ಜೂ.೨೨ ರಂದು ಹಡಪದ ಅಪ್ಪಣ್ಣ ಶ್ರೀಗಳ ೧೭ನೇ ಪುಣ್ಯಸ್ಮರಣೆ : ಪ್ರತಿಭಾ ಪುರಸ್ಕಾರ

Jun 22, 2025 - 11:15
 0
ಜೂ.೨೨ ರಂದು ಹಡಪದ ಅಪ್ಪಣ್ಣ ಶ್ರೀಗಳ ೧೭ನೇ ಪುಣ್ಯಸ್ಮರಣೆ : ಪ್ರತಿಭಾ ಪುರಸ್ಕಾರ
ಹಡಪದ ಅಪ್ಪಣ್ಣ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಮುದ್ದೇಬಿಹಾಳ : ತಾಲೂಕಿನ ಸುಕ್ಷೇತ್ರ ತಂಗಡಗಿ ಗ್ರಾಮದ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾ ಸಂಸ್ಥಾನ ಮಠದಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸೇವಾ ಸಂಘ ಬೆಂಗಳೂರು, ಜಿಲ್ಲಾ ಸಂಘ, ತಾಲ್ಲೂಕು ಸಂಘ, ಹೋಬಳಿ ಸಂಘ ಹಾಗೂ ಮಹಿಳಾ ಸಂಘ, ರಾಜ್ಯ ನೌಕರರ ಸಂಘದ ಸಹಯೋಗದೊಂದಿಗೆ ಹಡಪದ ಸಮಾಜದ ಪ್ರಥಮ ಜಗದ್ಗುರು ಲಿಂ. ಬಸವಪ್ರಿಯ ಹಡಪದ ಅಪ್ಪಣ್ಣ ಮಹಾಸ್ವಾಮೀಜಿಯವರ ೧೭ನೇ ಪುಣ್ಯ ಸ್ಮರಣೆ ಹಾಗೂ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. ೨೨ರಂದು ಬೆಳಗ್ಗೆ ೧೦-೩೦ಕ್ಕೆ ನಡೆಯಲಿದೆ.


 ಇಳಕಲ್‌ದ ಚಿತ್ತರಗಿ ವಿಜಯ ಮಹಾಂತಮಠದ ಜಗದ್ಗುರು ಗುರುಮಹಾಂತ ಮಹಾಸ್ವಾಮೀಜಿ, ಚಿತ್ರದುರ್ಗದ ಕಾಗಿನೆಲೆ ಮಹಾ ಸಂಸ್ಥಾನ ಮಠದ ಜಗದ್ಗುರು ನಿರಂಜನಾನAದಪುರಿ ಮಹಾಸ್ವಾಮೀಜಿ, ಭಗೀರಥ ಮಹಾ ಸಂಸ್ಥಾನ ಮಠದ ಜಗದ್ಗುರು ಪುರುಷೋತ್ತಮಾನಂದ ಮಹಾಸ್ವಾಮೀಜಿ, ಹೊಸದುರ್ಗ ಕುಂಚಟಗಿ ಮಹಾ ಸಂಸ್ಥಾನ ಮಠದ ಜಗದ್ಗುರು ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮ ಮಹಾಸ್ವಾಮೀಜಿ, ನರಸಿಪುರ ಅಂಬಿಗರ ಚೌಡಯ್ಯ ಮಹಾ ಸಂಸ್ಥಾನ ಮಠದ ಜಗದ್ಗುರು ಶಾಂತಭೀಷ್ಮ ಮಹಾಸ್ವಾಮೀಜಿ,ಚಿತ್ರದುರ್ಗದ ಮಾಚಿದೇವ ಮಹಾ ಸಂಸ್ಥಾನ ಮಠದ ಜಗದ್ಗುರು ಬಸವ ಮಾಚಿದೇವ ಮಹಾಸ್ವಾಮೀಜಿ, ಚಿತ್ರದುರ್ಗದ ಕನಕ ಗುರುಪೀಠದ ಜಗದ್ಗುರು ಈಶ್ವರಾನಂದ ಮಹಾಸ್ವಾಮೀಜಿ, ತೇಲಸಂಗದ ಕುಂಬಾರ ಗುರುಪೀಠದ ಜಗದ್ಗುರು ಬಸವ ಕುಂಬಾರ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು, ಹಡಪದ ಅಪ್ಪಣ್ಣ ದೇವರ ಮಹಾ ಸಂಸ್ಥಾನ ಮಠದ ಜಗದ್ಗುರು ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ನೇತೃತ್ವವಹಿಸುವರು,


ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸುವರು, ಶಾಸಕ ಅಪ್ಪಾಜಿ ನಾಡಗೌಡ ಅಧ್ಯಕ್ಷತೆ ವಹಿಸುವರು, ಸಚಿವರಾದ ಆರ್. ಬಿ. ತಿಮ್ಮಾಪುರ, ಶಿವಾನಂದ ಪಾಟೀಲ ಘನ ಉಪಸ್ಥಿತರಿರುವರು.ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ ಸೇರಿದಂತೆ ರಾಜ್ಯ ಸಭಾ ಸದಸ್ಯರು, ಶಾಸಕರು, ವಿ.ಪ ಸದಸ್ಯರು, ಮಾಜಿ ಶಾಸಕರು, ಮುಖಂಡರು, ಧುರೀಣರು ಉಪಸ್ಥಿತರಿರುವರು, ತಂಗಡಗಿ ಹಡಪದ ಅಪ್ಪಣ್ಣ ಮಹಾ ಸಂಸ್ಥಾನ ಮಠದ ಟ್ರಸ್ಟ್ ನ ಗೌರವಾಧ್ಯಕ್ಷ ಎಂ.ಎಸ್.ನಾವಿ, ಹಂಗಾಮಿ ರಾಜ್ಯಾಧ್ಯಕ್ಷ ಸಿದ್ಧಪ್ಪ ಹಡಪದ, ನೌಕರರ ಸಂಘದ ಪ್ರಕಾಶ ಹಡಪದ ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.