂದರ್ಭದಲ್ಲಿ ಕೆಲವರು ಸರ್ಕಾರಿ ನೌಕರಿಯಲ್ಲಿದ್ದರೂ ಸಹ ಗುರುತಿಸಿಕೊಂಡುನಮ್ಮ ಜೊತೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಇದನ್ನು ಮುಂದುರಿಸಿಕೊಂಡು ಹೋದರೆ ಉತ್ತಮ ತಂಡವಾಗಿ ಈ ಕಲೆಯನ್ನು ಉಳಿಸಿಕೊಂಡಂತಾಗುತ್ತದೆ ಎಂದು ತಿಳಿಸುತ್ತಾ ಧಾರವಾಡದಲ್ಲಿ ಪ್ರಸಂಗವನ್ನು ಅಭಿನಯಿಸಲು ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ದುರ್ಗಾದಾಸ್ ಅವರಿಗೆ ಅಭಿನಂಸಿದರು.
ತಂಡದ ಮುಖ್ಯಸ್ಥ ಮೂಡಲಪಾಯ ಬಯಲಾಟದ ಕಲಾವಿದ ಆರ್.ಬಿ.ಪುಟ್ಟೇಗೌಡ ಮಾತನಾಡಿ ಬೀಮಾರ್ಜುನರ ಕಾಳಗವೆಂಬ ಪ್ರಸಂಗವನ್ನು ಅಭಿನಯಿಸಲು ತರಬೇತಿ ನೀಡಿ ಬಯ ಅವಕಾಶವನ್ನು ಡಾ.ಚಂದ್ರು ಕಾಳೇನಹಳ್ಳಿಯವರು ಒದಗಿಸಿಕೊಟ್ಟಿದ್ದಾರೆಂದು ಧನ್ಯವಾದ ತಿಳಿಸುತ್ತಾ ಮುಖವೀಣೆ ಕಲಾವಿದರು ವಿರಳವಾಗುತ್ತಿರುವುದರಿಂದ ಮುಖವೀಣೆ ಕಲಿಯುವ ಆಸಕ್ತರಿಗೆ ತರಬೇತಿ ಕಾರ್ಯಾಗಾರ ಶಿಬಿರದ ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಇಂತಹ ನಶಿಸಿಹೋಗುತ್ತಿರು ಕಲೆಗಳನ್ನು ಉಳಿಸಬಹುದು ಎಂದು ತಿಳಿಸುತ್ತಾ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದರು.
ಕಲಾವಿದರುಗಳಾದ ಪ್ರೊ.ಈ. ನಾಗಣ್ಣ ಸಾರಥಿಯಾಗಿ, ಆರ್.ಬಿ.ಪುಟ್ಟೇಗೌಡ ಶ್ರೀಕೃಷ್ಣನಾಗಿ,ಹೆಚ್.ಆರ್.ನಿಂಗೇಗೌಡ ನಾರದನಾಗಿ, ಎನ್.ಎಸ್.ಗುಣಶಂಕರ್ ಅರ್ಜುನನಾಗಿ,ಪುಟ್ಟಸ್ವಾಮಿಗೌಡ ಭೀಮನಾಗಿ. ಆರ್.ಕೆ., ರಾಣಿ ಚ.ರಾ.ಶ್ರೀ ರುಕ್ಮಣಿಯಾಗಿ, ರಾಘವೇಂದ್ರ ಪಟೇಲ್ ಧರ್ಮರಾಯನ ಪಾತ್ರದಾರಿಯಾಗಿ ಅಭಿನಯಿಸಿದರು.
ವಸ್ತ್ರ ವಿನ್ಯಾಸ ಹಾಗೂ ಪ್ರಸಾದನ ಅರಳಗುಪ್ಪೆ ಪುಟ್ಟಸ್ವಾಮಿ ಹಾಗೂ ಮೃದಂಗದಲ್ಲಿ ಅರಳ ಗುಪ್ಪೆ ಯೋಗೇಶ್ ಹಾಗೂ ಮುಖವೀಣೆಯಲ್ಲಿ ಹೇಮಂತ ಕುಮಾರ್ ಶಿಶುನಾಳ ಸಹಕರಿಸಿದರು.