ಯೋಗ ಆರೋಗ್ಯಕರ ಮನಸ್ಸಿನ ರಹಸ್ಯ : ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ: ಯೋಗವು ಸಂತೋಷದ ಹೆಬ್ಬಾಗಿಲು. ಆರೋಗ್ಯಕರ ಮನಸ್ಸಿನ ರಹಸ್ಯವಾಗಿದೆ. ಆತ್ಮಸ್ಥೈರ್ಯ ವೃದ್ಧಿ, ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯಕ್ಕಾಗಿ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಯೋಗಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಎ.ಪಿ.ಎಮ್.ಸಿ ಯೋಗಾ ಗ್ರೂಪ್ ವತಿಯಿಂದ ಆಯೋಜಿಸಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪತಂಜಲಿ ಮಹಾಮುನಿಗಳಿಂದ ರಚನೆಯಾದ ಜಗತ್ತಿನ ಅತ್ಯುತ್ತಮ ವಿದ್ಯೆ ಎಂದರೆ ಯೋಗಶಾಸ್ತ. ಭಾರತದ ಈ ಪುರಾತನ ವಿದ್ಯೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಗೂ ಜಗತ್ತಿಗೆ ಯೋಗ ದಿನಾಚರಣೆಯನ್ನ ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಯೋಗ ಶಾರೀರಿಕ-ಮಾನಸಿಕ ಸಮತೋಲನಕ್ಕೆ ಉತ್ತಮ ಮಾರ್ಗ ಎಂದರು.
ಇದೇ ಸಂದರ್ಭದಲ್ಲಿ ಬಿ.ಜಿ.ಪಾಟೀಲ, ಡಾ.ಚಿದಾನಂದ ಅರಳಗುಂಡಗಿ, ಮಲ್ಲಿಕಾರ್ಜುನ ವಾರದ, ಬಿ.ಜಿ.ಕಕ್ಕಳಮೇಲಿ, ಸಂಗಮೇಶ ಕುಂಬಾರ, ಸಿದ್ದಣ ಪುಜಾರಿ, ಡಾ.ಪ್ರಕಾಶ ಉಪ್ಪಿನ, ಶಂಕರಗೌಡ ಬನ್ನೆಟ್ಟಿ, ಎಸ್.ಎಮ್.ಯಳಮೇಲಿ, ವಿಜಯಕುಮಾರ ಪತ್ತಾರ, ಹಾಗೂ ಎಪಿಎಮ್‌ಸಿ ಯೋಗ ಗ್ರೂಪ್ ಸದಸ್ಯರು ಇದ್ದರು.