ಮಹಾನಟಿಯಲ್ಲಿ ಮಿಂಚುತ್ತಿರುವ ಕುಂದಾನಗರಿಯ ಪ್ರತಿಭಾನ್ವಿತೆ ವರ್ಷಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ರಿಯಾಲಿಟಿ ಶೋ ನಲ್ಲಿ ಉತ್ತರ ಕರ್ನಾಟಕದ ಕುಂದಾನಗರಿ ಪ್ರತಿಭಾನ್ವಿತೆಯೊಬ್ಬರು ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

Jun 23, 2025 - 22:40
Jun 23, 2025 - 22:56
 0
ಮಹಾನಟಿಯಲ್ಲಿ ಮಿಂಚುತ್ತಿರುವ ಕುಂದಾನಗರಿಯ ಪ್ರತಿಭಾನ್ವಿತೆ ವರ್ಷಾ
ಮಹಾನಟಿ ರಿಯಾಲಿಟಿ ಶೋನಲ್ಲಿ ವರ್ಷಾ ಡಿಗ್ರಜೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ವಿಶ್ವಪ್ರಕಾಶ ಟಿ ಮಲಗೊಂಡ 
vishwaprakashmalagond@gmail.com
ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಛಲಗಾರ್ತಿ | ಈಕೆ ಕಿರುತೆರೆಯ ಚಾಲೆಂಜಿ0ಗ್ ಸ್ಟಾರ್ | ಕುಂದಾನಗರಿ ಬೆಡಗಿಗೆ ಅಭಿನಂದನೆಗಳ ಸುರಿಮಳೆ | ಬೆಳಗಾವಿ ಟು ಬೆಂಗಳೂರು ಜರ್ನಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ರಿಯಾಲಿಟಿ ಶೋ ನಲ್ಲಿ ಉತ್ತರ ಕರ್ನಾಟಕದ ಕುಂದಾನಗರಿ ಪ್ರತಿಭಾನ್ವಿತೆಯೊಬ್ಬರು ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಹೌದು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಛಲಗಾರ್ತಿ ವರ್ಷಾ ಡಿಗ್ರಜೆ. ಬಾಲ್ಯದಲ್ಲಿ ಆತ್ಮಹತ್ಯೆ ಯತ್ನದಿಂದ ಹಿಡಿದು, ಜಿಂದಾಲ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ, ಈಗ 'ಮಹಾನಟಿ' ಸ್ಪರ್ಧಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಅವರ ಅದ್ಭುತ ಪಯಣದ ಬಗ್ಗೆ ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆಯಲ್ಲಿ ವಿಶೇಷ ಲೇಖನ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಎಲ್ಲಿ ನೋಡಿದರು ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಅಚ್ಚರಿ ಎನಿಸಿದರೂ ಸತ್ಯವಾದ ಮಾತು. ಎಷ್ಟೋ ಜನ ಈ ರೀಲ್ಸ್ ದಿಂದ ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ. ಎಷ್ಟೋ ಜನ ಈ ರೀಲ್ಸ್ ದಿಂದ ಉದ್ದಾರ ಸಹ ಆಗಿದ್ದಾರೆ.
ಉತ್ತರ ಕರ್ನಾಟಕದವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತಿಗೆ ಈ ಭಾಗದ ಪ್ರತಿಭೆಗಳು ಹೊಸದೊಂದು ವೇದಿಕೆ ಕಂಡುಕೊAಡಿದ್ದು ಇನ್ಸ್ಟಾಗ್ರಾಮ. ಇಂದು ನಾವು ಹೇಳುತ್ತಿರುವುದು ವಿಶಿಷ್ಟ ಪ್ರತಿಭೆಯ ಬಗ್ಗೆ. ಹೌದು ಈಕೆ ನಟನೆಗೂ ಸೈ, ನೃತ್ಯಕ್ಕೂ ಸೈ, ನಿರೂಪಣೆಗೂ ಸೈ, ಕ್ರೀಡಾ ವಿಭಾಗದಲ್ಲಿಯೂ ಸೈ.

ಈಕೆಯ ಹೆಸರು ವರ್ಷಾ ಡಿಗ್ರಜೆ. ಮೂಲತಃ ಕುಂದಾನಗರಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ದೇಸಾಯಿ ಇಂಗಳಗಿ ಗ್ರಾಮದವರು. ತಂದೆ ಮಹಾಬಲ್ಲ, ತಾಯಿ ಸೂರ್ಯಕಾಂತಿ, ಮೂಲತಃ ಒಕ್ಕಲುತನ ಕುಟುಂಬದಲ್ಲಿ ಬೆಳೆದ ಈಕೆ ಇಂದು ಇಂಜಿನೀಯರ್ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿರಗುಪ್ಪಿಯಲ್ಲಿ, ಪದವಿ ಪೂರ್ವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ, ಇಂಜಿನಿಯರಿ0ಗ್ ಓದಿದ್ದು ಮೈಸೂರಿನಲ್ಲಿ. ವಿಶೇಷ ಏನೆಂದರೆ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಟಾಪರ್ ಸಹ ಬಂದಿದ್ದರು. ಒಕ್ಕಲುತನ ಕುಟುಂಬದಲ್ಲಿ ಬೆಳೆದರು ತನ್ನ ಪ್ರತೀಭೆಗೆ ಗುರುತಿಸಿಕೊಂಡಿದ್ದಾರೆ.
  ನಂತರ ಹೊರ ರಾಜ್ಯವಾದ ಒಡಿಶಾದಲ್ಲಿ ಒಂದು ವರ್ಷಗಳ ಇಂಜಿನೀಯರ್ ಯಾಗಿ ಕಾರ್ಯ ನಿರ್ವಹಿಸುತ್ತಾರೆ. ಓಡಿಶಾದಿಂದ ಬಳ್ಳಾರಿಗೆ ವರ್ಗಾವಣೆ ತೆಗೆದುಕೊಂಡು ಬಂದು ಸದ್ಯ ಬಳ್ಳಾರಿಯಲ್ಲಿ ಅಸಿಸ್ಟೆಂಟ್ ಇಂಜಿನೀಯರ್ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರ್ಷ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಸಿನಿಮಾ ನಂಟು ಚಿಕ್ಕ ವಯಸ್ಸಿನಿಂದಲೇ ಬಂದಿದೆ. ತಾವು ಚಿಕ್ಕವರಿದ್ದಾಗ ಶಾಲಾ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ, ನೃತ್ಯ, ಎಲ್ಲವೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಂಗಭೂಮಿ ತಂಡ ಸೇರಿ ಮೂರ್ನಾಲ್ಕು ನಾಟಕದಲ್ಲಿ ಅಭಿನಯಿಸಿದ್ದಾರೆ. ಎಂಟು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ಐದು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಂಚೆಗೆ ಹೋಗದ ಪತ್ರ, ಸ್ಟಾರ್, ಇತ್ತಿಚೆಗೆ ಬಿಡುಗಡೆಯಾದ ಸುಂದ್ರ ಚಿತ್ರದಲ್ಲಿ ಅಭಿನಯ ಮಾಡಿ ತಾನು ಒಳ್ಳೆಯ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಹೌದು ವರ್ಷಾ ಕೇವಲ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ರೀಲ್ಸ್ ಸಹ ಮಾಡುತ್ತಾರೆ. ಉತ್ತರಕರ್ನಾಟಕದ ಹುಡ್ಗಿ, ಮಂಗಳೂರು ಹುಡ್ಗ ಎನ್ನುವ ಶಿರ್ಷಿಕೆಯ ರೀಲ್ಸ್ ಗಳು ಹಾಗೂ ಆರ್ ಸಿ ಬಿ ಮ್ಯಾಚ್ ಸಂದರ್ಭದಲ್ಲಿ ಈಕೆ ನೀಡಿದ ಹೇಳಿಕೆಯ ವಿಡಿಯೋ ತುಂಬಾ ವೈರಲ್ ಅಗಿವೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆದಾರರು ವರ್ಷಾ ಅವರನ್ನು  ನೋಡಿಲ್ಲದೇ ಇರಲು ಸಾಧ್ಯವಿಲ್ಲ. ಅಷ್ಟು ಫೇಮಸ್ ಆಗಿರುವ ಇವರು ಸಾಮಾಜಿಕ ಜಾಲತಾಣದಲ್ಲಿ  ಅಗ್ರಸ್ಥಾನದಲ್ಲಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಷೆ ಎಂದರೆ ಅಲ್ಲಿ ತನ್ನದೇಯಾದ ಟ್ರೇಂಡ್ ಇದ್ದೇ ಇರುತ್ತದೆ. ಹೀಗಾಗಿಯೇ ಇವರ ವಿಡಿಯೋಗಳು ತುಂಬಾನೇ ವೈರಲ್ ಆಗ್ತಿದೆ.
 
ಮಹಾನಟಿಯಲ್ಲಿ ಈಗಾಗಲೇ ತನ್ನದೇಯಾದ ಅಭಿನಯದ ಮೂಲಕ ಗುರುತಿಸಿಕೊಂಡ ವರ್ಷಾ ಧಾರಾವಾಹಿಗಳ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ನಾನು ನಿಭಾಯಿಸುತ್ತೇನೆ. ಈಗಾಗಲೇ ಹಲವಾರು ಧಾರಾವಾಹಿಗಳಿಗೆ ಆಡಿಷನ್ ನೀಡಿ ಲುಕ್ ಟೆಸ್ಟ್ ಕೂಡ ಮಾಡಿದ್ದಾರೆ. ಆದರೆ ಹೊಸ ಹೊಸ ಪಾತ್ರಗಳಲ್ಲಿ ಅಭಿನಯಿಸಬೇಕು ಎನ್ನುವುದು ನನ್ನ ಮಹದಾಸೆ. ಹೀಗಾಗಿ ನಾನು ಧಾರಾವಾಹಿಗಳಲ್ಲಿ ಅಭಿನಯಿಸಲು ಕಾಯುತ್ತಿದ್ದೇನೆ ಎನ್ನುತ್ತಾರೆ.
ಮಹಾನಟಿ ಸ್ಪರ್ಧಿ ವರ್ಷಾಗೆ  ಬಿರುದು ನೀಡಿದ ಆಂಕರ್ ಅನುಶ್ರೀ  ;
 ಚಿಕ್ಕೋಡಿಯ ವರ್ಷಾ ಡಿಗ್ರಜೆ ಮಹಾನಟಿ ರಿಯಾಲಿಟಿ ಶೋನಲ್ಲಿ ಆಯ್ಕೆಯಾಗಿ ಗೋಲ್ಡನ್ ಟಿಕೆಟ್ ಪಡೆದಿದ್ದಾರೆ. ಓದು ಮುಗಿಸಿ ಸಾಲ ತೀರಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟ ವರ್ಷಾ ಅವರಿಗೆ ನಿರೂಪಕಿ ಅನುಶ್ರೀ ಬಿರುದು ನೀಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶನಿವಾರದಿಂದ ಮಹಾನಟಿ ಸೀಸನ್ ೨ ರಿಯಾಲಿಟಿ ಶೋ ಆರಂಭಗೊ0ಡಿದ್ದು,  ಮೊದಲ ದಿನವೇ ಸ್ಪರ್ಧಿಯೊಬ್ಬರಿಗೆ ವಿಶೇಷ ಬಿರುದು ನೀಡಲಾಗಿದೆ. ನಿರೂಪಕಿ ಅನುಶ್ರೀ ಎಲ್ಲರ ಅನುಮತಿ ಪಡೆದು ಈ ಬಿರುದು ನೀಡಿದ್ದಾರೆ.
ಚಿಕ್ಕೋಡಿಯ ವರ್ಷಾ ಡಿಗ್ರಜೆ ಶೋಗೆ ಸೆಲೆಕ್ಟ್ ಬಳಿಕ ತಮ್ಮ ಕುರಿತ ಹಲವು ವಿಷಯಗಳನ್ನು ಹಂಚಿಕೊ0ಡರು. ತಮ್ಮ ಮನೆಯಲ್ಲಿ ಓದಿದವಳು ಮೊದಲಿಗಳು ನಾನೇ, ಓದಬೇಕೆಂಬ ಛಲದಿಂದ ಸಾಲ ಪಡೆದುಕೊಂಡಿದ್ದರು. ಇದೀಗ ಎಲ್ಲಾ ಸಾಲ ಪಾವತಿಸಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ತಮ್ಮ ಕಷ್ಟದ ಜೀವನದ ಬಗ್ಗೆ ವರ್ಷಾ ಮಾತಾಡಿದ್ದಾರೆ. ವರ್ಷಾ ಡಿಗ್ರಜೆ ಮಾತುಗಳನ್ನು ಕೇಳಿದ ಶೋ ನಿರೂಪಕಿ ಅನುಶ್ರೀ ವಿಶೇಷ ಬಿರುದನ್ನು ಎಲ್ಲರ ಸಮ್ಮುಖದಲ್ಲಿ ನೀಡಿದರು. ನಿಮ್ಮ ಜೀವನ ಬಹುತೇಕರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರು.
ಚಂದನವನದ ನಟ-ನಟಿಯರಿಗೆ ಅಭಿಮಾನಿಗಳು ವಿಶೇಷ ಬಿರುದು ನೀಡುತ್ತಾರೆ. ಇದೀಗ ಸ್ಪರ್ಧಿ ವರ್ಷಾ ಡಿಗ್ರಜೆ ಮೊದಲ ನಟನೆಯಲ್ಲಿ ವಿಶೇಷ ಬಿರುದು ತಮ್ಮದಾಗಿಸಿಕೊಂಡಿದ್ದಾರೆ. ಚ0ದನವನದ ನಟ ದರ್ಶನ್ ಅವರನ್ನು ಅಭಿಮಾನಿಗಳು ಚಾಲೆಂಜಿ0ಗ್ ಸ್ಟಾರ್ ಎಂದು ಕರೆಯುತ್ತಾರೆ. ದರ್ಶನ್ ಹಿರಿತೆರೆಗೆ ಚಾಲೆಂಜಿ0ಗ್ ಸ್ಟಾರ್ ಆದ್ರೆ, ನಮ್ಮ ಸ್ಪರ್ಧಿ ವರ್ಷಾ ಡಿಗ್ರಜೆ ಕಿರುತೆರೆಗೆ ಚಾಲೆಂಜಿ0ಗ್ ಸ್ಟಾರ್ ಎಂದು ಅನುಶ್ರೀ ಘೋಷಿಸಿದರು. ಈ ವೇಳೆ ದರ್ಶನ್ ಅಭಿಮಾನಿಗಳ ಒಪ್ಪಿಗೆ ಕೇಳಿಕೊಂಡು ಈ ಬಿರುದು ನೀಡಿದರು.
ಹಿರಿಯ ನಟಿ ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದಾರೆ. ನಟ ರಮೇಶ್ ಅರವಿಂದ್ ಶೋನ ಮಾಸ್ಟರ್ ಮೈಂಡ್ ಆಗಿದ್ದಾರೆ. 
ಇದೀಗ ಜೀ ಕನ್ನಡ ಮಹಾನಟಿ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಮೂಲಕ ದೊಡ್ಡ ವೇದಿಕೆಯಲ್ಲಿ ತನ್ನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಪಡೆದಿದ್ದಾರೆ. ಯಾರು ಹೆಂಗೆ ಸತ್ರೆ ನಂಗೆ ಏನು ನಾನು ಚೆನ್ನಾಗಿ ಇರ್ಬೇಕು. ಅಂತ ಹೇಳೋ ಈ ಕಾಲದಲ್ಲಿ ತನ್ನ ತಂದೆ ತಾಯಿ ಚೆನ್ನಾಗಿ ನೋಡ್ಕೋಬೇಕು ಅಂತ ಹೇಳೋ ಈ ಹುಡುಗಿ ನಿಜವಾಗ್ಲೂ ಚಾಲೆಂಜಿ0ಗ್ ಸ್ಟಾರ್ ನೆ. 
ನಮ್ಮ ಸ್ಕೂಲಿನಲ್ಲಿ ಕಲಿತ ಹುಡುಗಿ ಗೆದ್ದು ಬಾ ಬೆಡಗಿ ಎನ್ನುತ್ತಿರುವ ಯುವಕರು ಕಾಮೆಂಟ್ಸ್ ನೋಡುತ್ತಿದ್ದರೆ ನಿಜವಾಗಿಯೂ ಈಕೆ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಉತ್ತರ ಕರ್ನಾಟಕದ ಭರವಸೆಯ ನಟಿ ವರ್ಷಾ ಡಿಗ್ರಜೆ ಕರ್ನಾಟಕದ ಮಹಾನಟಿಯಾಗಲಿ. ಅವರಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರಲಿ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರು ಛಾಪು ಮೂಡಲಿ ಎಂದು ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಬಳಗದಿಂದ ಶುಭ ಹಾರೈಕೆಗಳು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.