ಡಿವೈಎಸ್ಪಿ ಯಲಿಗಾರ, ಸಿಪಿಐ ಯಡನ್ನವರಗೆ ಸನ್ಮಾನ

Jul 12, 2025 - 08:49
 0
ಡಿವೈಎಸ್ಪಿ ಯಲಿಗಾರ, ಸಿಪಿಐ ಯಡನ್ನವರಗೆ ಸನ್ಮಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ


ವಿಜಯಪುರ : ವಿಶ್ವಗುರು ಬಸವಣ್ಣನವರ ವಚನಗಳನ್ನು ಇಂಗ್ಲೀಷಗೆ ಭಾಷಾಂತರಿಸಿದ ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಹಾಗೂ ಪೊಲೀಸ್ ಮಾಹಾನಿರ್ದೇಶಕರಿಂದ ಪ್ರಶಂಸಾ ಪದಕ ಪಡೆದ ಸಿಪಿಐ ರವಿ ಯಡವನ್ನವರ ಅವರನ್ನು ಅಮ್ಮ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯತು.            

ಇತ್ತೀಚೆಗೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಬಸವ ಸಂಸ್ಕೃತಿ ಉತ್ಸವದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಹಾಗೂ ಪೊಲೀಸ್ ಮಾಹಾನಿರ್ದೇಶಕರಿಂದ ಪ್ರಶಂಸಾ ಪದಕ ಪಡೆದ ಸಿಪಿಐ ರವಿ ಯಡವನ್ನವರ ಅವರನ್ನು ವಿಶೇಷ ಸನ್ಮಾನ ಮಾಡಿ ಗೌರವಿಸಲಾಯತು.         

ಈ ಸಂದರ್ಭದಲ್ಲಿ ಆಲಮೇಲ ವೀರಕ್ತಮಠದ ಜಗದೇವ ಮೊಲ್ಲಿಭೋಮ್ಮಯ್ಯ ಸ್ವಾಮೀಜಿ, ಶಾಸಕ ಯಶವಂತರಾಯಗೌಡ ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಮ್ಮ ಫೌಂಡೇಶನ್ ಸಂಚಾಲಕ ಕಬೂಲ್ ಕೊಕಟನೂರ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ ಯು ಐ ಶೇಖ, ಜುಬೇರ ಕೆರೂರ, ಹಣಮಂತ ಕೊಣದಿ ಸೇರಿದಂತೆ ಮತ್ತೀತರರು ಇದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.