ಸಿಂದಗಿಯಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ್, ಶಾಸಕ ಮನಗೂಳಿ
Minister M B Patil, MLA Ashok Managuli inaugurate Swaraj Tractor showroom in Sindagi.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ : ರೈತರ ಕೃಷಿ ಕಾರ್ಯವನ್ನು ಸುಲಭಗೊಳಿಸುವ ಸ್ವರಾಜ್ ಟ್ರ್ಯಾಕ್ಟರ್ ಶೋರೂಮ್‌ನ್ನು ( Swaraj Tractor showroom ) ಭಾನುವಾರ ಸಿಂದಗಿ ನಗರದಲ್ಲಿ ಭವ್ಯವಾಗಿ ಉದ್ಘಾಟಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ (Minister M B Patil ) ಹಾಗೂ ಶಾಸಕ ಅಶೋಕ ಮನಗೂಳಿ (MLA Ashok Managuli ) ಉದ್ಘಾಟಿಸಿದರು.
ಸಾರಂಗಮಠದ ಪೂಜ್ಯ ಶ್ರೀ ಸಾರಂಗದೇವ ಶಿವಾಚಾರ್ಯರು ಹಾಗೂ ಕನ್ನೊಳ್ಳಿಯ ಪೂಜ್ಯ ಶ್ರೀ ಷಡಕ್ಷರಿ ಶ್ರೀ ಶಿದ್ಧಲಿಂಗೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಾದ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, “ಟ್ರ್ಯಾಕ್ಟರ್‌ಗಳು ರೈತರ ಶ್ರಮವನ್ನು ಕಡಿಮೆ ಮಾಡಿ ಹೊಲದ ಕೆಲಸವನ್ನು ವೇಗವಾಗಿ ಹಾಗೂ ಸುಲಭವಾಗಿ ಮಾಡಲು ನೆರವಾಗುತ್ತವೆ. ಜೊತೆಗೆ ರೈತರಿಗೆ ಆರ್ಥಿಕ ಬಲ ನೀಡುತ್ತವೆ” ಎಂದರು.
ಅವರು ಮುಂದುವರಿದು, “ಕಳೆದ 35 ವರ್ಷಗಳಿಂದ ಬಾಬುರಾವ್ ತರಸೆ ಅವರ ಕುಟುಂಬ ಟ್ರ್ಯಾಕ್ಟರ್‌ಗಳ ವ್ಯಾಪಾರ ನಡೆಸುತ್ತಿದೆ. 2013ರವರೆಗೆ ಮಾರಾಟವಾದ ಟ್ರ್ಯಾಕ್ಟರ್‌ಗಳಷ್ಟೇ, 2013ರಿಂದ ನೀರಾವರಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾದ ನಂತರ ಇಂದಿನವರೆಗೂ ಮಾರಾಟವಾಗಿದೆ. ಈ ಯೋಜನೆಗಳು ರೈತರ ಜೀವನಕ್ಕೆ ಬಲ ನೀಡುವುದರ ಜೊತೆಗೆ, ಕೃಷಿ ಉಪಕರಣಗಳ ಮಾರಾಟಗಾರರಿಗೂ ವರದಾನವಾಗಿದೆ” ಎಂದು ಹೇಳಿದರು.
ಶಾಸಕ ಅಶೋಕ ಎಂ. ಮನಗೂಳಿ ಮಾತನಾಡಿ, ರೈತರ ಅಭಿವೃದ್ಧಿಗೆ ಇಂತಹ ಯೋಜನೆಗಳು ಬೆಂಬಲವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶೋರೂಮ್ ಮಾಲೀಕರಾದ ಬಿ.ಟಿ. ತರಸೆ, ಚನ್ನು ವಾರದ, ಸ್ಥಳೀಯ ಗಣ್ಯರು ಹಾಗೂ ಕೃಷಿ ಪ್ರೇಮಿಗಳು ಹಾಜರಿದ್ದರು.