ದೇಹದಲ್ಲಿ ಸದೃಢ ಮನಸ್ಸಿಗೆ ಯೋಗ ಮುಖ್ಯವಾದದ್ದು : ಪಿ ರಾಜೀವ್

Jun 22, 2025 - 09:34
 0
ದೇಹದಲ್ಲಿ ಸದೃಢ ಮನಸ್ಸಿಗೆ  ಯೋಗ ಮುಖ್ಯವಾದದ್ದು :  ಪಿ ರಾಜೀವ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಮುಗಳಖೋಡ: ಯೋಗಾಸನದಿಂದ ಸದೃಢ ದೇಹ, ಯೋಗದಿಂದ ಸದೃಢ ಮನಸ್ಸನ್ನು ಪಡೆಯಲು  ಯೋಗ ಪ್ರಾಣಾಯಾಮ ಆಸನಗಳಿಂದ ಮನುಷ್ಯ ಪರಿಪೂರ್ಣರಾಗಲು ಸಾಧ್ಯ,  ಜೋತೆಗೆ ಜೀವನ್ಮುಕ್ತಿ  ಹೊಂದುವನು. ಇಡಿ ಜಗತ್ತಿಗೆ ಯೋಗದಂತ  ಜ್ಞಾನವನ್ನು ನೀಡುವ ಶ್ರೇಷ್ಠ ರಾಷ್ಟ್ರವೇ ಭಾರತ ಎಂದು  ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ ಹೇಳಿದರು.
ಅವರು ಜೂ.21 ಶನಿವಾರದಂದು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆ ಹಾಗೂ ಕೇಂದ್ರ ಆಯುಷ್ಯ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಾರಕಿಹೊಳಿ ಗ್ರಾಮದ ಕೃಪಾನಂದ ಸ್ವಾಮಿಜಿ ಪತಂಜಲಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಯೋಗದ ಮಹತ್ವದ ಕುರಿತು  ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರಮೇಶ ಖೇತಗೌಡರ, ಹಿರಿಯರಾದ  ಬಸಗೌಡ ಖೇತಗೌಡರ,  ಸಿದ್ದು ಮೂಡಲಗಿ, ವಸಂತ ಲಾಳಿ, ಶಿವಾನಂದ ಗೋಕಾಕ, ಬಾಹುಬಲಿ ಬಾಬಣ್ಣವರ, ಮಹಾದೇವ ಶೇಗುಣಸಿ, ಶಿವು ಚೌಗಲಾ  ಕಾಂತು ಬಾಡಗಿ, ಲತಾ ಹುದ್ದಾರ, ಅಣ್ಣ ಪೂರ್ಣ ಯರೆಡತ್ತಿ, ಅಪ್ಪಾಸಾಬ ಖೇತಗೌಡರ, ಮುರೆಪ್ಪ ಶೇಗುಣ ಹಾಗೂ ಸಿಬ್ಬಂದಿ, ಮಕ್ಕಳು, ಯೋಗಾಸಕ್ತರು, ಭಾಗವಹಿಸಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.