ನಿವೃತ ನೌಕರ ಸಂಘದಿ0ದ ಪ್ರದಾನ ಮಂತ್ರಿಗಳಿಗೆ ಮನವಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಆಲಮೇಲ : ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾದ್ಯವಾಗುವದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಣಯವನ್ನು ಖಂಡಿಸಿ ಆಲಮೇಲ ತಾಲೂಕು ನಿವೃತ ನೌಕರ ಸಂಘ ತಹಶೀಲ್ದಾರ ಮೂಲಕ ಪ್ರದಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಿವೃತ ನೌಕರಾದ ಸಂಘದ ಎನ್.ಎ. ಬಿರಾದಾರ ಮಾತನಾಡಿ ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಸ್ಕರಿಸಲು ಈಗಾಗಲೆ ೮ನೇ ವೇತನ ಆಯೋಗ ರಚನೆ ಮಾಡಿದೆ ಸದರಿ ಆಯೋಗವು ಕಾರ್ಯೋನ್ಮಖವಾಗಿರುತ್ತದೆ, ಇತ್ತಿಚೆಗೆ ಕೇಂದ್ರ ಸರ್ಕಾರವು ೨೦೨೫ ಮಾರ್ಚ ೨೫ ರಂದು ಲೋಕಸಭೆಯಲ್ಲಿ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಂ ಅವರು ಆರ್ಥಿಕ ಬಿಲ್ಲನ್ನು ಮಂಡಿಸುವಾಗ ೨೦೨೬ ಎಪ್ರೀಲ್ ೧ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾದ್ಯವಾಗುವದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದೆ ಇದರಿಂದ ೨೦೨೬ ಎಪ್ರೀಲ್ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಮತ್ತು ಕುಟುಂಬ ಪಿಂಚಣಿದಾರರಗಿಗೆ ಆರ್ಥಿಕ ಸಂಕಷ್ಟಕೋಳಗಾಗುತ್ತಾರೆ. ಇದನ್ನು ಮನಗಂಟು ಇನ್ನೊಮ್ಮೆ ಮರು ಪರಿಶಿಲಿಸಿ ನ್ಯಾಯ ವದಗಿಸಿಕುಡಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಎಸ್ ಎಸ್. ಹಳೆಮನಿ ಮಾತನಾಡಿ ಅಖಿಲ ಭಾರತ ರಾಜ್ಯಗಳ ಪಿಂಚಣಿದಾರರ ಒಕ್ಕೂಟವು ೨೦೨೫ ಮೇ ೨೯ ರಂದು ಬೆಂಗಳೂರು ನಗರದಲ್ಲಿ ನಡೆದ ಕಾರ್ಯಕಾರಿ ಸಮೀತಿಯ ಸಭೆಯಲ್ಲಿ ಕೇಂದ್ರ ಸರ್ಕಾರದ ನಿತಿಯನ್ನು ಖಂಡಿಸಿ ಹೋರಾಟದ ಮೊದಲ ಹೆಜ್ಜೆಯಾಗಿ ಪ್ರಧಾನ ಮಂತ್ರಿಗಳಿಗೆ ಎಲ್ಲಾ ರಾಜ್ಯದ ನಿವೃತ ನೌಕರರು ಸಹಿಯೊಂದಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ನೇರವಾಗಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಅದರಂತೆ ಆಲಮೇಲ ತಾಲೂಕಿನ ನಿವೃತ ಸಂಘದಿAದ ತಹಶೀಲ್ದಾರ ಮೂಲಕ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಜಿ.ಸಿ. ಪಶುಪತಿಮಠ, ಉಪಾಧ್ಯಕ್ಷ ಬಿ.ಬಿ. ಮುಂಡಾಸ, ಬಿ.ಎಸ್. ಶಿರಸಗಿ, ಎಲ್.ಬಿ. ತೆಲ್ಲೂರ, ಎಚ್.ಕೆ. ಮುಲ್ಲಾ ಇದ್ದರು.