ಬೂತ್ ಲೆವೆಲ್ ಎಜೆಂಟ್‌ರನ್ನು ನೇಮಿಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯ

Jun 20, 2025 - 23:42
 0
ಬೂತ್ ಲೆವೆಲ್ ಎಜೆಂಟ್‌ರನ್ನು ನೇಮಿಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯ
ಕಲಬುರಗಿ:  ಮತದಾನದಿಂದ ಯಾರು ವಂಚತರಾಗಬಾರದು ಎಂಬ ಉದ್ದೇಶದಿಂದ ಭಾರತದ ಚುನಾವಣಾ ಆಯೋಗವು ನೀಡಿದಂತಹ ನಿರ್ದೇಶನದ ಮೇರೆಗೆ ಕಲಬುರಗಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳ ಮತಗಟ್ಟೆಗಳ ಕೇಂದ್ರಗಳಲ್ಲಿ ಬೂತ್ ಲೆವೆಲ್ ಏಜೆಂಟ್‌ರನ್ನು ನೇಮಿಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ  ಬಹಳಷ್ಟು ಮುಖ್ಯವಿದೆ ಎಂದು  ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
   
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ವಿಧಾನಸಭಾ ಮತಕ್ಷೇತ್ರಗಳ ಮತಗಟ್ಟೆಗಳ ಕೇಂದ್ರಗಳಲ್ಲಿ ಬೂತ್ ಲೆವೆಲ್ ಏಜೆಂಟ್‌ರನ್ನು ನೇಮಿಸುವ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಹೊಸ ಬಿಎಲ್‌ಓ ಗಳನ್ನು  ನೇಮಿಸಿದ ನಂತರ ಅವರಿಗೆ ಐ.ಡಿ ಕಾರ್ಡನ್ನು ನೀಡಲಾಗವುದು ಎಂದರು.
ಕಲಬುರಗಿಯಲ್ಲಿ ೨೪೦೦ ಬೂತ್‌ಗಳಿದ್ದು. ಎಲ್ಲಾ ಕಡೆಗೂ ಬೂತ್ ಲೇವಲ್ ಏಜೆಂಟರನ್ನು ನೇಮಿಸಿ ಚುನಾವಣೆಗಳು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆಗಳು ನಡೆಸಲು ಚುನಾವಣಾ ಆಯೋಗವು    ಹಲವಾರು ನಿರ್ದೇಶನ ನೀಡಿದೆ ಎಂದರು.
ಬೂತ್ ಮಟ್ಟದ ಏಜಂಟ್‌ಗಳ ಛಾಯಾಚಿತ್ರ ಮತ್ತು ಮೊಬೈಲ್ ಸಂಖ್ಯೆಯನ್ನು ಸೇರಿಸಲು ಚುನಾವಣಾ ಆಯೋಗವು ಫಾರ್ಮ್ ಬಿಎಲ್‌ಎ-೨ ಅನ್ನು ಮಾರ್ಪಡಿಸಲಾಗಿದೆ. ಮತ್ತು ಭವಿಷ್ಯದಲ್ಲಿ ಬಿಎಲ್‌ಓಗಳ ನೇಮಕಾತಿಗೆ ಮಾಹಿತಿಯನ್ನು ಪಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಬೂತ್ ಏಜಂಟ್‌ರನ್ನು ನೇಮಿಸಲು ಸಹಕಾರ ನೀಡಬೇಕೆಂದು ಹೇಳಿದರು.
ಬಿಎಲ್‌ಓ ಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಜೂನ್ ೨೦೨೫ ರೊಳಗಾಗಿ ಕಳುಹಿಸಬೇಕಾದ ಕಾರಣ  ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಸಹಕಾರ ನೀಡಬೇಕೆಂದು ಹೇಳಿದರು.
  ಈ ಸಭೆಯಲ್ಲಿ ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಅಧ್ಯಕ್ಷರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.