ಸಿಂದಗಿ ಪುರಸಭೆ ಈಗ ನಗರಸಭೆ : ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ನೇತೃತ್ವದಲ್ಲಿ ಸಂಭ್ರಮಾಚರಣೆ

Sindagi Municipality is now a City Council: Celebrations led by Municipal President Dr. Shantaveer Managuli

Sep 4, 2025 - 23:57
Sep 5, 2025 - 08:28
 0
ಸಿಂದಗಿ ಪುರಸಭೆ ಈಗ ನಗರಸಭೆ : ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ನೇತೃತ್ವದಲ್ಲಿ ಸಂಭ್ರಮಾಚರಣೆ


ಸಿ0ದಗಿ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ ಸರ್ಕಾರ | ಮೇಲ್ದರ್ಜೆಗೇರಿಸುವಲ್ಲಿ ಶಾಸಕ ಮನಗೂಳಿ ಯಶಸ್ವಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಸಿಂದಗಿ: ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಶಾಸಕ ಅಶೋಕ ಮನಗೂಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ ಅವರಿಗೆ ಪಟ್ಟಣದ ಜನತೆ ಹಾಗೂ ಪುರಸಭೆಯಿಂದ ಅಭಿನಂದಿಸುವುದಾಗಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಎಮ್ ಮನಗೂಳಿ ಹೇಳಿದರು.

ಸಿಂದಗಿ ಪಟ್ಟಣದ ಮುಖ್ಯ ರಸ್ತೆಯ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭೆಯ ಸದಸ್ಯರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ ಮಾತನಾಡಿದ ಅವರು, ಈ ದಿನ ಸಿಂದಗಿ ಇತಿಹಾಸದಲ್ಲಿ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ದಿನವಾಗಿದೆ. ಶಾಸಕರ ಸತತ ಪರಿಶ್ರಮ, ಹಿತಾಸಕ್ತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಇದುವರೆಗೂ ಪಟ್ಟಣ ಎಂದು ಕರೆಯುತ್ತಿದ್ದ ನಾವು ಇಂದಿನಿ0ದ ಸಿಂದಗಿ ನಗರವಾಗಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ದಿ.ಎಂ.ಸಿ.ಮನಗೂಳಿ ಅವರ ಅದಮ್ಯ ಕನಸಾಗಿತ್ತು. ಕಾರಣಾಂತರಗಳಿ0ದ ಕೈಗೂಡದಿದ್ದರೂ ಈಗ ಅವರ ಪುತ್ರನಿಂದಲೇ ಕನಸು ಈಡೇರಿದ್ದು, ಅದು ನಮ್ಮೆಲ್ಲರಲ್ಲಿ ಸಂತಸ ದ್ವಿಗುಣಗೊಳಿಸಿದೆ. ಇದಕ್ಕೂ ಪೂರ್ವ ನಡೆದ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆಗೊಂಡ ನಗರಸಭೆಯ ಪಟ್ಟಿಯಲ್ಲಿ ಸಿಂದಗಿಯ ಹೆಸರು ಇರದೇ ಇದ್ದದ್ದು ನಿರಾಸೆ ಉಂಟುಮಾಡಿತ್ತು. ಆದರೆ ಛಲದಂಕ ಮಲ್ಲ ಶಾಸಕ ಅಶೋಕ ಎಮ್ ಮನಗೂಳಿ ಅವರು ಸರ್ಕಾರದ ಗಮನ ಸೆಳೆದು, ನಗರಸಭೆಯಾಗಿ ಮೇಲ್ದರ್ಜೆಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸAಭ್ರಮಾಚರಣೆಯಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಸದಸ್ಯರಾದ ಬಾಷಾಸಾಬ ತಾಂಬೊಳಿ, ಬಸವರಾಜ ಯರನಾಳ, ಭೀಮು ಕಲಾಲ, ಗೊಲ್ಲಾಳ ಬಂಕಲಗಿ, ಮುಖ್ಯಾಧಿಕಾರಿ ಎಸ.ರಾಜಶೇಖರ, ಸಿದ್ದು ಅಂಗಡಿ, ದಯಾನಂದ ಇವಣಿ, ಮುತ್ತು ಪಟ್ಟಣಶೆಟ್ಟಿ, ಬಸವರಾಜ ಸಜ್ಜನ, ಶರಣಪ್ಪ ಸುಲ್ಪಿ, ರಜತ ತಾಂಬೆ, ಮೋಶಿನ ಬೀಳಗಿ, ಸುನಂದಾ ಯಂಪುರೆ, ಅಬ್ಬಾಸಲಿ ಕಾಕಂಡಕಿ ಸೇರಿದಂತೆ ಪುರಸಭೆ ಅಧಿಕಾರಿಗಳು, ಪೌರ ಕಾರ್ಮಿಕರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.