ಗಣಿಹಾರ ಗ್ರಾಮದಲ್ಲಿ ಪತ್ನಿ ಕೊಲೆ : ಗಂಡ ಪರಾರಿಯ ಶಂಕೆ

Wife murdered in Ganihara village: Husband suspected of absconding.

Aug 27, 2025 - 10:25
Aug 27, 2025 - 10:37
 0
ಗಣಿಹಾರ ಗ್ರಾಮದಲ್ಲಿ ಪತ್ನಿ ಕೊಲೆ : ಗಂಡ ಪರಾರಿಯ ಶಂಕೆ
ಪತ್ನಿ ಕೊಂದು ಬಾವಿಗೆ ಎಸೆದ ಪತಿ | ರಕ್ತದ ಕಲೆಯಿಂದ ಕೃತ್ಯ ಬಯಲು | ಪರಮಾನಂದನಿಗಾಗಿ ತೀವ್ರ ಶೋಧ |ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಸಿಂದಗಿ: ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಮಂಗಳವಾರ ಭೀಕರ ಘಟನೆ ಸಂಭವಿಸಿದೆ. ಪತಿ ತನ್ನ ಪತ್ನಿಯನ್ನು ಕತ್ತರಿಸಿ ಕೊಲೆ ಮಾಡಿ, ಶವವನ್ನು ಬಾವಿಗೆ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ನೀಲಮ್ಮ ಆನಗೊಂಡ (46) ಮೃತಳು. ಪತಿ ಪರಮಾನಂದ ಆರೋಪಿ.

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು. ಸೋಮವಾರ ರಾತ್ರಿ ಜಗಳದ ವೇಳೆ ಗಂಡನು ನಿನ್ನನ್ನು ಮುಗಿಸೇ ತೀರುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ಮೃತಳ ಪುತ್ರ ಷಣ್ಮುಖ ಪೊಲೀಸ್ ದೂರುನಲ್ಲಿ ತಿಳಿಸಿದ್ದಾರೆ.

ಘಟನೆ ವಿವರ:

ಮಂಗಳವಾರ ರಾತ್ರಿ, ಜಮೀನಿನಲ್ಲಿನ ಮೆಕ್ಕೆಜೋಳ ಬೆಳೆ ಮೇಲೆ ಹಂದಿಗಳ ಹಾವಳಿ ತಡೆಯಲು ನೀಲಮ್ಮ ಪಟಾಕಿ ಸಿಡಿಸಲು ಹೋದ ವೇಳೆ, ಅವಳ ಬೆನ್ನತ್ತಿ ಹೋದ ಪರಮಾನಂದ ಹರಿತವಾದ ಆಯುಧದಿಂದ ಕತ್ತರಿಸಿ, ಶವವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಬೆಳಿಗ್ಗೆ ಮಗ ತಾಯಿಯನ್ನು ಹುಡುಕಲು ಹೋದಾಗ, ಬಾವಿಯ ಬಳಿ ರಕ್ತದ ಗುರುತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದನು. ನಂತರ ಬಾವಿಯಲ್ಲಿ ಶವದ ಅರ್ಧಭಾಗ ಪತ್ತೆಯಾಗಿದ್ದು, ಇನ್ನೂ ಉಳಿದ ಭಾಗಕ್ಕಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ: ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಪರಮಾನಂದನಿಗಾಗಿ ತೀವ್ರ ಶೋಧ ನಡೆಯುತ್ತಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.