ಭೀಮಾತೀರದಲ್ಲಿ ಗುಂಡಿನ ಸದ್ದು : ಮಹದೇವ ಸಾಹುಕಾರ್ ಭೈರಗೊಂಡ ಆಪ್ತನ ಹತ್ಯೆ
The sound of gunshots in Bhimateer: Mahadev Sahukar's frightened close friend was killed

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
- ದೇವರ ನಿಂಬರಗಿಯಲ್ಲಿ ಗುಂಡಿನ ಸದ್ದು
- ದೇವರ ನಿಂಬರಗಿ ಗ್ರಾ.ಪಂ ಅಧ್ಯಕ್ಷ ಭೀಮನಗೌಡ ಹತ್ಯೆ
- • ಗುಂಡು ಹಾರಿಸಿ ಪರಾರಿಯಾಗಿರೋ ದುಷ್ಕರ್ಮಿಗಳು
• ಭೈರಗೊಂಡನ ಬಲಗೈ ಬಂಟ ಭೀಮನಗೌಡ
• ಮುಸುಕುಧಾರಿಗಳಿಂದ ಕೃತ್ಯ
ವಿಜಯಪುರ . ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಇಂದು ಮುಂಜಾನೆ ಗುಂಡಿನ ಸದ್ದಿಗೆ ಜನ ಬೆಚ್ಚಿಬಿದ್ದಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಮಹಾದೇವ ಭೈರಗೊಂಡ ಪರಮಾಪ್ತ ಭೀಮನಗೌಡ ಬಿರಾದಾರ ಅವರು ಇಂದು ಬೆಳಿಗ್ಗೆ ಪಂಚಾಯಿತಿ ಬಳಿ ಇರುವ ಕ್ಷೌರ (ಕಟಿಂಗ್) ಅಂಗಡಿಗೆ ತೆರಳಿದ ವೇಳೆ, ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಮೊದಲು ಕಣ್ಣಿಗೆ ಖಾರದ ಪುಡಿ ಎರಚಿ, ತಲೆಯ ಭಾಗಕ್ಕೆ ನೇರವಾಗಿ ಗುಂಡು ಹಾರಿಸಿದ್ದಾರೆ. ದಾಳಿ ವೇಳೆ ಸುಮಾರು ನಾಲ್ಕು ಸದ್ದುಗಳು ಕೇಳಿಬಂದಿವೆ.
ಈ ಘಟನೆಯ ನಂತರ ಭೀಮನಗೌಡ ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ. ಆರೋಪಿಗಳು ಘಟನೆ ಬಳಿಕ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಹಳೆಯ ವೈಷಮ್ಯವೇ ಈ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನೆಯ ಮಾಹಿತಿ ತಿಳಿದಂತೆಯೇ ಚಡಚಣ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.