ತಪ್ಪಿದ ಭಾರೀ ಅನಾಹುತ : ಸೇತುವೆ ತಡೆಗೋಡೆಗೆ ಸಿಮೇಂಟ್ ತುಂಬಿದ್ದ ಕ್ಯಾಂಟರ್ ಡಿಕ್ಕಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುದ್ದೇಬಿಹಾಳ : ಸಿಮೇಂಟ್ ತುಂಬಿದ್ದ ಕ್ಯಾಂಟರ್ ಲಾರಿಯೊಂದು ಸೇತುವೆಯ ತಡೆಗೋಡೆಗೆ ಅಪ್ಪಳಿಸಿದ್ದು ಸೇತುವೆಯಲ್ಲಿ ಬೀಳುವುದರಿಂದ ಸ್ವಲ್ಪರದಲ್ಲೇ ಬಚಾವಾದ ಘಟನೆ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಇಳಿಜಾರಿನ ಸೇತುವೆಯ ಹತ್ತಿರ ಶನಿವಾರ ನಡೆದಿದೆ.
ತಾಲ್ಲೂಕಿನ ಅಮರಗೋಳದ ಸಿದ್ದಲಿಂಗಪ್ಪ ಡೊಳ್ಳಿ ಎಂಬುವರಿಗೆ ಸೇರಿದ್ದ ಕ್ಯಾಂಟರ್ ಚೆಟ್ಟಿನಾಡ್‌ದಿಂದ ಸಿಮೇಂಟ್ ಹೇರಿಕೊಂಡು ಶಿವಮೊಗ್ಗದತ್ತ ತೆರಳುತ್ತಿತ್ತು.ಮಧ್ಯರಾತ್ರಿ ಚಾಲಕ ಮದ್ಯದ ಅಮಲಿನಲ್ಲಿ ವಾಹನವನ್ನು ಸೇತುವೆಯ ಪಕ್ಕಕ್ಕೆ ಚಲಾಯಿಸಿದ ಕಾರಣ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಆದರೆ ಘಟನೆಯಲ್ಲಿ ಪ್ರಾಣಾಪಾಯವಾಗಿಲ್ಲ.ಕ್ಯಾಂಟರ್ ಮುಂದಿನ ಭಾಗ ಜಖಂಗೊAಡಿದೆ.ಕಾಲುವೆಯಲ್ಲಿ ನೀರು ಇಲ್ಲದ್ದು ಸಂಭವನೀಯ ಬಹುದೊಡ್ಡ ದುರಂತವೊAದು ತಪ್ಪಿದೆ.ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.